ನೀತಿ ಆಯೋಗದ ಉಪಾಧ್ಯಕ್ಷರಾಗಿ ರಾಜೀವ್ ಕುಮಾರ್ ನೇಮಕ |News Mirchi

ನೀತಿ ಆಯೋಗದ ಉಪಾಧ್ಯಕ್ಷರಾಗಿ ರಾಜೀವ್ ಕುಮಾರ್ ನೇಮಕ

ಐದು ದಿನಗಳ ಹಿಂದೆ ಅರವಿಂದ್ ಪನಗರಿಯಾ ಅವರು ರಾಜೀನಾಮೆ ನೀಡಿದ ನೀತಿ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ಪ್ರಸಿದ್ಧ ಅರ್ಥಶಾಸ್ತ್ರಜ್ಞ ರಾಜೀವ್ ಕುಮಾರ್ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಅವಧಿಗಿಂತ ಮುಂಚೆಯೇ ರಾಜೀನಾಮೆ ನೀಡಿದ್ದ ಅರವಿಂದ್ ಪನಗರಿಯಾ ಅವರು, ಬೋಧನಾ ವೃತ್ತಿಗೆ ಮರಳುವುದಾಗಿ ಹೇಳಿದ್ದರು. ಇದರ ಜೊತೆಗೆ ಏಮ್ಸ್ ನಲ್ಲಿ ಶಿಶು ತಜ್ಞರಾಗಿರುವ ವಿನೋದ್ ಪೌಲ್ ಅವರನ್ನು ನೀತಿ ಆಯೋಗದ ಸದಸ್ಯರನ್ನಾಗಿ ಸರ್ಕಾರ ನೇಮಕ ಮಾಡಿದೆ.

ರಾಜೀವ್ ಕುಮಾರ್ ಅವರು ಆಕ್ಸಫರ್ಡ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಡಿಫಿಲ್ ಮತ್ತು ಲಕ್ನೋ ಯೂನಿವರ್ಸಿಟಿಯಿಂದ ಪಿಹೆಚ್ಡಿ ಪಡೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಎದುರಿಸಿದ ಸವಾಗಲುಗಳ ಕುರಿತು ಪುಸ್ತಕವೊಂದನ್ನೂ ರಾಜೀವ್ ಕುಮಾರ್ ಬರೆದಿದ್ದಾರೆ.

  • No items.

Loading...
loading...
error: Content is protected !!