ದಿನಕರನ್ ಗೆ ಮತ್ತೊಂದು ಸಂಕಷ್ಟ |News Mirchi

ದಿನಕರನ್ ಗೆ ಮತ್ತೊಂದು ಸಂಕಷ್ಟ

ಚೆನ್ನೈ: ಅಣ್ಣಾಡಿಎಂಕೆ ಅಧಿಕೃತ ಚುನಾವಣಾ ಚಿಹ್ನೆಗಾಗಿ ಚುನಾವಣಾ ಆಯೋಗದ ಅಧಿಕಾರಿಗಳಿಗೇ ಲಂಚದ ಆಮಿಷವೊಡ್ಡಿ ಪ್ರಕರಣದ ತನಿಖೆ ಎದುರಿಸುತ್ತಿದ್ದಾರೆ ಆ ಪಕ್ಷದ ಉಪ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್. ಈಗ ದಿನಕರನ್ ಗೆ ಮತ್ತೊಂದು ಶಾಕ್ ಎದುರಾಗಿದೆ. 2001ರಲ್ಲಿ ಜಾರಿ ನಿರ್ದೇಶನಾಲಯ ದಾಖಲಿಸಿಕೊಂಡಿದ್ದ ಪ್ರಕರಣದಲ್ಲಿ ಅವರ ಮೇಲೆ ಎಗ್ಮೂರು ಹೆಚ್ಚುವರಿ ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಆರೋಪಗಳನ್ನು ಅಂತಿಮಗೊಳಿಸಿದೆ. ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡಿತ್ತು.

ಈ ಪ್ರಕರಣದ ವಿಚಾರಣೆಗೆ ಗುರುವಾರ ವೈಯುಕ್ತಿಕವಾಗಿ ಹಾಜರಾದ ದಿನಕರನ್, ನ್ಯಾಯಾಧೀಶರೆದುರು ತಮ್ಮ ಮೇಲಿನ ಆರೋಪಗಳನ್ನು ಅಲ್ಲಗೆಳೆದರು. ಆರ್.ಬಿ.ಐ ಅನುಮತಿಯಿಲ್ಲದೆ ಒಂದು ಕೋಟಿ, ನಲವತ್ತು ಲಕ್ಷದ 93 ಸಾವಿರದ 313 ಡಾಲರ್ ಗಳಷ್ಟು ಅಕ್ರಮ ಲಾವಾದೇವಿ ನಡೆಸಿ, ಬ್ರಿಟೀಶ್ ವರ್ಜಿನ್ ಐಲ್ಯಾಂಡ್ ನ ಡಿಪ್ಪರ್ ಇನ್ವೆಸ್ಟ್ ಮೆಂಟ್ ಲಿಮಿಟೆಡ್ ಗೆ ವರ್ಗಾವಣೆ ಮಾಡಿರುವುದಾಗಿ ಇಡಿ ಪ್ರಕರಣ ದಾಖಲಿಸಿಕೊಂಡಿದೆ. 36 ಲಕ್ಷದ 36 ಸಾವಿರ ಡಾಲರ್ ಗಳು, ಒಂದು ಲಕ್ಷ ಪೌಂಡ್ ಗಳಷ್ಟು ಅಕ್ರಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಇಡಿ ಮತ್ತೊಂದು ಪ್ರಕರಣವನ್ನೂ ದಾಖಲಿಸಿಕೊಂಡಿದೆ. ಈ ಎರಡೂ ಪ್ರಕರಣಗಳ ವಿಚಾರಣೆಯನ್ನು ನ್ಯಾಯಾಲಯ ಜೂನ್ 22 ರ ವರೆಗೆ ಮುಂದೂಡಿದೆ.

Loading...
loading...
error: Content is protected !!