ಕಾರಾಗೃಹದಲ್ಲಿ ಲಂಚ ಆರೋಪ: 40 ಖೈದಿಗಳು ಬಳ್ಳಾರಿ ಜೈಲಿಗೆ ವರ್ಗಾವಣೆ

ಬೆಂಗಳೂರು: ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸುಮಾರು 40 ಖೈದಿಗಳನ್ನು ಕೇಂದ್ರ ಕಾರಾಗೃಹದಿಂದ ಬಳ್ಳಾರಿ ಜೈಲಿಗೆ ವರ್ಗಾಯಿಸಲಾಗಿದೆ. ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಡಿಐಜಿ ರೂಪಾ ಅವರು ಹಿರಿಯ ಅಧಿಕಾರಿಯವ ವಿರುದ್ಧವೇ ನೇರ ಆರೋಪ ಮಾಡಿದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದರು.

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಶಶಿಕಲಾ ಊಟ ತಿಂಡಿ ತಯಾರಿಸಲು ಜೈಲಿನಲ್ಲಿಯೇ ವಿಶೇಷ ಅಡುಗೆ ಕೋಣೆ ನಿರ್ಮಿಸಲಾಗಿದೆ, ಸಂದರ್ಶನದ ಸಮಯಗಳಲ್ಲಿ ವಿನಾಯಿತಿ ನೀಡಲಾಗಿದೆ ಇದಕ್ಕಾಗಿ 2 ಕೋಟಿ ಲಂಚ ಪಡೆದಿರುವ ಮಾತು ಕೇಳಿ ಬರುತ್ತಿದೆ, ಜೈಲಿನಲ್ಲಿ ಅಕ್ರಮಗಳು ನಡೆಯುತ್ತಿರುವುದು ತಿಳಿದೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹಿರಿಯ ಅಧಿಕಾರಿಯ ವಿರುದ್ಧ ಡಿಐಜಿ ರೂಪಾ ಅವರು ಆರೋಪ ಮಾಡಿ ವರದಿ ಸಲ್ಲಿಸಿದ್ದರು.

ಮನೆಗಿಂತ ಜೈಲೇ ವಾಸಿ ಎನ್ನುವ ಭಾವನೆ ಬಂದರೂ ಅಚ್ಚರಿ ಬೇಡ: ಅಶೋಕ್

ರೂಪಾ ಅವರು ಮಾಡಿದ್ದು ಇದೊಂದೇ ಆರೋಪ ಅಲ್ಲ, ಬಹುಕೋಟಿ ಛಾಪಾ ಕಾಗದ ಹಗರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಅಬ್ದುಲ್ ಕರೀಂ ತೆಲಗಿಗೆ ನಿಯಮ ಉಲ್ಲಂಘಿಸಿ ವಿಚಾರಣಾಧೀನ ಖೈದಿಗಳನ್ನು ಮೈಕೈ ಒತ್ತಲು ಸಹಾಯಕರನ್ನಾಗಿ ನೀಡಲಾಗಿದೆ, ಜೈಲಿನಲ್ಲಿ ಎಗ್ಗಿಲ್ಲದೆ ಡ್ರಗ್ಸ್ ಹರಿದಾಡುತ್ತಿದೆ ಎಂದು ರೂಪಾ ಗಂಭೀರ ಆರೋಪ ಮಾಡಿದ್ದರು.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಲೆಕ್ಷನ್ ಗೆ ನಿಂತಿರುವುದು ಪ್ರತಿಭಾ ಹಂತಕ!