ಫೇಸ್ಬುಕ್ಕಿಗೆ ತಲೆನೋವಾದ ಚಾಟ್ ಬಾಟ್ಸ್ ನ ಹೊಸ ಭಾಷೆ! |News Mirchi

ಫೇಸ್ಬುಕ್ಕಿಗೆ ತಲೆನೋವಾದ ಚಾಟ್ ಬಾಟ್ಸ್ ನ ಹೊಸ ಭಾಷೆ!

ನಾವು ಯಾವುದಾದರೂ ವಸ್ತು ಖರೀದಿಸುವಾಗ ಅಥವಾ ಯಾವುದಾದರೂ ಸೇವೆಗೆ ಸಂಬಂಧಿಸಿದಂತೆ ಕಸ್ಟಮರ್ ಸರ್ವೀಸ್ ಸೆಂಟರ್ ಸಿಬ್ಬಂದಿಯೊಂದಿಗೆ ಸಂವಾದ ನಡೆಸುತ್ತೇವೆ. ಹೀಗೆ ಸಂಭಾಷಣೆ ನಡೆಸುವಾಗಿ ನಮ್ಮೊಂದಿಗೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುವ ಚಾಟ್ ಬಾಟ್ಸ್ ಚಾಟ್ ಮಾಡಬಹುದು. ಇದಕ್ಕಾಗಿ ವಿಶೇಷ ತಂತ್ರಜ್ಞಾನದ ಚಾಟ್ ಬಾಟ್ಸ್ ಎಂಬ ಕೃತಕ ಬುದ್ದಿಮತ್ತೆಯ ಕಂಪ್ಯೂಟರ್ ಪ್ರೋಗ್ರಾಮ್ ವಿನ್ಯಾಸಗೊಳಿಸಲಾಗಿದೆ. ಇದರಿಂದಾಗಿ ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸಲು, ಉತ್ಪನ್ನ ಅಥವಾ ಸೇವೆಯ ವಿವರಗಳನ್ನು ನೀಡಲು ಸಂಸ್ಥೆಗಳು ಮಾನವರ ಮೇಲೆ ಅವಲಂಬಿಸಬೇಕಿಲ್ಲ.

ಈ ಚಾಟ್ ಬಾಟ್ ಗಳು ಗ್ರಾಹಕರೊಂದಿಗೆ ಮಾತನಾಡಿದ ಮಾಡಿದ ಪ್ರತಿ ಬಾರಿ ಹೊಸ ಹೊಸ ವಿಷಯಗಳನ್ನು ಕಲಿಯುತ್ತವೆ. ಇತರೆ ಗ್ರಾಹಕರ ಜೊತೆ ಅವು ಈ ಹಿಂದಿನ ಗ್ರಾಹಕರೊಂದಿಗಿನ ಸಂಭಾಷಣೆಯಲ್ಲಿ ಕಲಿತ ವಿಷಯಗಳನ್ನು ಬಳಸುತ್ತಿರುತ್ತವೆ. ತಮ್ಮ ಬುದ್ದಿಮತ್ತೆಯನ್ನು ಹೀಗೆ ವೃದ್ಧಿಗೊಳಿಸಿಕೊಳ್ಳುತ್ತಿರುತ್ತವೆ.

ಫೇಸ್ಬುಕ್ ನಲ್ಲಿಯೂ ಇಂತದ್ದೇ ಒಂದು ಪ್ರೋಗ್ರಾಮ್ ಇದೆ. ಫೇಸ್ಬುಕ್ ಇಂಟಲಿಜೆನ್ಸ್ ರಿಸರ್ಚ್ ಹೆಸರಿನಲ್ಲಿ ನಡೆಯುತ್ತಿರುವ ಪ್ರಾಜೆಕ್ಟ್ ನಲ್ಲಿ ಕಳೆದ ತಿಂಗಳಿನಿಂದ ಒಂದು ವಿಚಿತ್ರ ಸಮಸ್ಯೆ ಎದುರಾಗಿತ್ತು. ಇಂಗ್ಲೀಷ್ ನಲ್ಲಿ ಕಾರ್ಯರ್ನಿವಹಿಸುತ್ತಿದ್ದ ಕೆಲ ಚಾಟ್ ಬಾಟ್ ಗಳು ನಂತರ ಅದನ್ನು ಬಿಟ್ಟು ತಮ್ಮದೇ ಆದ ಭಾಷೆಯೊಂದನ್ನು ಸೃಷ್ಟಿಸಿಕೊಂಡವು. ಚಾಟ್ ಮಾಡುವ ಪದಗಳು ಇಂಗ್ಲೀಷ್ ನಲ್ಲಿಯೇ ಇದ್ದರೂ, ಭಾಷೆ ಮಾತ್ರ ನಮಗೆ ಅರ್ಥವಾಗದ್ದು. ಉಳಿದ ಚಾಟ್ ಬಾಟ್ ಗಳು ಎಂದಿನಂತೆಯೇ ಕಾರ್ಯನಿರ್ವಹಿಸುತ್ತಿದ್ದವು. ಕೆಲ ಚಾಟ್ ಬಾಟ್ ಗಳು ಮಾತ್ರ ತಮ್ಮದೇ ಭಾಷೆಯಲ್ಲಿ ಗ್ರಾಹಕರೊಂದಿಗೆ ಮಾತನಾಡಲು ಆರಂಭಿಸಿದ್ದವು. ಹೀಗಾಗಿ ಮುಂದೆ ಆಗಬಹುದಾದ ಅನಾಹುತಗಳನ್ನು ತಪ್ಪಿಸಲು ವಿಜ್ಞನಿಗಳು ಕೂಡಲೇ ಆ ಚಾಟ್ ಬಾಟ್ ಸರ್ವರ್ ಅನ್ನು ಸ್ಥಗಿತಗೊಳಿಸಿದ್ದಾರೆ.

ಈ ಪ್ರೋಗ್ರಾಮ್ ವಿನ್ಯಾಸಗೊಳಿಸುವಾಗ ವಿಜ್ಞಾನಿಗಳು ಬೇರೆ ಎಲ್ಲಾ ವಿಷಯಗಳನ್ನು ಪರಿಗಣಿಸಿದರು, ಆದರೆ ಭಾಷೆಯ ವಿಷಯವನ್ನು ಮಾತ್ರ ಮರೆತರು. ಹೀಗಾಗಿ ಆರಂಭದಲ್ಲಿ ನಮಗೆ ಅರ್ಥವಾಗುವ ಇಂಗ್ಲೀಷ್ ಭಾಷೆಯಲ್ಲಿಯೇ ಸಂವಹನ ನಡೆಸಿದ ಚಾಟ್ ಬಾಟ್ ಗಳು, ನಂತರ ಇಂತದ್ದೇ ಭಾಷೆ ಎಂಬ ಗಡಿಯಿಲ್ಲವೆಂದು ಅರಿತು ತಮಗಿಷ್ಟ ಬಂದ ಯಾವುದೋ ಹೊಸ ಭಾಷೆಯನ್ನು ಬಳಸಲು ಆರಂಭಿಸಿದವು.

ಸೇನೆಯ ಗುರಿ ಉಗ್ರರ ನಾಯಕರು, ಒಬ್ಬೊಬ್ಬರನ್ನೇ ಬಲಿ ಪಡೆಯುತ್ತಿರುವ ಯೋಧರು

ಚಾಟ್ ಬಾಟ್ ಗಳು ತಮ್ಮದೇ ಭಾಷೆಯಲ್ಲಿ ಸಂವಾದ ನಡೆಸಲು ಆರಂಭಿಸಿದ್ದು ಯಾಕಿಷ್ಟು ಗಂಭೀರ ವಿಷಯ ಅಂತೀರಾ? ಹೌದು ಇದು ಗಂಭೀರ ವಿಷಯವೇ, ನೀವು ಹಣ ವರ್ಗಾವಣೆ, ಯಾವುದಾದರೂ ವಸ್ತು ಖರೀದಿಸುವಾಗಲೋ ಮತ್ತೊಂದು ಕಾರಣಕ್ಕೋ ನೀವು ಚಾಟ್ ಬಾಟ್ಸ್ ನ ಸಲಹೆ ಪಡೆದಾಗ, ಅವು ತಮಗಿಷ್ಟ ಬಂದ ಹಾಗೆ ವರ್ತಿಸಿ ಗ್ರಾಹಕರಿಗೆ ನಷ್ಟವಾಗುವಂತ ಕೆಲಸ ಮಾಡಲು ಆರಂಭಿಸಿದರೆ ಹೇಗೆ? ಹೀಗಾಗಿ ಸಕಾಲದಲ್ಲಿ ಸರ್ವರ್ ಸ್ಥಗಿತಗೊಳಿಸಿ ಸಮಸ್ಯೆ ದೊಡ್ಡದಾಗದಂತೆ ಎಚ್ಚರವಹಿಸಿದ್ದಾರೆ.

ಪಿಯುಸಿ ಓದಿದವನಿಗೆ ಗೂಗಲ್ ನಿಂದ ಬಂಪರ್ ಆಫರ್, ತಿಂಗಳಿಗೆ 12 ಲಕ್ಷ ವೇತನ!

Loading...
loading...
error: Content is protected !!