ಮೊಬೈಲ್ ಬಳಸುವವರು ಈ ಸೂಚನೆಗಳನ್ನು ತಪ್ಪದೇ ಪಾಲಿಸಿ – News Mirchi

ಮೊಬೈಲ್ ಬಳಸುವವರು ಈ ಸೂಚನೆಗಳನ್ನು ತಪ್ಪದೇ ಪಾಲಿಸಿ

ಈಗ ಎಲ್ಲಿ ನೋಡಿದರೂ ರೇಡಿಯೇಷನ್ ಪ್ರಭಾವದ ಕುರಿತೇ ಹೆಚ್ಚು ಚರ್ಚೆ ನಡೆಯುತ್ತಿರುತ್ತದೆ. ಏಕೆಂದರೆ, ಮುಖ್ಯವಾಗಿ ಸೆಲ್ ಫೋನ್ ಬಳಕೆ ಹೆಚ್ಚಾಗುತ್ತಿರುವುದರಿಂದ ಬಿಡುಗಡೆಯಾಗುವ ರೇಡಿಯೇಷನ್ ಮನುಷ್ಯನ ದೇಹಕ್ಕೆ ಹಾನಿ ಉಂಟು ಮಾಡುತ್ತಿದೆ ಎನ್ನುತ್ತಿದ್ದಾರೆ. ಇದು ಈಗ ಹೊಸದಾಗಿ ಕೇಳಿ ಬರುತ್ತಿರುವ ವಿಷಯವೇನಲ್ಲ. ಮೊಬೈಲ್ ಗಳು ಆರಂಭದಲ್ಲಿ ಬಳಕೆಗೆ ಬಂದಾಗಿನಿಂದಲೂ ನಮಗೆ ಇದರ ಬಗ್ಗೆ ವಿಜ್ಞಾನಿಗಳು ಹೇಳುತ್ತಲೇ ಇದ್ದಾರೆ. ಇಷ್ಟಕ್ಕೂ ರೇಡಿಯೇಷನ್ ನಮ್ಮ ದೇಹದ ಮೇಲೆ ಯಾವ ರೀತಿಯ ಪರಿಣಾಮ ಉಂಟು ಮಾಡುತ್ತದೆ? ಇದರಿಂದ ನಮ್ಮ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳೇನು? ಅಸಲಿಗೆ ಒಂದು ಸೆಲ್ ಫೋನ್ ನಲ್ಲಿ ರೇಡಿಯೇಷನ್ ಮಟ್ಟ ಎಷ್ಟಿರುತ್ತದೆ? ನಾವು ಏನು ಎಚ್ಚರಿಕೆ ವಹಿಸಬೇಕು? ಎಂಬ ವಿಷಯಗಳನ್ನು ತಿಳಿಯೋಣ…

life-6_1478935562ಸ್ಪೆಸಿಫಿಕ್ ಅಬ್ಜಾರ್ಪ್ಷನ್ ಕುರಿತು ನೀವು ಕೇಳಿರುತ್ತೀರಿ. ವಿಜ್ಞಾನ ವಿದ್ಯಾರ್ಥಿಗಳಿಗೆ ಇದರ ಬಗ್ಗೆ ತಿಳುವಳಿಕೆ ಇರುತ್ತದೆ. ಇದನ್ನೇ SAR Value ಎಂದು ಕೂಡಾ ಕರೆಯುತ್ತಾರೆ. ಸಾಮಾನ್ಯವಾಗಿ ಒಂದು ಸೆಲ್ ಫೋನ್ ಗೆ ಒಂದು ಮಾತ್ರ SAR Value ಇರುತ್ತದೆ. ಇದರ ಆಧಾರದ ಮೇಲೆ ನಮ್ಮ ದೇಹ ಆ ಫೋನ್ ನಿಂದ ರೇಡಿಯೋ ತರಂಗಗಳ ಶಕ್ತಿಯನ್ನು ದೇಹದೊಳಗೆ ಗ್ರಹಿಸುತ್ತದೆ. ಸಾಮಾನ್ಯವಾಗಿ ಸೆಲ್ ಫೋನ್ ಗಳ SAR Value 1.6w/kg ಅಥವಾ ಅದಕ್ಕಿಂತ ಕಡಿಮೆ ಇದ್ದಾಗ ನಮಗೆ ಹೆಚ್ಚು ಹಾನಿಯಿಲ್ಲ. ಅದಕ್ಕಿಂತ ಹೆಚ್ಚಿದ್ದರೆ ಸೆಲ್ ಫೋನ್ ನಿಂದ ಬಿಡುಗಡೆಯಾಗುವ ಅಧಿಕ ರೇಡಿಯೇಷನ್ ಪ್ರಭಾವಕ್ಕೆ ಒಳಗಾಗಿ ಅನೇಕ ಅನಾರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಗಾಗಿ ನೀವು ಕೆಳಗಿನ ಸೂಚನೆಗಳನ್ನು ಪಾಲಿಸಿ, ಮುನ್ನೆಚ್ಚರಿಕೆ ವಹಿಸಿ…

5yers_1478935040ನೀವು ಆಂಡ್ರಾಯ್ಡ್ ಫೋನ್ ಬಳಸುತ್ತಿದ್ದರೆ, ಅದರಿಂದ *#07# ಡಯಲ್ ಮಾಡಿ. ಹೀಗೆ ಡಯಲ್ ಮಾಡುತ್ತಿದ್ದಂತೆ ನಿಮ್ಮ ಫೋನ್ SAR Value ಎಷ್ಟಿದೆ ಎಂಬುದು ಕೂಡಲೇ ತೋರಿಸುತ್ತದೆ.

ಮೊಬೈಲಿನಲ್ಲಿ 2 ನಿಮಿಷಗಳ ಕಾಲ ಮಾತನಾಡಿದ ನಂತರ ಮೆದುಳಿನ ಚಟುವಟಿಕೆಯ ಮೇಲೆ ಒಂದು ಗಂಟೆಯವರೆಗೂ ಅದರ ಪ್ರಭಾವ ಇರುತ್ತದೆಯಂತೆ. ಇದನ್ನು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಮೊಬೈಲ್ ನಲ್ಲಿ ಮಾತನಾಡುವಾಗ ಆದಷ್ಟು ಕಡಿಮೆ ಅಂದರೆ 2 ನಿಮಿಷಗಳಲ್ಲಿಯೇ ಮಾತನಾಡಿ ಮುಗಿಸುವುದು ಉತ್ತಮ.

ದೊಡ್ಡವರಿಗೇ ಸೆಲ್ ಫೋನ್ ರೇಡಿಯೇಷನ್ ಮೂಲಕ ತುಂಬಾ ಆರೋಗ್ಯ ಸಂಬಂಧಿ ದುಷ್ಪರಿಣಾಮಗಳು ಉಂಟಾಗುತ್ತವೆ. ಆದ್ದರಿಂದ ಮಕ್ಕಳಿಗೆ ಆದಷ್ಟು ಮೊಬೈಲ್ ಕೊಡಬಾರದು.

ಪ್ರಯಾಣ ಮಾಡುವಾಗ ಹೊರತುಪಡಿಸಿ ಆದಷ್ಟು ಮೊಬೈಲ್ ಅನ್ನು ದೇಹಕ್ಕೆ ದೂರವಿರುವಂತೆ ಇಟ್ಟುಕೊಳ್ಳಿ. ಕೆಲವರು ಮೊಬೈಲ್ ಅನ್ನು ರಾತ್ರಿ ಮಲಗುವಾಗ ದೇಹಕ್ಕೆ ತಾಗುವಂತೆ ಎದೆಯ ಮೇಲೆ, ಜೇಬಿನಲ್ಲಿ ಇಟ್ಟುಕೊಂಡು ಮಲಗುವ ಅಭ್ಯಾಸವೂ ಹೊಂದಿದ್ದಾರೆ, ಆದರೆ ಆರೋಗ್ಯದ ದೃಷ್ಟಿಯಿಂದ ಇದು ಸರಿಯಲ್ಲ.

ಹೆಚ್ಚು ಕರೆಗಳು ಬರುತ್ತಿದ್ದು, ಹೆಚ್ಚು ಮಾತನಾಡಬೇಕಾದ ಸಂದರ್ಭದಲ್ಲಿ ವೈರ್ ಲೆಸ್ ಬಳಸದೆ, ವೈರ್ ಇರುವ ಇಯರ್ ಫೋನ್ ಬಳಸಿ. ವೈರ್ ಲೆಸ್ ನಿಂದಲೂ ಸ್ವಲ್ಪವಾದರೂ ರೇಡಿಯೇಷನ್ ಬರುವ ಸಾಧ್ಯತೆ ಇರುತ್ತದೆ.

ಲಿಫ್ಟುಗಳು ಅಥವಾ ಸಂಪೂರ್ಣ ಮುಚ್ಚಿದ ಪ್ರದೇಶಗಳಲ್ಲಿ ಸೆಲ್ ಫೋನ್ ಗಳನ್ನು ಬಳಸಲೇ ಬಾರದು. ಏಕೆಂದರೆ ಅಂತಹ ಪ್ರದೇಶಗಳಲ್ಲಿ ರೇಡಿಯೇಷನ್ ಪ್ರಭಾವ ದುಪ್ಪಟ್ಟು ಇರುತ್ತದೆ. ಸೆಲ್ ಫೋನ್ ರೇಡಿಯೇಷನ್ ಕುರಿತು ಎಚ್ಚರಿಕೆ ವಹಿಸದಿದ್ದರೆ ಕ್ಯಾನ್ಸರ್, ಶ್ವಾಸಕೋಶ ಸಂಬಂಧಿತ ರೋಗಗಳು ಬರುತ್ತವೆಯಂತೆ. ಮೆದುಳಿನ ಚಟುವಟಿಕೆಯ ಮೇಲೂ ಪರಿಣಾಮ ಬೀರುತ್ತದೆ.

Click for More Interesting News

Loading...

Leave a Reply

Your email address will not be published.

error: Content is protected !!