ಹೊಟ್ಟೆಯಲ್ಲಿ 6 ಚಿನ್ನದ ಬಿಸ್ಕೆಟ್ |News Mirchi

ಹೊಟ್ಟೆಯಲ್ಲಿ 6 ಚಿನ್ನದ ಬಿಸ್ಕೆಟ್

ಚೆನ್ನೈ: ಹೊಟ್ಟೆಯಲ್ಲಿ ಚಿನ್ನದ ಬಿಸ್ಕತ್ತುಗಳನ್ನು ಅಡಗಿಸಿಕೊಟ್ಟುಕೊಂಡು ಬಂದ ಯುವಕನೊಬ್ಬನನ್ನು ವಿಮಾನ ನಿಲ್ದಾಣ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಭಾನುವಾರ ಕೌಲಾಲಂಪುರದಿಂದ ತಿರುಚ್ಚಿಗೆ ಬಂದ ಏರ್ ಏಷ್ಯಾ ವಿಮಾನದಲ್ಲಿ ಬಂದ ಪ್ರಯಾಣಿಕರನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾಗ ಅನುಮಾನಾಸ್ಪದವಾಗಿ ಕಂಡ ಯುವಕನ ತನಿಖೆ ನಡೆಸಿದರು. ಆಗ ಆತ ಮಲೇಷ್ಯಾದಿಂದ ಹೊಟ್ಟೆಯಲ್ಲಿ ಆರು ಚಿನ್ನದ ಬಿಸ್ಕೆಟ್ ಇಟ್ಟುಕೊಂಡು ಬಂದಿದ್ದಾಗಿ ತಿಳಿದು ಬಂದಿದೆ.

ಆರೋಪಿ ರಾಮನಾಥಪುರಂ ಜಿಲ್ಲೆ ಎಸ್ಪಿ ಪಟ್ಟಣದ ಮಹಮದ್ ಮುಸ್ತಫಾ ಸಲೀಂ ಎಂದು ತಿಳಿದು ಬಂದಿದೆ. ಹೊಟ್ಟೆಯಲ್ಲಿ ಚಿನ್ನದ ಬಿಸ್ಕೆಟ್ ಇದ್ದದ್ದು ತಿಳಿದ ಕೂಡಲೇ ಅಧಿಕಾರಿಗಳು ಬಿಸ್ಕೆಟ್ ಹೊರತೆಗೆಯಲು ಆತನನ್ನು ತಿರುಚ್ಚಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

Loading...
loading...
error: Content is protected !!