ಮೂಗಿನೊಳಗಿಂದ ಮೆದುಳು ಸೇರಿತ್ತು ಜಿರಲೆ!

ಮಹಿಳೆಯೊಬ್ಬರ ಮೂಗಿನೊಳಗಿಂದ ಮೆದುಳು ಸೇರಿದ್ದ ಜಿರಲೆಯೊಂದನ್ನು ವೈದ್ಯರು ಹೊರಗೆ ತೆಗೆದ ಅಪರೂಪದ ಘಟನೆ ಚೆನ್ನೈನಲ್ಲಿ ನಡೆದಿದೆ. ಈಜಂಬಾಕ್ಕಂ ನಲ್ಲಿನ ಗೌರಿಯಮ್ಮನ್ ದೇವಸ್ಥಾನ ರಸ್ತೆ ನಿವಾಸಿ ಮುನಿಸ್ವಾಮಿ ಪತ್ನಿ ಸೆಲ್ವಿ(42) ಜನವರಿ 31 ರಂದು ನಿದ್ರಿಸುತ್ತಿದ್ದಾಗ ಜಿರಲೆಯೊಂದು ಆಕೆಯ ಮೂಗಿನೊಳಗೆ ಹೋಯಿತು. ಇದರಿಂದಾಗಿ ಆಕೆಗೆ ಮಧ್ಯರಾತ್ರಿ ತೀವ್ರ ನೋವುಂಟಾದರೂ ಜಿರಳೆ ಸೇರಿಕೊಂಡಿರುವುದು ಗಮನಕ್ಕೆ ಬಂದಿರಲಿಲ್ಲ.

ಬುಧವಾರ ಸಮೀಪದ ಆಸ್ಪತ್ರೆಗೆ ತೋರಿಸಿದಾಗ, ಮೂಗಿನಲ್ಲಿ ಮಾಂಸ ಬೆಳೆದಿರಬಹುದು ಎಂದು ವೈದ್ಯರು ಔಷಧಿ ನೀಡಿ ಕಳುಹಿಸಿದರು. ಮನೆಗೆ ಬಂದು ಔಷಧಿ ತೆಗೆದುಕೊಡರೂ ನೋವು ಕಡಿಮೆಯಾಗದ ಕಾರಣ ಮತ್ತೊಂದು ಆಸ್ಪತ್ರೆಗೆ ಹೋದರು. ಅಲ್ಲಿ ಸ್ಕ್ಯಾನಿಂಗ್ ಮಾಡಿದಾಗ ಆಕೆಯ ಮೆದುಳಿನ ಸಮೀಪದಲ್ಲೇ ಜಿರಲೆಯಿರುವುದು ಪತ್ತೆಯಾಗಿದೆ. ಅದನ್ನು ಹೊರತೆಗೆಯುವ ತಂತ್ರಜ್ಞಾನ ಆ ಆಸ್ಪತ್ರೆಯಲ್ಲಿ ಇಲ್ಲದ ಕಾರಣ ಆಕೆ ಸ್ಟ್ಯಾನ್ಲಿ ಆಸ್ಪತ್ರೆಗೆ ದಾಖಲಾದರು. ಅಲ್ಲಿನ ಇಎನ್‌ಟಿ ತಜ್ಞರು ಆಧುನಿಕ ತಂತ್ರಜ್ಞಾನದ ಉಪಕರಣ ಬಳಸಿ ಮೆದುಳಿನ ಸಮೀಪ ಜೀವಂತವಿದ್ದ ಜಿರಲೆಯನ್ನು ಗುರುವಾರ ಹೊರತೆಗೆದಿದ್ದಾರೆ.

Related News

Loading...

Leave a Reply

Your email address will not be published.

error: Content is protected !!