ಶೌಚಾಲಯ ಬಳಸಿ ಚೆಕ್ ಕೊಟ್ಟ!

ಒಂದು ಕಡೆ ಗರಿಷ್ಠ ಮುಖಬೆಲೆಯ ನೋಟು ರದ್ದು ಮಾಡಿದ ಪ್ರಧಾನ ಮಂತ್ರಿಗಳು, ನಗದು ರಹಿತ ವ್ಯವಹಾರಕ್ಕೆ ಮುಂದಾಗಿ ಎಂದು ಕರೆ ನೀಡಿದ್ದಾರೆ. ಇಲ್ಲೊಬ್ಬಾತ ಪ್ರಧಾನಿಯವರ ಮಾತನ್ನು ಎಷ್ಟು ಪಾಲಿಸಿದನೋ ಗೊತ್ತಿಲ್ಲವಾದರೂ, ಒಂದು ಕುತೂಹಕಲಕಾರಿ ಘಟನೆ ನಡೆದಿದೆ.

ಮಧುರೈ ನಲ್ಲಿ ವ್ಯಕ್ತಿಯೊಬ್ಬನ ಕೈಯಲ್ಲಿ ಚಿಲ್ಲರೆ ಇರಲಿಲ್ಲ. ಅರ್ಜೆಂಟಾಗಿ ಸಾರ್ವಜನಿಕ ಶೌಚಾಲಯ ಬಳಸಬೇಕಾಗಿ ಬಂತು. ಹತ್ತಿರದ ಸುಲಭ್ ಶೌಚಾಲಯಕ್ಕೆ ಹೋಗಿ ಹೊರ ಬಂದ ಆ ವ್ಯಕ್ತಿಗೆ ಶೌಚಾಲಯದ ನಿರ್ವಾಹಕ ಹಣ ಕೇಳಿದ್ದಾನೆ. ಇತ್ತ ನಮ್ಮವನ ಕೈಯಲ್ಲಿ ಕಾಸಿಲ್ಲ. ಮತ್ತೇನು ಮಾಡಿದ ಅಂತೀರಾ… ಕೊಡಬೇಕಿದ್ದ 5 ರೂಪಾಯಿಗೆ ಒಂದು ಚೆಕ್ ಬರೆದು ಕೊಟ್ಟು ಸೀದಾ ಹೊರಬಂದ. ಅತ್ತ ಚೆಕ್ ಪಡೆದವ ಬಿಟ್ಟ ಬಾಯಿ ಮುಚ್ಚಲಿಲ್ಲ.

Related News

Comments (wait until it loads)
Loading...
class="clear">