ಬ್ಯಾಹಟ್ಟಿಯಲ್ಲಿ ನಡೆಯಲಿದ್ದ ಬಾಲ್ಯವಿವಾಹಕ್ಕೆ ತಡೆ

ಧಾರವಾಡ: ಭಾನುವಾರ ಬ್ಯಾಹಟ್ಟಿಯಲ್ಲಿ ನಡೆಯಲಿದ್ದ ಬಾಲ್ಯವಿವಾಹವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ತಡೆದಿದ್ದಾರೆ. ಅಪ್ರಾಪ್ತ ಬಾಲಕಿಯೊಂದಿಗೆ ಪ್ರವೀಣ್ ಎಂಬ ವ್ಯಕ್ತಿಯೊಂದಿಗೆ ಮದುವೆ ನಿಶ್ಚಯವಾಗಿದ್ದುದರ ಮಾಹಿತಿ ಪಡೆದ ಅಧಿಕಾರಿಗಳು, ವಧುವಿನ ಮನೆಗೆ ಮತ್ತು ಮದುವೆ ನಡೆಯಬೇಕಿದ್ದ ಬಸವೇಶ್ವರ ಕಲ್ಯಾಣ ಮಂಟಪಕ್ಕೆ ಭೇಟಿ ನೀಡಿ ಬಾಲ್ಯ ವಿವಾಹಕ್ಕಿರುವ ಕೂನೂನು ತೊಡಕುಗಳನ್ನು ವಿವರಿಸಿ ಮದುವೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ನಂತರ ವಧು ಮತ್ತು ವರರ ಜನನ ಪ್ರಮಾಣ ಪತ್ರಗಳನ್ನು ಜೂನ್ 14 ರೊಳಗೆ ನೀಡುವಂತೆ ಅಧಿಕಾರಿಗಳು ವಧೂ ವರರ ತಂದೆ ತಾಯಿಗಳಿಗೆ ಸೂಚಿಸಿದ್ದಾರೆ.