4 ಸಾವಿರ ಅಶ್ಲೀಲ ವೆಬ್ಸೈಟ್ ಬಂದ್

ಜನರನ್ನು ದಾರಿ ತಪ್ಪಿಸುವ ವೆಬ್ಸೈಟುಗಳಿಗೆ ಚೀನಾ ನಿರ್ಬಂಧ ಹೇರಿದೆ. ಅಶ್ಲೀಲ, ಅಸಭ್ಯ ಮಾಹಿತಿಯುಳ್ಳ ನೇರ ವೀಡಿಯೋ ಪ್ರಸಾರ ಮಾಡುತ್ತಿದ್ದ ಸುಮಾರು 4 ಸಾವಿರಕ್ಕೂ ಹೆಚ್ಚು ವೆಬ್ಸೈಟ್ ಗಳಿಗೆ ಚೀನಾ ಸರ್ಕಾರ ನಿಷೇಧ ಹೇರಿದೆ.

ಹೊಸದಾಗಿ ಜಾರಿಗೆ ತಂದಿರುವ ಸೈಬರ್ ಸ್ಪೇಸ್ ನಿಯಮಗಳಿಗೆ ವಿರುದ್ಧವಾಗಿರುವುದರಿಂದ ಅವುಗಳಿಗೆ ನಿಷೇಧ ವಿಧಿಸುತ್ತಿರುವುದಾಗಿ ಚೀನಾದ ಅಧಿಕೃತ ಮಾಧ್ಯಮ ಪ್ರಕಟಿಸಿದೆ. ‘ಹಿಂಸೆ, ಅಶ್ಲೀಲ, ಅಸಭ್ಯ ಮಾಹಿತಿ ತುಂಬಿದ ಲೈವ್ ಸ್ಟ್ರೀಮಿಂಗ್ ವೆಬ್ಸೈಟ್ ಗಳನ್ನು ಚೀನಾ ಮುಚ್ಚಿದೆ’ ಎಂದು ಜಿನ್‌ಹುವಾ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

ನಿಷೇಧದ ಹೊರತಾಗಿಯೂ ಕೆಲವರು ಸಾಮಾಜಿಕ ತಾಣಗಳ ಮೂಲಕ ನಿಯಮಗಳ ಉಲ್ಲಂಘನೆ ಮಾಡುತ್ತಿದ್ದಾರೆ. ಚೀನಾದಲ್ಲಿ 4ಜಿ, 5ಜಿ ಸೌಲಭ್ಯಗಳಿಂದ ಲೈವ್ ಸ್ಟ್ರೀಮಿಂಗ್ ಮೂಲಕ ಕಾರ್ಯಕ್ರಮಗಳನ್ನು ವೀಕ್ಷಿಸುವುದು ಅಲ್ಲಿ ಸರ್ವೇ ಸಾಮಾನ್ಯವಾಗಿ ಹೋಗಿದೆ.