ಪಟ್ಟು ಸಡಿಲಿಸುತ್ತಿರುವ ಚೀನಾ? – News Mirchi
We are updating the website...

ಪಟ್ಟು ಸಡಿಲಿಸುತ್ತಿರುವ ಚೀನಾ?

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಬೀಜಿಂಗ್ ಭೇಟಿ ಹಿನ್ನೆಲೆಯಲ್ಲಿ ಚೀನಾ ತನ್ನ ಹಠಮಾರಿ ಧೋರಣೆಯಿಂದ ದೂರ ಸರಿಯುತ್ತಿರುವ ಸೂಚನೆ ನೀಡುತ್ತಿದೆ. ಬ್ರಿಕ್ಸ್ ದೇಶಗಳ ಸಮಾವೇಶಕ್ಕೆ ಹಾಜರಾಗಲಿರುವ ಅಜಿತ್ ದೋವಲ್, ಬ್ರೆಜಿಲ್, ರಷ್ಯಾ, ದಕ್ಷಿಣ ಆಫ್ರಿಕಾ ಸೇರಿದಂತೆ ಬ್ರಿಕ್ಸ್ ದೇಶಗಳ ಭದ್ರತಾ ಸಲಹೆಗಾರರನ್ನು ಭೇಟಿ ಮಾಡಲಿದ್ದಾರೆ. ಬೀಜಿಂಗ್ ಭೇಟಿಯ ಭಾಗವಾಗಿ ಗುರುವಾರ ಮತ್ತು ಶುಕ್ರವಾರ ಚೀನಾ ಅಧ್ಯಕ್ಷರ ಜಿನ್ ಪಿಂಗ್ ಮತ್ತು ಇತರೆ ಚೀನಾ ನಾಯಕರನ್ನೂ ಅಜಿತ್ ದೋವಲ್ ಭೇಟಿ ಮಾಡಲಿದ್ದಾರೆ.

ತಂಗಿ ಮತ್ತು ಬಾವನೊಂದಿಗೆ ರಾಹುಲ್ ಗಾಂಧಿಯ ಚೀನಾ ರಾಯಭಾರಿ ಭೇಟಿ

ಇದೇ ವೇಳೆ ಚೀನಾದ ಅಧಿಕೃತ ಸುದ್ದಿ ಸಂಸ್ಥೆ ಕ್ಸಿನುವಾ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಭಾರತದ ಆರ್ಥಿಕತೆಯ ನಿರ್ವಹಣೆಯನ್ನು ಹೊಗಳಿ ಅಚ್ಚರಿ ಮೂಡಿಸಿದೆ. ಚೀನಾ ಮತ್ತು ಭಾರತಗಳ ನಡುವೆ ವ್ಯಾಪಾರ ಸಂಬಂಧವನ್ನು ವೃದ್ಧಿಸುವ ಅಗತ್ಯವನ್ನು ಅದು ಒತ್ತಿ ಹೇಳಿದೆ. ತಮ್ಮ ಉತ್ಪನ್ನಗಳಿಗೆ ಪ್ರಮುಖ ಮಾರುಕಟ್ಟೆಯಾಗಿರುವ ಭಾರತದೊಂದಿಗೆ ಸಂಘರ್ಷವನ್ನು ಮುಂದುವರೆಸಲು ಚೀನಾ ಆಡಳಿತ ಕೂಡಾ ಬಯಸುತ್ತಿಲ್ಲ, ಹೀಗಾಗಿ ಚೀನಾ ಮಾಧ್ಯಮವೂ ತನ್ನ ದಾರಿ ಬದಲಿಸಿದೆ.

ಹೆದರುವ, ಬೆದರುವ ಪ್ರಶ್ನೆಯೇ ಇಲ್ಲ, ಚೀನಾವನ್ನು ಎದುರಿಸಲು ಭಾರತ ಸಿದ್ಧ

Contact for any Electrical Works across Bengaluru

Loading...
error: Content is protected !!