ಭಾರತದ ಮೇಲೆ ದಾಳಿ ನಡೆಸಲು ಚೀನಾ ಸಿದ್ಧವಾಗಿದೆ, ಪಾಕಿಸ್ತಾನದಲ್ಲಿಟ್ಟಿದೆ ಅಣ್ವಸ್ತ್ರ : ಮುಲಾಯಂ – News Mirchi

ಭಾರತದ ಮೇಲೆ ದಾಳಿ ನಡೆಸಲು ಚೀನಾ ಸಿದ್ಧವಾಗಿದೆ, ಪಾಕಿಸ್ತಾನದಲ್ಲಿಟ್ಟಿದೆ ಅಣ್ವಸ್ತ್ರ : ಮುಲಾಯಂ

ನವದೆಹಲಿ: ಭಾರತದ ಮೇಲೆ ದಾಳಿ ಮಾಡಲು ಚೀನಾ ಸಿದ್ಧವಾಗಿದೆ ಎಂದು ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಎಚ್ಚರಿಸಿದ್ದಾರೆ. ಪಾಕಿಸ್ತಾನದೊಂದಿಗೆ ಸೇರಿ ಭಾರತದ ಮೇಲೆ ದಾಳಿ ನಡೆಸಲು ಚೀನಾ ಸಿದ್ಧವಾಗಿದೆ. ಕೂಡಲೇ ಟಿಬೆಟ್ ವಿಷಯದಲ್ಲಿ ನಮ್ಮ ನಿಲುವು ಬದಲಿಸಿ ಟಿಬೆಟ್ ಗೆ ಸ್ವಾತಂತ್ರ್ಯ ಕೊಡುವ ವಿಷಯಕ್ಕೆ ಬೆಂಬಲ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಚೀನಾ, ಭಾರತದ ನಡುವೆ ಡೊಕ್ಲಾಮ್ ಗಡಿ ವಿಷಯದಲ್ಲಿ ಉದ್ಭವಿಸಿರುವ ಉದ್ವಿಘ್ನ ವಾತಾವರಣವನ್ನು ಗಮನದಲ್ಲಿಟ್ಟುಕೊಂಡು ಬುಧವಾರ ಸಂಜೆ ಅವರು ಲೋಕಸಭೆಯಲ್ಲಿ ಈ ಮಾತುಗಳನ್ನು ಹೇಳಿದರು. ಇದುವರೆಗೂ ಚೀನಾ ಎಸೆಯುತ್ತಿರುವ ಸವಾಲುಗಳನ್ನು ಎದುರಿಸಲು ಯಾವ ಕ್ರಮ ಕೈಗೊಂಡಿದ್ದೀರೋ ತಿಳಿಸಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.

ಈಗ ಭಾರತದಿಂದ ಚೀನಾ ಅಪಾಯವನ್ನು ಎದುರಿಸುತ್ತಿದೆ. ಹಲವು ವರ್ಷಗಳಿಂದ ನಾನು ಕೇಂದ್ರ ಸರ್ಕಾರವನ್ನು ಎಚ್ಚರಿಸುತ್ತಲೇ ಬಂದಿದ್ದೇನೆ. ಈಗಾಗಲೇ ಅದು ಭಾರತದ ಮೇಲೆ ದಾಳಿ ನಡೆಸಲು ಸಿದ್ಧವಾಗಿದೆ. ಚೀನಾ ಭಾರತಕ್ಕೆ ಅತಿ ದೊಡ್ಡ ಸ್ಪರ್ಧಿ. ಕಾಶ್ಮೀರದಲ್ಲಿ ಭಾರತ ಸರ್ಕಾರ ಏನು ಮಾಡಿದೆ? ಪಾಕ್ ಸೇನೆಯೊಂದಿಗೆ ಚೀನಾ ಕುತಂತ್ರ ನಡೆಸುತ್ತಿದೆ. ಭಾರತದ ಮೇಲೆ ದಾಳಿ ನಡೆಸಲು ಈಗಾಗಲೇ ಚೀನಾ ತನ್ನ ಅಣ್ವಸ್ತ್ರಗಳನ್ನು ಪಾಕ್ ನಲ್ಲಿ ಅಡಗಿಸಿಟ್ಟಿದೆ. ಈ ವಿಷಯ ಭಾರತದ ಗುಪ್ತಚರ ಇಲಾಖೆಗೆ ಚೆನ್ನಾಗಿ ತಿಳಿದಿದೆ ಎಂದು ಭಾವಿಸಿದ್ದೇನೆ. ಈಗಲೇ ಇತ್ಯರ್ಥವಾಗಬೇಕಿರುವುದು ಟಿಬೆಟ್ ಭೂವಿವಾದವಲ್ಲ. ಆ ದೇಶದ ಸ್ವತಂತ್ರವಾಗಲು ಬೆಂಬಲ ನೀಡಬೇಕು ಎಂದು ಅವರು ಶೂನ್ಯ ವೇಳೆಯಲ್ಲಿ ಹೇಳಿದರು.

Loading...