ಭಾರತದ ಡ್ರೋನ್ ಅನ್ನು ನೆಲಕ್ಕುರುಳಿಸಿದ್ದೇವೆ: ಚೀನಾ

ಚೀನಾದ ವಾಯುಪ್ರದೇಶದೊಳಗೆ ಅಕ್ರಮವಾಗಿ ಭಾರತದ ಡ್ರೋನ್ ಪ್ರವೇಶಿಸಿದ್ದು, ಅದನ್ನು ನಾವು ನೆಲಕ್ಕುರುಳಿಸಿದ್ದೇವೆ ಎಂದು ಚೀನಾ ಮಾಧ್ಯಮ ಗುರುವಾರ ಪ್ರಕಟಿಸಿದೆ. ಭಾರತದ ನಡೆ ಚೀನಾದ ಪ್ರಾದೇಶಿಕ ಸಾರ್ವಭೌಮತ್ವವನ್ನು ಉಲ್ಲಂಘಿಸುವಂತೆ ಇದೆ. ಇದಕ್ಕೆ ನಾವು ಇದಕ್ಕೆ ಅಸಮಾಧಾನವಾಗಿದ್ದು, ಈ ನಡೆಗೆ ವಿರೋಧ ವ್ಯಕ್ತಪಡಿಸುತ್ತೇವೆ ಎಂದು ಚೀನಾ ಸೇನೆಯ ವೆಸ್ಟರ್ನ್ ಥಿಯೇಟರ್ ಕಾಂಬ್ಯಾಟ್ ಬ್ಯೂರೋ ಉಪ ನಿರ್ದೇಶಕ ಝಾಂಗ್ ಶುಯಿಲಿ ಅವರು ಪ್ರತಿಕ್ರಿಯಿಸಿದ್ದಾರೆ.

ಚೀನಾ ಗಡಿ ಪಡೆಗಳು ಜವಾಬ್ದಾರಿಯುತವಾಗಿ ತಮ್ಮ ಕೆಲಸವನ್ನು ನಿರ್ವಹಿಸಿದ್ದು, ಡ್ರೋನ್ ಗುರುತು ಪತ್ತೆಗೆ ಪರಿಶೀಲನೆ ನಡೆಸಿದೆ ಎಂದು ಅವರು ಹೇಳಿದರು. ಆದರೆ ಈ ಡ್ರೋನ್ ಯಾವ ಸಮಯದಲ್ಲಿ ಎಲ್ಲಿ ಪತ್ತೆಯಾಯಿತು ಎಂಬುದನ್ನು ಮಾತ್ರ ಅವರು ತಿಳಿಸಲಿಲ್ಲ.

Get Latest updates on WhatsApp. Send ‘Subscribe’ to 8550851559