ಚೀನಾ ಗೊಡ್ಡು ಬೆದರಿಕೆಗಳಿಗೆ ಜಗ್ಗದ ಭಾರತೀಯ ಸೇನೆ – News Mirchi

ಚೀನಾ ಗೊಡ್ಡು ಬೆದರಿಕೆಗಳಿಗೆ ಜಗ್ಗದ ಭಾರತೀಯ ಸೇನೆ

ನವದೆಹಲಿ: ಭಾರತ ಚೀನಾ ನಡುವೆ ಡೊಕ್ಲಾಂ ವಿವಾದ ದಿನೇ ದಿನೇ ಗಂಭೀರವಾಗುತ್ತಿದೆ. ಸಿಕ್ಕಿಂ, ಭೂತಾನ್, ಟಿಬೆಟ್ ಗಳ ನಡುವೆ ಇರುವ ಈ ಪ್ರದೇಶದಲ್ಲಿ ಚೀನಾ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದು, ಭಾರತೀಯ ಸೇನೆ ಅದಕ್ಕೆ ಅಡ್ಡಿಪಡಿಸಿದ್ದು ಗೊತ್ತಿರುವುದೇ. ಭಾರತೀಯ ಸೇನೆ ನಮ್ಮ ಭೂಪ್ರದೇಶಕ್ಕೆ ಬಂದಿದೆ ಎಂದು ವಾದಿಸುತ್ತಿರುವ ಚೀನಾ ಸೇನೆ ಆರ್ಭಟಿಸುತ್ತಲೇ ಇದೆ.

1962 ರ ಯುದ್ಧವನ್ನು ಭಾರತ ನೆನಪಿಸಿಕೊಳ್ಳಲಿ ಎಂದು ಚೀನಾ ಎಚ್ಚರಿಸಿದರೆ, ಅದು ಅಂದಿನ ಭಾರತವಲ್ಲ ಎಂದು ರಕ್ಷಣಾ ಸಚಿವ ಅರುಣ್ ಜೇಟ್ಲಿ ದಿಟ್ಟ ಉತ್ತರ ನೀಡಿದ್ದರು. ಡೊಕ್ಲಾಂ ವಿವಾದದ ಹಿನ್ನೆಲೆಯಲ್ಲಿ ಆ ಪ್ರದೇಶದಲ್ಲಿ ಎಷ್ಟು ದಿನಗಳಾದರೂ ಇರಲು ಭಾರತೀಯ ಸೇನೆ ಸಿದ್ಧವಾಗುತ್ತಿದೆ. ಇಂಡಿಯನ್ ಆರ್ಮಿ ಅಲ್ಲಿ ಟೆಂಟ್ ಗಳನ್ನು ಹಾಕಿ ಕಾವಲು ಕಾಯತ್ತಿದ್ದರೆ, ಸರ್ಕಾರದಿಂದ ಸೈನಿಕರಿಗೆ ಸಂಪೂರ್ಣ ಬೆಂಬಲ ಸಿಗುತ್ತಿದೆ. ಅಗತ್ಯ ಆಹಾರ ಪದಾರ್ಥಗಳನ್ನು ನಿರಂತರವಾಗಿ ಸರಬರಾಜು ಮಾಡುತ್ತಿದೆ.

ಎಷ್ಟು ಎಚ್ಚರಿಕೆ ನೀಡುತ್ತಿದ್ದರೂ ಭಾರತೀಯ ಸೇನೆ ಒಂದು ಹೆಜ್ಜೆಯೂ ಹಿಂದಿಡದೇ ಇರುವುದು ಚೀನಾಗೆ ನುಂಗಲಾರದ ತುತ್ತಾಗಿದೆ. ಹೀಗಾಗಿ ಡೊಕ್ಲಾಂ ಪ್ರದೇಶದಿಂದ ಕೂಡಲೇ ವಾಪಸ್ ಹೋಗಬೇಕು ಇಲ್ಲವೆಂದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಚೀನಾ ಮತ್ತೆ ಭಾರತೀಯ ಸೇನೆಗೆ ಎಚ್ಚರಿಸಿದೆ. ದೇಶದ ಭದ್ರತೆಯ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ಭಾರತದ ನಿಲುವು ಸ್ಪಷ್ಟವಾಗಿದೆ. ಚೀನಾ, ಭೂತಾನ್ ಮಧ್ಯೆ ಇರುವ ಪ್ರದೇಶದಲ್ಲಿ ಭಾರತ ಮಧ್ಯಪ್ರವೇಶಿಸಿದರೆ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಇರುವ ಕಾಶ್ಮೀರ ವಿವಾದದಲ್ಲಿ ನಾವು ಮಧ್ಯಪ್ರವೇಶಿಸಬೇಕಾಗುತ್ತದೆ ಎಂದು ಹೊಸ ಬೆದರಿಕೆಗೆ ಮುಂದಾಗಿದೆ. ರಾಜಿಯಾಗಲು ಭಾರತ ಪ್ರಯತ್ನಿಸುತ್ತಿಲ್ಲ, ಚೆಂಡು ಭಾರತದ ಅಂಗಳದಲ್ಲಿಯೇ ಇದೆ ಎಂದು ಚೀನಾ ವಾದಿಸುತ್ತಿದೆ.

ಉಪರಾಷ್ಟ್ರಪತಿ ಚುನಾವಣೆ: ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಗೋಪಾಲಕೃಷ್ಣ ಗಾಂಧಿ

ಭೂತಾನ್ ನ ಡೊಕ್ಲಾಂ ಪ್ರದೇಶದಿಂದ ರಸ್ತೆ ನಿರ್ಮಾಣ ಮಾಡುವ ಮೂಲಕ ಅತ್ತ ಭೂತಾನ್, ಇತ್ತ ಭಾರತದ ಮೇಲೆ ನಿಗಾ ಇಡಬಹುದು ಎಂದು ಯೋಚಿಸುತ್ತಿರುವ ಚೀನಾ, ಯುದ್ಧವೇನಾದರೂ ಸಂಭವಿಸಿದರೆ ಬೇಗ ಸೇನೆಯನ್ನು ಕಳುಹಿಸಲು ಅನುಕೂಲವಾಗುತ್ತದೆ ಈ ರಸ್ತೆ ಮೂಲಕ ಎಂಬುದು ಅದರ ತಂತ್ರ.

ಸಮಾಧಿಗಳಿಂದ ಶವಗಳನ್ನು ಹೊರತೆಗೆದ ಪ್ರಕರಣ, ತೀಸ್ತಾಗೆ ಸುಪ್ರೀಂ ನಲ್ಲಿ ಹಿನ್ನಡೆ

ಭದ್ರತಾ ದೃಷ್ಟಿಯಿಂದ ನೋಡಿದರೆ ಡೊಕ್ಲಾಂ ಆಯಕಟ್ಟಿನ ಜಾಗವಾಗಿದ್ದು, ಈ ಪ್ರದೇಶವೇನಾದರೂ ಚೀನಾ ಅಧೀನಕ್ಕೆ ಬಂದಿದ್ದೇ ಆದರೆ ಮುಂದಿನ ದಿನಗಳಲ್ಲಿ ಎಷ್ಟು ದೊಡ್ಡ ಅಪಾಯವೆದುರಾಗಬಹುದು ಎಂದು ಊಹಿಸಿದ ಭಾರತ, ಕೂಡಲೇ ಎಚ್ಚೆತ್ತುಕೊಂಡು ರಸ್ತೆ ನಿರ್ಮಾಣವನ್ನು ತಡೆದಿದೆ. ಭೂತಾನ್ ಗೆ ಭಾರತದೊಂದಿಗೆ ಉತ್ತಮ ರಾಜತಾಂತ್ರಿಕ, ಸೈನಿಕ ಒಪ್ಪಂದಗಳಿದ್ದು, ಆ ದೇಶಕ್ಕೆ ಚೀನಾದೊಂದಿಗೆ ಯಾವುದೇ ಸಂಬಂಧಗಳಿಲ್ಲ. ಭಾರತ- ಚೀನಾ ನಡುವೆ 3488 ಕಿ.ಮೀ ಗಡಿಯಿದ್ದು, ಸಿಕ್ಕಿ ಬಳಿ 220 ಕಿ.ಮೀ ನಷ್ಟು ಗಡಿಯನ್ನು ಎರಡೂ ದೇಶಗಳು ಹಂಚಿಕೊಂಡಿವೆ.

ಹೌದು ಚೀನಾ ರಾಯಭಾರಿಯೊಂದಿಗೆ ರಾಹುಲ್ ಭೇಟಿ ನಿಜ….

Loading...