ಸಿಕ್ಕಿಂ ಗಡಿಯಲ್ಲಿ ಚೀನಾ ಭಾರತ ಸೈನಿಕರ ನಡುವೆ ಘರ್ಷಣೆ: ಸಂಚಲನ ಸೃಷ್ಟಿಸುತ್ತಿರುವ ವೀಡಿಯೋ – News Mirchi

ಸಿಕ್ಕಿಂ ಗಡಿಯಲ್ಲಿ ಚೀನಾ ಭಾರತ ಸೈನಿಕರ ನಡುವೆ ಘರ್ಷಣೆ: ಸಂಚಲನ ಸೃಷ್ಟಿಸುತ್ತಿರುವ ವೀಡಿಯೋ

ಸಿಕ್ಕಿಂ: ಅವಕಾಶ ಸಿಕ್ಕಾಗಲೆಲ್ಲಾ ಡ್ರ್ಯಾಗನ್ ತನ್ನ ಬುದ್ದಿ ತೋರಿಸುತ್ತಿದೆ. ಕಳೆದ ಮೂರು ವಾರಗಳಿಂದ ಸಿಕ್ಕಿಂ ಗಡಿಯಲ್ಲಿ ಡೋಕಾ ಲಾ ದಲ್ಲಿ ತೀವ್ರ ಪ್ರಕ್ಷುಬ್ಧ ವಾತಾವರಣ ನೆಲೆಸಿರುವುದು ತಿಳಿದಿದೆ. ಇಲ್ಲಿಯವರೆಗೂ ಘರ್ಷಣೆಗೆ ಮುಂದಾಗುತ್ತಿದ್ದ ಚೀನಾ ಸೇನೆ, ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಭಾರತದ ಭೂಪ್ರದೇಶದೊಳಗೆ ನುಗ್ಗಲು ಪ್ರಯತ್ನಿಸುತ್ತಿದೆ. ಆದರೆ ಚೀನಾ ಸೈನಿಕರ ಆಕ್ರಮಣಕಾರಿ ನಡೆಗೆ ಭಾರತೀಯ ಸೇನೆ ಸಂಯಮ ಪಾಲಿಸುತ್ತಾ ತಡೆ ಒಡ್ಡುತ್ತಿವೆ. ಆದರೂ ಚೀನಾ ಸೇನೆ ಪುನಃ ತಮ್ಮ ಭೂಪ್ರದೇಶಕ್ಕೆ ವಾಪಸಾಗಲು ನಿರಾಕರಿಸಿ ವಾಗ್ವಾದಕ್ಕೆ ಇಳಿದಿರುವ ವೀಡಿಯೋ ಹೊರಬಿದ್ದಿದೆ. ಈ ವೀಡಿಯೋದಲ್ಲಿ ಚೀನಾ ಪೀಪಲ್ಸ್ ಲಿಬರೇಷನ್ ಆರ್ಮಿ ಸೈನಿಕರು, ಭಾರತದ ಭೂಪ್ರದೇಶದೊಳಕ್ಕೆ ನುಗ್ಗಿ ಬರುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಭಾರತೀಯ ಸೈನಿಕರು ಅವರನ್ನು ತಡೆದು ಹಿಂದೆ ಕಳುಹಿಸುತ್ತಿರುವ ದೃಶ್ಯಗಳು ವೀಡಿಯೋದಲ್ಲಿವೆ. ಈ ಸಂದರ್ಭದಲ್ಲಿ ಉಭಯ ದೇಶಗಳ ಸೈನಿಕರ ನಡುವೆ ಉದ್ವಿಘ್ನ ವಾತಾವರಣ ನೆಲೆಸಿದೆ.

ಸಿಕ್ಕಿಂ ಸೆಕ್ಟಾರ್ ನಲ್ಲಿ ಭೂತಾನ್ ಭೂಭಾಗದಲ್ಲಿ ಚೀನಾ ಸೇನೆ ರಸ್ತೆ ನಿರ್ಮಾಣ ಮಾಡುತ್ತಿರುವುದರಿಂದ ಚೀನಾ-ಭಾರತ ಸೇನಗಳ ನಡುವೆ ಘರ್ಷಣೆಯ ವಾತಾವರಣ ಇರುವುದು ತಿಳಿದಿರುವುದೇ. ಸಿಕ್ಕಿಂ ಕಡೆ ಇರುವ ಗಡಿಯಲ್ಲಿ ತಮ್ಮ ಭೂಪ್ರದೇಶದಲ್ಲಿ ಭಾರತೀಯ ಯೋಧರು ಪ್ರವೇಶಿಸಿ ಹೆದ್ದಾರಿ ನಿರ್ಮಾಣವನ್ನು ತಡೆಯುತ್ತಿದ್ದಾರೆ ಎಂದು ಚೀನಾ ಆರೋಪಿಸಿದೆ. ಆದರೆ ಚೀನಾದ ಸೈನಿಕರೇ ನಮ್ಮ ಭೂಭಾಗದೊಳಗೆ ಪ್ರವೇಶಿಸಿ ಎರಡು ಬಂಕರ್ ಗಳನ್ನು ಧ್ವಂಸಗೊಳಿಸಿದ್ದಾರೆ ಎಂದು ಭಾರತೀಯ ಸೇನೆಯ ಆರೋಪ. ಮತ್ತೊಂದು ಕಡೆ ಚೀನಾ ರಸ್ತೆ ನಿರ್ಮಾಣವನ್ನು ಭೂತಾನ್, ಭಾರತ ವಿರೋಧಿಸುತ್ತಿವೆ.

ಆದರೆ, ಚೀನಾ ಮಾತ್ರ ಭಾರತದ ಪಡೆಗಳು ತಮ್ಮ ಭೂಭಾಗದೊಳಕ್ಕೆ ಪ್ರವೇಶಿಸಿವೆ ಎಂದು ಆರೋಪಿಸಿ, ಭಾರತೀಯ ಯಾತ್ರಿಗಳು ಕೈಗೊಳ್ಳುವ ಮಾನಸ ಸರೋವರ ಯಾತ್ರೆಯನ್ನು ರದ್ದುಗೊಳಿಸಿದೆ. ಹೀಗಾಗಿ ಸಿಕ್ಕಿಂ ಸೆಕ್ಟಾರ್ ನಲ್ಲಿ ಎರಡೂ ದೇಶಗಳ ಸೈನಿಕರು ಘರ್ಷಣೆಗಿಳಿದಿದ್ದಾರೆ. ಸಿಕ್ಕಿಂ-ಭೂತಾನ್-ಟಿಬೆಟ್ ಸೇರುವ ಪ್ರದೇಶ, ಪಶ್ಚಿಮ ಬಂಗಾಳದ ಸಿಲಿಗುಡಿ ಕಾರಿಡಾರ್ ಐದು ಕಿ.ಮೀ ದೂರದಲ್ಲಿ ಎರಡೂ ಸೇನೆಗಳು ನಿಯೋಜನೆಗೊಂಡಿವೆ.

ತೀವ್ರ ಪ್ರಕ್ಷುಬ್ಭ ವಾತಾವರಣ ನೆಲೆಸಿರುವ ಸಿಕ್ಕಿಂ ಗಡಿಯ ಬಳಿಯೇ ಈ ಘಟನೆ ನಡೆದಿರುವುದಾಗಿ ತಿಳಿದು ಬಂದಿದೆ. ಗಡಿಯಲ್ಲಿನ ವಾತಾವರಣ ಈ ವೀಡಿಯೋ ಮೂಲಕ ಜಗಜ್ಜಾಹೀರಾಗಿದೆ. ಮತ್ತೊಂದು ಕಡೆ ಸದ್ಯ ಉದ್ಭವಿಸಿರುವ ಸಮಸ್ಯೆ ವಿಷಯದಲ್ಲಿ ರಾಜಿಗೆ ಅವಕಾಶವೇ ಇಲ್ಲ, ಅದನ್ನು ಬಗೆಹರಿಸಿವು ಜವಾಬ್ದಾರಿ ಭಾರತದ ಮೇಲೆಯೇ ಇದೆ ಎಂದು ಚೀನಾ ನಿನ್ನೆ ಸ್ಪಷ್ಟಪಡಿಸಿದೆ.

Loading...