ಚೀನಾ ಸರ್ಕಾರಿ ಮಾಧ್ಯಮದಿಂದ ಮೋದಿ ಹೊಗಳಿಕೆ...! |News Mirchi

ಚೀನಾ ಸರ್ಕಾರಿ ಮಾಧ್ಯಮದಿಂದ ಮೋದಿ ಹೊಗಳಿಕೆ…!

ಬೀಜಿಂಗ್: ಕಳೆದ ಕೆಲವು ದಿನಗಳಿಂದ ಸಿಕ್ಕಿಂ ಗಡಿ ವಿವಾದದ ವಿಷಯವಾಗಿ ನಿರಂತರವಾಗಿ ಭಾರತದ ವಿರುದ್ಧ ಕೆಂಡ ಕಾರುವ ಲೇಖನಗಳನ್ನು ಪ್ರಕಟಿಸುತ್ತಿದ್ದ ಚೀನಾ ಸರ್ಕಾರದ ಧ್ವನಿ ಎಂದೇ ಕರೆಯಲಾಗುವ ಗ್ಲೋಬಲ್ ಟೈಮ್ಸ್ ಪತ್ರಿಕೆ, ಮೋದಿ ಆಡಳಿತವನ್ನು ಮೆಚ್ಚಿ ವರದಿ ಪ್ರಕಟಿಸಿದೆ.

ಭಾರತದಲ್ಲಿ ಜಾರಿಗೆ ತಂದಿರುವ ವಸ್ತು ಸೇವಾ ತೆರಿಗೆ(ಜಿಎಸ್ಟಿ) ನೀತಿ ಐತಿಹಾಸಿಕ, ಈ ಹಿರಿಮೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲಬೇಕು ಎಂದು ಅಭಿಪ್ರಾಯಪಟ್ಟಿದೆ. ಅತಿ ಕಡಿಮೆ ವೆಚ್ಚದ ತಯಾರಿಕಾ ಕ್ಷೇತ್ರ ನಿಧಾನವಾಗಿ ಚೀನಾದಿಂದ ಹೊರಗೆ ಹೋಗುತ್ತಿದೆ. ಮುಂದಿನ ದಿನಗಳಲ್ಲಿ ವಿಶ್ವ ಮಾರುಕಟ್ಟೆಯಲ್ಲಿ ಚೀನಾ ಸ್ಥಾನವನ್ನು ಭಾರತ ತುಂಬುವ ಸಾಧ್ಯತೆಗಳಿವೆ ಎಂದು ಅಲ್ಲಿನ ವಾರ್ತಾ ಪತ್ರಿಕೆ ಗ್ಲೋಬಲ್ ಟೈಮ್ಸ್ ಲೇಖನವನ್ನು ಪ್ರಕಟಿಸಿದೆ.

ಚೀನಾ ಗೊಡ್ಡು ಬೆದರಿಕೆಗಳಿಗೆ ಜಗ್ಗದ ಭಾರತೀಯ ಸೇನೆ

ಭಾರತ ಚೀನಾ ನಡುವಿನ ಗಡಿಯಾಗಿರುವ ಸಿಕ್ಕಿಂ ಪ್ರದೇಶದ ವಿಷಯದಲ್ಲಿ ಚೀನಾ ಪ್ರತಿದಿನ ಭಾರತ ವಿರೋಧಿ ಹೇಳಿಕೆಗಳನ್ನು ನೀಡುತ್ತಿರುವುದು ತಿಳಿದಿರುವುದೇ. ಸುಮಾರು ಒಂದು ತಿಂಗಳಿನಿಂದ ಇದು ಮುಂದುವರೆಯುತ್ತಿದೆ. ಆದರೆ ಆಶ್ಚರ್ಯಕರ ರೀತಿಯಲ್ಲಿ ಗ್ಲೋಬಲ್ ಟೈಮ್ಸ್ ಈ ಲೇಖನ ಪ್ರಕಟಿಸಿರುವುದು ಮಹತ್ವ ಪಡೆದಿದೆ.

ಭಾರತದಲ್ಲಿ ಮೂಲ ಸೌಕರ್ಯಗಳ ಕೊರತೆ ಮತ್ತು ನೀತಿಗಳನ್ನು ಜಾರಿ ಮಾಡುವಲ್ಲಿ ರಾಜ್ಯಗಳ ನಡುವೆ ಸಮಸ್ಯೆಗಳು ಎದುರಾಗುತ್ತಿರುತ್ತವೆ ಎಂದು ಹೇಳಿರುವ ಗ್ಲೋಬಲ್ ಟೈಮ್ಸ್, ಆ ಸಮಸ್ಯೆಗಳನ್ನೂ ಕೂಡಾ ಸದ್ಯದ ಭಾರತ ಸರ್ಕಾರ ದಾಟಿ ಮುಂದೆ ಸಾಗುತ್ತದೆ. ಹೊಸ ತೆರಿಗೆ ನೀತಿ ಜಿಎಸ್ಟಿ ನೀತಿಯ ಮೇಕ್ ಇನ್ ಇಂಡಿಯಾ ಕಾರ್ಯಕ್ರಮಗಳಿಗೆ ಮತ್ತಷ್ಟು ಹುರುಪು ನೀಡುತ್ತದೆ ಎಂದು ಹೇಳಿದೆ.

ಜಿಯೋ ಪ್ರಕಟಿಸಿದ ಹೊಸ ಆಫರ್ ಗಳು

ರಾಜ್ಯಗಳ ನಡುವಿನ ವಿರೋಧಾಭಾಸಗಳನ್ನು ಈ ಹೊಸ ತೆರಿಗೆ ನೀತಿ ಹೋಗಲಾಡಿಸಿ, ಕೇಂದ್ರ ಮತ್ತು ರಾಜ್ಯ ತೆರಿಗೆಗಳನ್ನು ಒಂದು ಮಾಡುತ್ತದೆ. ಹೀಗಾಗಿ ಕಾಮನ್ ನೇಷನ್ ಮಾರ್ಕೆಟ್ ರಚನೆಯಾಗುತ್ತದೆ. ಇದರಿಂದಾಗಿ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಣುತ್ತದೆ. ಪ್ರಧಾನಿ ಮೋದಿ ಮೇಕ್ ಇನ್ ಇಂಡಿಯಾ ಕಾರ್ಯಕ್ರಮ ಆರಂಭಿಸಿದ 2014 ಸೆಪ್ಟೆಂಬರ್ ನಿಂದ ಭಾರತವನ್ನು ಮತ್ತಷ್ಟು ಒಗ್ಗೂಡಿಸಲು ಶ್ರಮಿಸುತ್ತಿದ್ದಾರೆ. ಇದು ವಿಶ್ವ ಮಾರುಕಟ್ಟೆಯನ್ನು ಆಕರ್ಷಿಸಲು ಉತ್ತಮ ಕೆಲಸ ಎಂದು ಚೀನಾ ಮೀಡಿಯಾ ಹೇಳಿದೆ.

Loading...
loading...
error: Content is protected !!