chinnasandra-grama-panchaya
ಪಿಡಿಒ ಅವರನ್ನು ಪ್ರಶ್ನಿಸುತ್ತಿರುವ ಎಜಾಜ್ ಖಾನ್, ಇನಾಯತ್ ಬಾಬು ಮತ್ತು ಹೀರಪ್ಪ ಗುಂಪು

ಚಿನ್ನಸಂದ್ರ ಗ್ರಾ.ಪಂ.ಯಲ್ಲಿ ಎಂಸಿ ಬೆಂಬಲದಿಂದ ಗೆದ್ದ ಸದಸ್ಯರಲ್ಲಿ ಬಿರುಕು

ಎಂಸಿ ಸುಧಾಕರ್ ರವರ ಭದ್ರಕೋಟೆಯಾಗಿದ್ದ ಚಿನ್ನಸಂದ್ರ ಗ್ರಾಪಂ ಛಿದ್ರವಾಗಿದೆ. ಆಡಳಿತ ಪಕ್ಷದ ಸದಸ್ಯರಲ್ಲೇ ಎರಡು ಗುಂಪುಗಳಾಗಿದ್ದು, ಒಂದು ಗುಂಪನ್ನು ಬಿಟ್ಟು ಸಭೆ ಕರೆಯುತ್ತಿರುವ ಮತ್ತೊಂದು ಗುಂಪು.

ಚಿಂತಾಮಣಿ. ಫೆ. 13: ತಾಲೂಕಿನ ಚಿನ್ನಸಂದ್ರ ಗ್ರಾಮ ಪಂಚಾಯ್ತಿ ಆಡಳಿತಾರೂಢ ಸದಸ್ಯರಲ್ಲಿ ವೈಮನಸ್ಸು ಹುಟ್ಟಿಕೊಂಡು ಎರಡು ಗುಂಪುಗಳಾಗಿ ವಿಂಗಡಣೆಯಾಗಿರುವುದು ಗ್ರಾ.ಪಂ ಮತದಾರರಲ್ಲಿ ಕುತುಹಲ ಕೆರಳಿಸಿದೆ.

ಹೌದು ಪ್ರತಿ ಚುನಾವಣೆಯಲ್ಲಿಯೂ ಕ್ಷೇತ್ರದ ಮಾಜಿ ಶಾಸಕ ಎಂ.ಸಿ. ಸುಧಾಕರ್ ಬಣಕ್ಕೆ ಭದ್ರಕೋಟೆಯಾಗಿದ್ದ ಚಿನ್ನಸಂದ್ರ ಗ್ರಾಮ ಪಂಚಾಯ್ತಿ ಇಂದು ಎರಡು ಗುಂಪುಗಳಾಗಿ ವಿಂಗಡನೆಯಾಗಿದೆ. ಈ ಬೆಳವಣಿಗೆಯಿಂದ ಎಂ.ಸಿ. ಸುಧಾಕರ್ ರವರ ಭದ್ರಕೋಟೆ ಛಿದ್ರವಾದಂತಾಗಿದ್ದು, ಪ್ರತಿ ಚುನಾವಣೆಯಲ್ಲೂ ತಾಲೂಕಿನಲ್ಲೇ ಅಧಿಕ ಮತಗಳನ್ನು ಗಳಿಸುತ್ತಿದ್ದ ಎಂಸಿ ಬಣಕ್ಕೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹಿನ್ನೆಡೆಯಾಗುವುದೇ? ಎಂದು ಮತದಾರರು ಕುತುಹಲದಿಂದ ನೋಡುವಂತಾಗಿದೆ.

ಅಧ್ಯಕ್ಷರ ಗಂಡನ ಸರ್ವಾಧಿಕಾರಕ್ಕೆ ಎರಡು ಗುಂಪುಗಳಾದವು

ಚಿನ್ನಸಂದ್ರ ಗ್ರಾಪಂನಲ್ಲಿ ಅಧ್ಯಕ್ಷರ ಗಂಡನ ಪಾರುಪತ್ಯ ಹೆಚ್ಚಾದ ಕಾರಣ ಆಡಳಿತ ಪಕ್ಷದ ಕೆಲವು ಸದಸ್ಯರು ಕುಪಿತಗೊಂಡಿದ್ದಾರೆ. ಅಷ್ಟೇ ಅಲ್ಲದೆ ಆಡಳಿತ ಸದಸ್ಯರಾಗಿದ್ದು ಯಾವುದೇ ವಿಚಾರಗಳನ್ನು ಚರ್ಚಿಸಲು ಅವಕಾಶವಿಲ್ಲದ ಕಾರಣ ಎಂ.ಸಿ. ಸುಧಾಕರ್ ಬೆಂಬಲರಿಗರಾಗಿದ್ದರೂ ಎಜಾಜ್ ಖಾನ್, ಇನಾಯತ್ ಬಾಬು ಮತ್ತು ಹೀರಪ್ಪ ಎಂಬುವರೊಂದಿಗೆ ಹಲವು ಸದಸ್ಯರು ಸೇರಿ ಅದ್ಯಕ್ಷರ ವಿರುದ್ದ ಮತ್ತೊಂದು ಗುಂಪಾಗಿ ವಿಂಗಡಣೆಯಾಗಿದೆ ಎಂದು ಕೆಲವು ಸದಸ್ಯರು ಹೇಳಿದ್ದಾರೆ.

ಸಭೆಗೆ ಕಡೆಗಣನೆ

ಗ್ರಾಪಂ ಆಡಳಿತ ಸದಸ್ಯರಲ್ಲಿ ಎರಡು ಗುಂಪುಗಳಾಗಿದ್ದ ಪರಿಣಾಮ ಕಳೆದ ಎರಡು ಗ್ರಾಮ ಸಭೆಗಳಿಂದ ಎಜಾಜ್ ಖಾನ್, ಇನಾಯತ್ ಬಾಬು ಮತ್ತು ಹೀರಪ್ಪ ರವರನ್ನು ಒಳಗೊಂಡ ಗುಂಪನ್ನು ಕಡೆಗಣಿಸಿ ಕೇವಲ ಅಧ್ಯಕ್ಷರ ಗುಂಪೊಂದೇ ಬೆರಳೆಣಿಕೆಯಷ್ಟು ಸದಸ್ಯರನ್ನು ಗ್ರಾಮಸ್ಥರನ್ನು ಕರೆಸಿ ಕೇವಲ ಒಂದು ಗಂಟೆ ಸಮಯದಲ್ಲೇ ಗ್ರಾಮ ಸಭೆಯನ್ನು ಮುಕ್ತಾಯಗೊಳಿಸಿದ್ದಾರೆಂದು ಎಜಾಜ್ ಖಾನ್ ಆರೋಪಿಸಿದ್ದಾರೆ.

ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಚಿಂತಾಮಣಿಯ ದೇವಾಲಯಗಳಿಗೆ ಹರಿದು ಬಂದ ಭಕ್ತ ಸಾಗರ

ಅವರು ಇಲ್ಲಿಯವೆರಗೂ ಎರಡು ಮೂರು ಸಭೆಗಳಿಗೆ ನಮ್ಮನ್ನು ಕಡೆಗಣಿಸಿದ್ದು ಕಳೆದ ಜ.31 ರಂದು ನಡೆದ ಸಭೆಗೂ ಸಹ ನಮ್ಮನ್ನು ಕಡೆಗಣಿಸಿ ಸಭೆಯನ್ನು ನಡೆಸಿದ್ದಾರೆ. ಈ ಕುರಿತು ಪಿಡಿಒ ಅದಿಕಾರಿಗಳನ್ನು ಕೇಳಿದಾಗ, ಇದರಲ್ಲಿ ನಮ್ಮದೇನೂ ಇಲ್ಲ, ಅಧ್ಯಕ್ಷರ ಆದೇಶದಂತೆಯೇ ನಾವು ನಡೆಯಬೇಕಿರುವುದರಿಂದ ಏನೇ ಇದ್ದರೂ ಅಧ್ಯಕ್ಷರನ್ನು ಕೇಳಿ ಎಂದು ಹಾರಿಕೆ ಉತ್ತರ ನೀಡುತ್ತಾರೆ ಎಂದು ತಿಳಿಸಿದ್ದಾರೆ.

ಪ್ರಚಾರ ಮಾಡದೆ ಸಭೆ ನಡೆಸಿದ್ದಾರೆ

ಯಾವುದೇ ಗ್ರಾ.ಪಂ ಸಭೆ ನಡೆಸಬೇಕಾದರೆ ಗ್ರಾ.ಪಂ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಗ್ರಾಮಸ್ಥರಿಗೆ ಕರಪತ್ರಗಳ ಮೂಲಕ ತಿಳಿಸಬೇಕು ಮತ್ತು ಗ್ರಾಮಗಳಲ್ಲಿ ಡಂಗೂರ ಸಾರಬೇಕು. ಆದರೆ ಕಳೆದ 31 ರಂದು ಯಾವುದೇ ಪ್ರಚಾರವಿಲ್ಲದೆ ಕೇವಲ ಬೆರಳೆಣಿಕೆಯಷ್ಟು ಸದಸ್ಯರೊಂದಿಗೆ ಕೆಲವೇ ಕೆಲವು ಗ್ರಾಮಸ್ಥರನ್ನು ಸೇರಿಸಿ ಅಧ್ಯಕ್ಷ ಮತ್ತು ಪಿಡಿಒಗಳು ಸಭೆ ನಡೆಸಿದ್ದಾರೆಂದು ಎಜಾಜ್ ಖಾನ್ ಆರೋಪಿಸಿದ್ದಾರೆ.

ಬಾಲಕನನ್ನು ಕೊಂದು ಒಂದು ತಿಂಗಳು ಸೂಟ್ಕೇಸ್ ನಲ್ಲಿ ಬಚ್ಚಿಟ್ಟಿದ್ದ ಐಎಎಸ್ ಆಕಾಂಕ್ಷಿಯ ಬಂಧನ

ಈ ಕುರಿತು ಪಿಡಿಒ ಸುರೇಶ್ ರವರನ್ನು ಕೇಳಿದಾಗ ಸಭೆಯ ಬಗ್ಗೆ ಕರಪತ್ರಗಳನ್ನು ಪ್ರಕಟಿಸಿ ಹಂಚಿಕೆ ಮಾಡಿದ್ದೇವೆ ಮತ್ತು ಗ್ರಾಮಗಳಲ್ಲಿ ಡಂಗೂರ ಸಾರಿದ್ದೇವೆ, ಆದರೂ ಕೆಲವು ಸದಸ್ಯರು, ಗ್ರಾಮಸ್ಥರು ಸಭೆಯ ಬಗ್ಗೆ ಮಾಹಿತಿ ಇಲ್ಲವೆಂದು ತಿಳಿಸಿದ್ದಾರೆ. ಆದ್ದರಿಂದ ಅಧ್ಯಕ್ಷರೊಂದಿಗೆ ಚರ್ಚಿಸಿ ಮತ್ತೊಮ್ಮೆ ಸಭೆ ನಡೆಸುವುದಾಗಿ ತಿಳಿಸಿದ್ದಾರೆ.

Get Latest updates on WhatsApp. Send ‘Subscribe’ to 8550851559