ಎಟಿಎಂ ಗಳಿಂದ ಡೆಬಿಟ್ ಕಾರ್ಡ್ ಮಾಹಿತಿ ಕದಿಯುತ್ತಿದ್ದ ಖತರ್ನಾಕ್ ಕಳ್ಳರು ಸಿಐಡಿ ಬಲೆಗೆ |News Mirchi

ಎಟಿಎಂ ಗಳಿಂದ ಡೆಬಿಟ್ ಕಾರ್ಡ್ ಮಾಹಿತಿ ಕದಿಯುತ್ತಿದ್ದ ಖತರ್ನಾಕ್ ಕಳ್ಳರು ಸಿಐಡಿ ಬಲೆಗೆ

ಬೆಂಗಳೂರು: ಎಟಿಎಂ ಗಳಲ್ಲಿ ಸ್ಕಿಮ್ಮಿಂಗ್ ಡಿವೈಸ್ ಅಳವಡಿಸಿ ಬ್ಯಾಂಕ್ ಗ್ರಾಹಕರ ಖಾತೆಯಿಂದ ಹಣ ಲಪಟಾಯಿಸುತ್ತಿದ್ದ ಅಂತರಾಷ್ಟ್ರೀಯ ಖದೀಮರ ಗ್ಯಾಂಗ್ ಅನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ರೊಮಾನಿಯಾದ ಡಾನ್ ಸ್ಯಾಬಿಯನ್ ಕ್ರಿಶ್ಚಿಯನ್(44) ಮತ್ತು ಹಂಗೇರಿಯಾದ ಜಾನೋಸ್(41) ಬಂಧಿತರು.

ಇವರು ಕೊಟ್ಯಾಕ್ ಮಹೀಂದ್ರ ಬ್ಯಾಂಕ್ ಎಟಿಎಂ ಗಳನ್ನು ಗುರಿಯಾಗಿಸಿ ಸ್ಕಿಮ್ಮಿಂಗ್ ಡಿವೈಸ್ ಅಳವಡಿಸುತ್ತಿದ್ದರು. ಜೊತೆಗೆ ಪಾಸ್ ವರ್ಡ್ ತಿಳಿದುಕೊಳ್ಳಲು ಹಿಡನ್ ಕ್ಯಾಮರಾ ಅಳವಡಿಸುತ್ತಿದ್ದರು. ಹೀಗೆ ಐದು ಕೊಟ್ಯಾಕ್ ಮಹೀಂದ್ ಬ್ಯಾಂಕ್ ಎಟಿಎಂ ಗಳಲ್ಲಿ ಖದೀಮರು ತಮ್ಮ ಕೈಚಳಕ ತೋರಿಸಿದ್ದಾರೆ.

ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಗಳ ಮಾಹಿತಿ ಕದಿಯಲೆಂದೇ ಬಂಧಿತರು ಭಾರತಕ್ಕೆ ಬಂದಿದ್ದು, ವಿದೇಶದಲ್ಲಿದ್ದ ತಮ್ಮ ಸಹಚರರ ನಿರ್ದೇಶನದಂತೆ ಈ ಕೃತ್ಯಗಳನ್ನು ನಡೆಸುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ.

ಹಣ ಕಳೆದುಕೊಂಡಿದ್ದಾಗಿ ಗ್ರಾಹಕರಿಂದ ದೂರುಗಳ ಬಂದ ಹಿನ್ನೆಲೆಯಲ್ಲಿ ಬ್ಯಾಂಕ್ ಅಧಿಕಾರಿಗಳು ಸಿಐಡಿಗೆ ದೂರು ನೀಡಿದ್ದರು. ನಗರದ ಐದು ಎಟಿಎಂ ಗಳಲ್ಲಿ ಗ್ರಾಹಕರ ಡಾಟಾ ಕದಿಯಲು ಸ್ಕಿಮ್ಮಿಂಗ್ ಮಷೀನ್ ಅಳವಡಿಸಿರುವುದು ಸಿಐಡಿ ತನಿಖೆಯಲ್ಲಿ ಪತ್ತೆಯಾಗಿದೆ.

ಸ್ಕಿಮ್ಮಿಂಗ್ ಡಿವೈಸ್ ಮೂಲಕ ಗ್ರಾಹಕರ ಖಾತೆಯ ಡಾಟಾ ಕದಿಯುತ್ತಿದ್ದ ಕಳ್ಳರು, ಅದನ್ನು ಬಳಸಿ ನಕಲಿ ಕಾರ್ಡ್ ತಯಾರಿಸಿ, ಹಿಡನ್ ಕ್ಯಾಮೆರಾದಲ್ಲಿ ದಾಖಲಾಗುತ್ತಿದ್ದ ಪಾಸ್ ವರ್ಡ್ ಬಳಸಿ ಹಣ ಡ್ರಾ ಮಾಡುತ್ತಿದ್ದರು. ಕ್ರೆಡಿಟ್ ಕಾರ್ಡ್ ಸ್ಕಿಮ್ಮಿಂಗ್ ಎನ್ನುವುದು ಬ್ಯಾಂಕ್ ಖಾತೆಗಳಿಂದ ಹಣ ಕದಿಯಲು ಕಳ್ಳರು ಬಳಸುವ ಒಂದು ಸಣ್ಣ ಸಾಧನ.

ಹೋಮ್ ಪೇಜ್ ಗೆ ಕ್ಲಿಕ್ಕಿಸಿ

Get Latest updates on WhatsApp. Send ‘Add Me’ to 8550851559

Loading...
loading...
error: Content is protected !!