ಮೊದಲ ವೇತನವನ್ನು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೀಡಲಿರುವ ನಂದಿನಿ |News Mirchi

ಮೊದಲ ವೇತನವನ್ನು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೀಡಲಿರುವ ನಂದಿನಿ

ಸಿವಿಲ್ಸ್ ನಲ್ಲಿ ದೇಶದಕ್ಕೇ ಟಾಪರ್ ಆಗಿ ಕರ್ನಾಟಕಕ್ಕೆ ಕೀರ್ತಿ ತಂದ ಕೋಲಾರದ ಕೆ.ಆರ್.ನಂದಿನಿ ತಮ್ಮ ಮೊದಲ ವೇತನವನ್ನು ಉಚಿತ ಶಿಕ್ಷಣಕ್ಕಾಗಿ ನೀಡುತ್ತಿರುವುದಾಗಿ ಹೇಳಿದ್ದಾರೆ. ಐಎಎಸ್ ಟಾಪರ್ ಆದ ನಂದಿನಿ ಶಿಕ್ಷಣಕ್ಕೆ ತಮ್ಮ ಮೊದಲ ಆದ್ಯತೆ ಎಂದು ಹೇಳಿದ್ದರು. ಸದ್ಯ ಅವರು ತಮ್ಮ ಮೊದಲ ವೇತನವನ್ನು ಆಳ್ವಾ ಎಜುಕೇಷನ್ ಫೌಂಡೇಷನ್ ಉಚಿತ ಶಿಕ್ಷಣ ಯೋಜನೆಗೆ ನೀಡುವುದಾಗಿ ಪ್ರಕಟಿಸಿದ್ದಾರೆ. ತಮ್ಮ ಕುಟುಂಬ ಸದಸ್ಯರೊಂದಿಗೆ ಶುಕ್ರವಾರ ಆಳ್ವಾ ಫೌಂಡೇಷನ್ ಗೆ ಭೇಟಿ ನೀಡಿದ ನಂದಿನಿ, ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾಗಿ ಫೌಂಡೇಷನ್ ಹೇಳಿದೆ. ಈ ಫೌಂಡೇಷನ್ ಚೇರ್ಮನ್ ಮೋಹನ್ ಆಳ್ವಾ ಅವರನ್ನು ಭೇಟಿ ಮಾಡಿದ ನಂದಿನಿ, ವಿದ್ಯಾಭ್ಯಾಸ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ತಾವು ನೆರವು ನೀಡುವುದು ಮುಂದುವರೆಸುತ್ತೇನೆ ಎಂದು ಹೇಳಿದರು.

ತಂದೆ ರಮೇಶ್ ರವರೊಂದಿಗೆ ನಂದಿನಿ

ಇದೇ ಆಳ್ವಾ ಫೌಂಡೇಷನ್ ಎಜುಕೇಷನ್ ಸ್ಕೀಮ್ ನಡಿ ನೆರವು ಪಡೆದ ಫಲಾನುಭವಿಗಳಲ್ಲಿ ನಂದಿನಿ ಕೂಡಾ ಒಬ್ಬರು. ನಂದಿನಿಯವರ ಸಾಧನೆಯನ್ನು ಮೆಚ್ಚಿದ ಮೋಹನ್ ಆಳ್ವಾ, ಆಕೆಗೆ ಒಂದು ಲಕ್ಷ ರೂಪಾಯಿಗಳನ್ನು ಬಹುಮಾನವನ್ನಾಗಿ ನೀಡಿದರು. ಕನ್ನಡ ಸಾಹಿತ್ಯದೊಂದಿಗೆ ತಮಗಿದ್ದ ಒಲವು, ತಮ್ಮ ಗುರಿ ಸಾಧಿಸಲು ತುಂಬಾ ಸಹಕಾರಿಯಾಯಿತು ಎಂದು ನಂದಿನಿ ಹೇಳಿದ್ದಾರೆ. ಸಿವಿಲ್ ಇಂಜಿನಿಯರಿಂಗ್ ನಲ್ಲಿ ಬಿಟೆಕ್ ಪೂರ್ಣಗೊಳಿಸಿದ ನಂದಿನಿ, ಐಎಎಸ್ ಪರೀಕ್ಷೆಯಲ್ಲಿ ಆಪ್ಷನಲ್ ಆಗಿ ಕನ್ನಡ ಸಾಹಿತ್ಯವನ್ನು ಆಯ್ಕೆ ಮಾಡಿಕೊಂಡಿದ್ದರು.

  • No items.

ನಂದಿನಿಯವರ ತಂದೆ ಕೆ.ವಿ.ರಮೇಶ್, ತಾಯಿ ವಿಮಲಮ್ಮ ಈ ಫೌಂಡೇಷನ್ ಸಂದರ್ಶನದಲ್ಲಿ ತಮ್ಮ ಮಗಳೊಂದಿಗೆ ಪಾಲ್ಗೊಂಡಿದ್ದರು. ಐಎಎಸ್ ಅಧಿಕಾರಿಯಾಗುವುದನ್ನೇ ಗುರಿಯಾಗಿಸಿಕೊಂಡು ನಾಲ್ಕನೇ ಪ್ರಯತ್ನದಲ್ಲಿ ಆಕೆ ಈ ಸಾಧನೆಯನ್ನು ಮಾಡಿದರು.

Loading...
loading...
error: Content is protected !!