ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ನಲ್ಲಿ ಒಡಕು

ಮೂರು ದಿನಗಳಿಂದ ನಗರದಲ್ಲಿ ನಡೆದ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಪ್ಲೀನರಿ ಬೋರ್ಡ್ ಸಭೆಗಳಲ್ಲಿ ಕುತೂಹಲಕಾರಿ ಬೆಳವಣಿಗೆಗಳಿಂದ ಮುಗಿದಿದೆ. ಕೋರ್ ಕಮಿಟಿ ಸದಸ್ಯ ಸಲ್ಮಾನ್ ನದ್ವೀ ಅವರು ಬೋರ್ಡ್ ನಿಂದ ಹೊರಹೋಗುತ್ತಿರುವುದಾಗಿ ಪ್ರಕಟಿಸಿದ್ದಾರೆ. ಅಷ್ಟೇ ಅಲ್ಲದೆ ಹೊಸ ಬೋರ್ಡ್ ರಚಿಸುವುದಾಗಿ ಅವರು ಹೇಳಿದ್ದಾರೆ. ಮತ್ತೊಂದೆಡೆ ಬೋರ್ಡ್ ಕೂಡಾ ನದ್ವೀ ಅವರನ್ನು ತೊಲಗಿಸುತ್ತಿರುವುದಾಗಿ ಘೋಷಿಸಿದೆ. ಹೀಗಾಗಿ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ನಲ್ಲಿ ಒಡಕು ಮೂಡಿದಂತಾಗಿದೆ.

ಬೋರ್ಡ್ ಪ್ಲೀನರಿ ಮೊದಲನೇ ದಿನ ಸಭೆಗೆ ನದ್ವೀ ಗೈರು ಹಾಜರಾಗಿದ್ದಲ್ಲದೆ, ಅದೇ ದಿನದಂದು ಬಾಬ್ರಿ ಮಸೀದಿ ವಿವಾದವನ್ನು ಬಗೆಹರಿಸಲು ಶ್ರೀ ಶ್ರೀ ರವಿಶಂಕರ್ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ. ಇದರ ಜೊತೆ ಶರಿಯತ್ ಕಾನೂನು ಪ್ರಕಾರ ಬಾಬ್ರಿ ಮಸೀದಿಯನ್ನು ಬೇರೆ ಪ್ರದೇಶಕ್ಕೆ ಸ್ಥಳಾಂತರಿಸಬಹುದು ಎಂದು ರವಿಶಂಕರ್ ಅವರೊಂದಿಗೆ ಸಲ್ಮಾನ್ ನದ್ವೀ ಹೇಳಿದ್ದು ಬೋರ್ಡ್ ಸದಸ್ಯರು ಆಕ್ರೋಶಕ್ಕೆ ಕಾರಣವಾಗಿತ್ತು.

ಎರಡನೇ ದಿನ ಬೋರ್ಡ್ ಸಭೆಗೆ ಸಲ್ಮಾನ್ ಹಾಜರಾದರೂ, ಅವರಿಗೆ ಹಲವು ಸದಸ್ಯರು ವಿರೋಧಿಸಿ ಘೋಷಣೆ ಕೂಗಿದರು. ರವಿಶಂಕರ್ ಭೇಟಿ ಕುರಿತು ವಿವರಣೆ ನೀಡಬೇಕೆಂದು ಒತ್ತಾಯಿಸಿದರು. ಇದಕ್ಕೆ ಸಲ್ಮಾನ್ ಉತ್ತರಿಸುತ್ತಾ, ಬಾಬ್ರಿ ಮಸೀದಿ ವಿವಾದವನ್ನು ರಾಜಕೀಯ ಮಾಡುತ್ತಿದ್ದಾರೆ, ಹೀಗಾಗಿಯೇ ಹಲವು ವರ್ಷಗಳಿಂದ ಅದು ವಿವಾದವಾಗಿಯೇ ಮುಂದುವರೆಯುತ್ತಿದೆ ಎಂದರು. ನ್ಯಾಯಾಲಯದ ಹೊರಗೆ ಈ ವಿವಾದವನ್ನು ಬಗೆಹರಿಸಿಕೊಳ್ಳಲು ರವಿಶಂಕರ್ ಅವರನ್ನು ಭೇಟಿಯಾಗಿದ್ದಾಗಿ ಅವರು ಹೇಳಿದರು.

ಅಗತ್ಯ ಬಿದ್ದರೆ ದೇಶಕ್ಕಾಗಿ ಗಡಿಯಲ್ಲಿ ನಿಂತು ಹೋರಾಡಲು ಆರ್.ಎಸ್.ಎಸ್ ಸಿದ್ಧ

ಇದನ್ನು ಕೇಳಿ ಸದಸ್ಯರು ನದ್ವಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಬೋರ್ಡ್ ಗಮನಕ್ಕೆ ತರದೆ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ ಎಂದು ವಾದಿಸಿದರು. ಆದರೆ ಸದಸ್ಯರ ಅಭಿಪ್ರಾಯಗಳು ನದ್ವೀಗೆ ರುಚಿಸಲಿಲ್ಲ. ಸಲ್ಮಾನ್ ನದ್ವೀ ಅವರಿಗೆ ಮೌಲಾನಾ ರಷೀದ್ ಮದನಿ ಮತ್ತು ಮೌಲಾನಾ ಮಹಮದ್ ಮದನಿ ಇಬ್ಬರು ಧರ್ಮ ಗುರುಗಳು ಬೆಂಬಲ ಪ್ರಕಟಿಸಿದರು. ಈ ಎಲ್ಲಾ ಬೆಳವಣಿಗೆಗಳ ನಂತರ ಸಲ್ಮಾನ್ ಬೋರ್ಡ್ ನಿಂದ ಹೊರಹೋಗುತ್ತಿರುವುದಾಗಿ ಪ್ರಕಟಿಸಿದರು.

ಹೈದರಾಬಾದ್ ಡಿಕ್ಲರೇಷನ್

ಭಾನುವಾರ ಕೊನೆಯ ದಿನ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಹೈದರಾಬಾದ್ ಡಿಕ್ಲರೇಷನ್ ಹೆಸರಿನಲ್ಲಿ ಕೆಲವು ನಿರ್ಣಯಗಳನ್ನು ಪ್ರಕಟಿಸಿತು. ಬೋರ್ಡ್ ಕಾರ್ಯದರ್ಶಿಗಳು ಮೌಲಾನಾ ಖಲೀದ್ ಸೈಫುಲ್ಲಾ, ಜಫರ್ ಜಿಲಾನಿ, ಉಮರೈನ್ ಮಹೇಫುಜ್, ಡಾ.ಅಸ್ಮಾ ಜಹೇರಾ, ಯಾಸೀನ್ ಉಸ್ಮಾನಿ, ರಹೀಮುದ್ದೀನ್, ಅಸದುದ್ದೀನ್ ಓವೈಸಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.

ನೆಲಕ್ಕುರುಳಿದ 71 ಪ್ರಯಾಣಿಕರಿದ್ದ ರಷ್ಯಾ ವಿಮಾನ

ಭಾರತದಲ್ಲಿ ಅಲ್ಪಸಂಖ್ಯಾತರು ಅದರಲ್ಲೂ ಮುಖ್ಯವಾಗಿ ಮುಸ್ಲಿಮರ ಮೇಲೆ ದಾಳಿಗಳು ಹೆಚ್ಚಾಗುತ್ತಿವೆ. ಇದರಿಂದಾಗಿ ಮುಸ್ಲಿಮರಿಗೆ ದೇಶದಲ್ಲಿ ಅಭದ್ರತಾಭಾವ ಕಾಡುತ್ತಿದೆ ಎಂದರು. ಮುಸ್ಲಿಮರ ಒಗ್ಗಟ್ಟನ್ನು ಒಡೆಯಲು ಹಲವು ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಆರೋಪಿಸಿದರು. ಬಾಬ್ರಿ ಮಸೀದಿ ವಿಷಯದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಓವೈಸಿ ಸ್ಪಷ್ಟಪಡಿಸಿದರು. ಬಾಬ್ರಿ ಮಸೀದಿಯನ್ನು ಬೇರೆಡೆ ಸ್ಥಳಾಂತರಿಸಲು ಬಿಡುವುದಿಲ್ಲ. ಟ್ರಿಪಲ್ ತಲಾಖ್ ಮಸೂದೆಯನ್ನು ರಾಜ್ಯಸಭೆಯಲ್ಲಿ ತಡೆಯಲು ಸಾಧ್ಯವಾದಷ್ಟು ಪ್ರಯತ್ನಿಸುತ್ತೇವೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರತಿಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ, ಒಂದು ವೇಳೆ ರಾಜ್ಯಸಭೆಯಲ್ಲಿ ಮಸೂದೆಗೆ ಅಂಗೀಕಾರ ದೊರೆತರೆ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಹೇಳಿದರು.

Get Latest updates on WhatsApp. Send ‘Subscribe’ to 8550851559