ಪಿಯುಸಿ ಓದಿದವನಿಗೆ ಗೂಗಲ್ ನಿಂದ ಬಂಪರ್ ಆಫರ್, ತಿಂಗಳಿಗೆ 12 ಲಕ್ಷ ವೇತನ!

ಸರ್ಕಾರಿ ಶಾಲೆಯಲ್ಲಿ ಓದಿದ ಕುಗ್ರಾಮವೊಂದರ 12 ನೇ ತರಗತಿ ವಿದ್ಯಾರ್ಥಿಯ ಗೂಗಲ್ ನಲ್ಲಿ ಕೆಲಸ ಮಾಡುವ ಕನಸು ಕೊನೆಗೂ ಈಡೇರುತ್ತಿದೆ. ತಿಂಗಳಿಗೆ ವೇತನವೆಷ್ಟು ಗೊತ್ತೇ ರೂ.12 ಲಕ್ಷವಂತೆ. ಚಂಡೀಗಢದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಹರ್ಷಿತ್ ಶರ್ಮ ಈ ಅದೃಷ್ಟವಂತ.

ಈತನಿಗೆ ಗೂಗಲ್ ನಲ್ಲಿ ಗ್ರಾಫಿಕ್ ಡಿಸೈನರ್ ಆಗಿ ಕೆಲಸ ಮಾಡಬೇಕೆಂಬ ಕನಸು. 10 ವರ್ಷದವನಿದ್ದಾಗಲೇ ಗ್ರಾಫಿಕ್ ಡಿಸೈನಿಂಗ್ ಶುರು ಮಾಡಿದ್ದನಂತೆ. ಗೂಗಲ್ ಸಂಸ್ಥೆಗೆ ಆಯ್ಕೆಯಾಗುತ್ತೇನೆಂದು ನಿರೀಕ್ಷಿಸಿರಲಿಲ್ಲ, ಆದರೆ ನನ್ನ ಕನಸು ಮಾತ್ರ ಅದೇ ಆಗಿತ್ತು ಎನ್ನುತ್ತಾನೆ ಹರ್ಷಿತ್. ಗ್ರಾಫಿಕ್ ಡಿಸೈನಿಂಗ್ ನಲ್ಲಿ ವಿಶೇಷ ತರಬೇತಿ ಪಡೆಯದೇ ಇರುವುದು ಮತ್ತೊಂದು ವಿಶೇಷ. ತನಗೆ ಗ್ರಾಫಿಕ್ ಡಿಸೈನಿಂಗ್ ಕುರಿತು ಕಲಿಸಿದ ತನ್ನ ಸಂಬಂಧಿ ರೋಹಿತ್ ಅವರನ್ನು ಹರ್ಷಿತ್ ನೆನಪಿಸಿಕೊಂಡು ಕೃತಜ್ಞತೆ ಸಲ್ಲಿಸುತ್ತಾರೆ.

Update: ನನ್ನ ಮಗ ತಪ್ಪು ಮಾಡಿದ್ದಾನೆ, ಗೂಗಲ್ ನಲ್ಲಿ ಉದ್ಯೋಗ ಸುಳ್ಳು

ತಾನು ಡಿಸೈನ್ ಮಾಡಿ ಕಳುಹಿಸಿದ್ದ ಪೋಸ್ಟರ್ ನೋಡಿದ ಗೂಗಲ್ ಸಂಸ್ಥೆ ಜೂನ್ ನಲ್ಲಿ ಅಪಾಯಿಂಟ್ಮೆಂಟ್ ಲೆಟರ್ ಕಳುಹಿಸಿತ್ತು. ಅಷ್ಟೇ ಅಲ್ಲದೆ ಒಂದು ವರ್ಷ ಕ್ಯಾಲಿಫೋರ್ನಿಯಾದಲ್ಲಿ ಹರ್ಷಿತ್ ಗೆ ತರಬೇತಿ ನೀಡಲಾಗುತ್ತದೆ. ಅದಕ್ಕಾಗಿ ಅಲ್ಲಿ ಆತನಿಗೆ ತಿಂಗಳಿಗೆ ರೂ.4 ಲಕ್ಷ ವಿದ್ಯಾರ್ಥಿವೇತನ ಲಭಿಸುತ್ತದೆ. ತರಬೇತಿ ಮುಗಿದ ನಂತರ ಹರ್ಷಿತ್ ಗೆ ರೂ12 ಲಕ್ಷ ಮಾಸಿಕ ವೇತನ ಸಿಗುತ್ತದೆ.

ಡಿಜಿಟಲ್ ಇಂಡಿಯಾ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನಕ್ಕೆ ಹರ್ಷಿತ್ ಪ್ರಧಾನಮಂತ್ರಿ ಕಾರ್ಯಾಲದಿಂದ ರೂ.7 ಸಾವಿರ ಬಹುಮಾನವನ್ನೂ ಪಡೆದಿದ್ದ. ವ್ಯಾಸಂಗ ಮುಂದುವರೆಸಿಕೊಂಡೇ ಹಾಲಿವುಡ್, ಬಾಲಿವುಡ್ ನಟ ನಟಿಯರ ಪೋಸ್ಟರ್ ವಿನ್ಯಾಸಗೊಳಿಸುತ್ತಿತ್ತು. ಈ ಮೂಲಕ 40 ರಿಂದ 50 ಸಾವಿರ ರೂಪಾಯಿ ಗಳಿಸುತ್ತಿದ್ದ.

ಮುಂದಿನ ಚುನಾವಣೆಯಲ್ಲಿ ಮೋದಿಗೆ ಸವಾಲೆಸೆಯಬಲ್ಲವರು ಯಾರೂ ಇಲ್ಲ: ನಿತೀಶ್ ಕುಮಾರ್