ರಾಸಲೀಲೆ ಪ್ರಕರಣ: ಮೇಟಿಗೆ ಕ್ಲೀನ್ ಚಿಟ್ ಸಾಧ್ಯತೆ

ರಾಸಲೀಲೆ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್.ವೈ.ಮೇಟಿಗೆ ಕ್ಲೀನ್ ಚಿಟ್ ನೀಡುವ ಸಾಧ್ಯತೆಗಳಿವೆ ಎನ್ನಲಾಗಿದೆ. ಪ್ರಕರಣದ ತನಿಖಾ ವರದಿಯನ್ನು ಸಿಐಡಿ ಪೊಲೀಸರು ಶೀಘ್ರದಲ್ಲೇ ಸರ್ಕಾರಕ್ಕೆ ನೀಡಲಿದೆ ಎನ್ನಲಾಗುತ್ತಿದೆ.

ಕಳೆದ ವರ್ಷ ಡಿಸೆಂಬರ್ ನಲ್ಲಿ ತಮ್ಮ ಕಛೇರಿಯಲ್ಲೇ ವರ್ಗಾವಣೆ ಕೋರಿ ಬಂದ ಮಹಿಳೆಯೊಂದಿಗೆ ಸಚಿವರು ರಾಸಲೀಲೆ ನಡೆಸಿದ ದೃಶ್ಯಗಳು ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗಿತ್ತು. ಈ ಹಿನ್ನೆಲೆಯಲ್ಲಿ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಆದರೆ ಮಹತ್ವದ ಬೆಳವಣಿಗೆಯಲ್ಲಿ ಸಂತ್ರಸ್ಥ ಮಹಿಳೆ ದೂರು ಹಿಂಪಡೆದಿದ್ದು, ಮೇಟಿ ವಿರುದ್ಧ ನೀಡಬೇಕೆಂದು ಮಹಿಳೆಯ ಮೇಲೆ ಒತ್ತಡ ತಂದಿದ್ದರೆಂದು ಮಹಿಳೆ ಮತ್ತೊಂದು ದೂರು ನೀಡಿದ್ದಾಳೆ. ಹೀಗಾಗಿ ಪ್ರಕರಣದ ದಿಕ್ಕು ಬದಲಾಗಿದೆ. ಮೇಟಿಯವರನ್ನು ರಕ್ಷಿಸಲು ಸರ್ಕಾರ ಯತ್ನಿಸುತ್ತಿದೆ ಎಂದಿರುವ ಬಿಜೆಪಿ ನಾಯಕ ಜಗದೀಶ್ ಶೆಟ್ಟರ್, ಇದರ ವಿರುದ್ಧ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.

Loading...
error: Content is protected !!