ತಮಿಳರ ಪ್ರೀತಿಯ ಅಮ್ಮಾ ಜಯಾ ಇನ್ನಿಲ್ಲ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತ(68), ಸೋಮವಾರ ರಾತ್ರಿ 11:30 ಕ್ಕೆ ಕೊನೆಯುಸಿರೆಳೆದಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಎಐಎಡಿಎಂಕೆ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಶೋಕಸಾಗರದಲ್ಲಿ ಮುಳುಗಿದ್ದಾರೆ. ಜಯಾ ಆರೋಗ್ಯದ ಆತಂಕದಿಂದ ತಮಿಳುನಾಡಿನಲ್ಲಿ 5 ಜನ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಇನ್ನು ಸೋಮವಾರ ಮಧ್ಯರಾತ್ರಿ ಪನ್ನೀರ್ ಸೆಲ್ವಂ ಪ್ರಮಾಣವಚನ ಸ್ವೀಕರಿಸಿದರು. ಜಯಲಲಿತ ಜ್ವರ, ಡಿಪ್ರೆಷನ್ ನಿಂದ ಅಕ್ಟೋಬರ್ 22 ರಂದು ಮಧ್ಯರಾತ್ರಿ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಶ್ವಾಸಕೋಶದ ಸೋಂಕಿನಿಂದಾಗಿ 74 ದಿನಗಳ ಕಾಲ ಆಕೆ ಚಿಕಿತ್ಸೆ ಪಡೆದರು. ಮೂರು ವಾರಗಳ ಹಿಂದೆಯೇ ಚೇತರಿಕೆ ಕಂಡಿದ್ದ ಅವರನ್ನು ಡುಸೆಂಬರ್ 4 ರ ಸಂಜೆ ಹಠಾತ್ ಹೃದಯಾಘಾತ ಸಂಭವಿಸಿದ್ದರಿಂದ ತಮಿಳುನಾಡಿನಾದ್ಯಂತ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಅಪೋಲೋ ಆಸ್ಪತ್ರೆ ಪ್ರಕಟಿಸಿದ ಕೆಲ ಗಂಟೆಗಳಲ್ಲೇ ಆಕೆ ಇನ್ನಿಲ್ಲ ಎಂಬ ಸುದ್ದಿ ಕೇಳಿಬಂದಿದೆ. ಜಯಾಗೆ ಚಿಕಿತ್ಸೆ ನೀಡುತ್ತಿದ್ದ ಸಮಯದಲ್ಲಿಯೇ ಎಐಎಡಿಎಂಕೆ ಶಾಸಕರು ಬೆಳಗ್ಗೆ ಮತ್ತು ರಾತ್ರಿ ಎರಡು ಬಾರಿ ಸಭೆ ಸೇರಿದ್ದರು. ಮುಂದಿನ ನಡೆಗಳ ಬಗ್ಗೆ ಚರ್ಚಿಸಿ ಮುಖ್ಯಮಂತ್ರಿ ಪಟ್ಟವನ್ನು ಪನ್ನೀರ್ ಸೆಲ್ವಂ, ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಶಶಿಕಲಾಗೆ ಪ್ರಮುಖ ಜವಾಬ್ದಾರಿ ನೀಡುವ ಕುರಿತು ಚರ್ಚಿಸಿದರು.

ಹೃದಯಾಘಾತಕ್ಕೆ ಗುರಿಯಾದ ಮುಖ್ಯಮಂತ್ರಿ ಜಯಲಲಿತ ರವರನ್ನು ವಿಶೇಷ ವಾರ್ಡ್ ನಿಂದ ತುರ್ತು ನಿಘಾ ಘಟಕಕ್ಕೆ ದಾಖಲಿಸಿದ ಅಪೋಲೋ ಆಸ್ಪತ್ರೆ ವೈದ್ಯರು ಸೋಮವಾರ ಮುಂಜಾನೆ ಶಸ್ತ್ರಚಿಕಿತ್ಸೆ ನಡೆಸಿ ಎಕ್ಮೋ(ಎಕ್ಸ್‌ಟ್ರಾಕೋರ್ಪೋರಿಯಲ್ ಮೆಂಬ್ರೇನ್ ಆಕ್ಸಿಜನೇಷನ್) ಎನ್ನುವ ವೈದ್ಯಕೀಯ ಉಪಕರಣವನ್ನು ಆಕೆಯ ಹೃದಯಕ್ಕೆ ಅಳವಡಿಸಿದರು. ಈ ಉಪಕರಣ ಹೃದಯ, ಶ್ವಾಸಕೋಶ ಸಮಸ್ಯೆಗಳಿಗೆ ಬಳಸಲಾಗುತ್ತದೆ, ನಿಂತು ಹೋದ ಹೃದಯಬಡಿತವನ್ನು ಪುನಃ ಕಾರ್ಯನಿರ್ವಹಿಸುವಂತೆ ಮಾಡುವ ಸಾಮರ್ಥ್ಯವುಳ್ಳ ಈ ಉಪಕರಣವನ್ನು ಅಳವಡಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಸೋಮವಾರ ಮುಂಜಾನೆ 3 ಗಂಟೆಗೆ ಗಂಟೆಗೆ ಆಂಜಿಯೋಗ್ರಾಮ್ ಕೂಡಾ ಮಾಡಿದ್ದಾರೆ. ‘ಅಮ್ಮ ಚೇತರಿಸಿಕೊಳ್ಳಲು ನಮ್ಮ ಕೈಲಾದಷ್ಟೂ ಪ್ರಯತ್ನಿಸುತ್ತಿದ್ದೇವೆ, ಜನರೂ ಆಕೆಗಾಗಿ ಪ್ರಾರ್ಥಿಸಿ’ ಎಂದು ಅಪೋಲೋ ಮ್ಯಾನೇಜಿಂಗ್ ಡೈರೆಕ್ಟರ್ ಸಂಗೀತಾ ರೆಡ್ಡಿ ಸೋಮವಾರ ಟ್ವೀಟ್ ಮಾಡಿದ್ದರು.

ಮಂಗಳವಾರ ಸಂಜೆ ಅಥವಾ ಬುಧವಾರ ಚೆನ್ನೈನಲ್ಲಿನ ಮೆರಿನಾ ಬೀಚ್ ನಲ್ಲಿ ಜಯಲಲಿತ ಅಂತ್ಯಕ್ರಿಯೆಗೆ ಸರ್ಕಾರ ಎಲ್ಲಾ ಸಿದ್ಧತೆ ಕೈಗೊಳ್ಳುತ್ತಿದೆ. ಮೂರು ದಿನಗಳ ಕಾಲ ಶಾಲಾ ಕಾಲೇಜುಗಳಿಗೆ ರಜೆ, ಏಳು ದಿನಗಳ ಕಾಲ ಸಂತಾಪ ದಿನಗಳೆಂದು ಘೋಷಿಸಿದ್ದಾರೆ.

Related News

Loading...

Leave a Reply

Your email address will not be published.

error: Content is protected !!