ಜಯಲಲಿತಾ ಸೀರಿಯಸ್ – News Mirchi

ಜಯಲಲಿತಾ ಸೀರಿಯಸ್

ಚೆನ್ನೈ: ಎರಡೂವರೆ ತಿಂಗಳುಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಗ್ಯದಲ್ಲಿ ಭಾನುವಾರ ಏರುಪೇರಾಗಿತ್ತು. ಆಗಿದ್ದರಿಂದ ಜನರಲ್ ವಾರ್ಡಿನಲ್ಲಿದ್ದ ರವರನ್ನು ಪುನಃ ಐಸಿಯು ಗೆ ದಾಖಲಿಸಿದರು. ವಿಶೇಷ ತಜ್ಞ ವೈದ್ಯರ ಮೇಲ್ವಿಚಾರಣೆಯಲ್ಲಿ ಆಕೆಗೆ ಚಿಕಿತ್ಸೆ ನೀಡುತ್ತಿದ್ದಾರೆ.

ಜಯಲಲಿತ ಸಂಪೂರ್ಣ ಚೇತರಿಸಿಕೊಂಡಿದ್ದಾರೆ, ಶೀಘ್ರದಲ್ಲಿ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ ಎಂದು ಪ್ರಕಟಿಸಿದ ಕೆಲ ಗಂಟೆಗಳಲ್ಲೇ ಜಯಾಗೆ ಹೃದಯಾಘಾತವಾಗಿದೆ. ಜಯಲಲಿತ ಅವರಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆ ಸುತ್ತಮುತ್ತಲಿನ ಪ್ರದೇಶದಲ್ಲಿ ಅಘೋಷಿತ ಕರ್ಫ್ಯೂ ಮುಂದುವರೆದಿದೆ. ರಾಜ್ಯಾದ್ಯಂತ ಸಶಸ್ತ್ರ ಪಡೆ, ರಿಸರ್ವ್ ಪೊಲೀಸರನ್ನು. ಆಸ್ಪತ್ರೆ ಸುತ್ತಮುತ್ತ ಜಮಾಯಿಸಿದ್ದ ಜನರನ್ನು ಖಾಲಿ ಮಾಡಿಸಿದ್ದಾರೆ. ಜಯಲಲಿತಾರಿಗೆ ಆದ ಸುದ್ದಿ ತಿಳಿಯುತ್ತಿದ್ದಂತೆ ಪಕ್ಷದ ನಾಯಕರು, ಕಾರ್ಯಕರ್ತರು, ಜಯಲಲಿತಾ ಅಭಿಮಾನಿಗಳು ಆಸ್ಪತ್ರೆ ಬಳಿ ಆಸ್ಪತ್ರೆ ಬಳಿ ಸೇರಿದರು.

ಎಂಟು ಜನ ವಿಶೇಷ ತಜ್ಞ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದ್ದು, ಲಂಡನ್ ನಲ್ಲಿರುವ ಡಾ. ರಿಚರ್ಡ್ ಬೇಲಿಯವರೊಂದಿಗೂ ಈ ತಂಡ ಸಂಪರ್ಕದಲ್ಲಿದೆ. ಜಯಾಗೆ ಚಿಕಿತ್ಸೆ ನೀಡಲು ಸೋಮವಾರ ದೆಹಲಿಯಿಂದ ಏಮ್ಸ್ ವೈದ್ಯರ ತಂಡ ಆಗಮಿಸುತ್ತಿದೆ.

ನೇವೀ ಡೇ ಆಚರಣೆಗೆ ಮುಂಬಯಿಯಲ್ಲಿದ್ದ ತಮಿಳುನಾಡು ಗವರ್ನರ್ ವಿದ್ಯಾಸಾಗರರಾವ್ ವಿಷಯ ತಿಳಿದ ಕೂಡಲೇ ಚೆನ್ನೈಗೆ ಆಗಮಿಸಿದರು. ನೇರವಾಗಿ ಅಪೋಲೋ ಆಸ್ಪತ್ರೆ ತಲುಪಿದ ಅವರು ಜಯಲಲಿತ ಆರೋಗ್ಯದ ಕುರಿತು ವೈದ್ಯರೊಂದಿಗೆ ಮಾನಾಡಿದರು. ಆಸ್ಪತ್ರೆಯಲ್ಲಿ 10 ನಿಮಿಷಗಳ ಕಾಲ ಇದ್ದ ಗವರ್ನರ್ ನಂತರ ರಾಜಭವನಕ್ಕೆ ತೆರಳಿದರು. ರಾಜಭವನದಿಂದ ಇನ್ನೂ ಯಾವುದೇ ಪ್ರಕಟಣೆ ಹೊರಬಿದ್ದಿಲ್ಲ.

Comments (wait until it loads)
Loading...
class="clear">
error: Content is protected !!

News Mirchi is Stephen Fry proof thanks to caching by WP Super Cache