ಮೊಬೈಲ್ ಕೆಲಸ ಮಾಡದಿದ್ದರೂ ಪರವಾಗಿಲ್ಲ, ಆಧಾರ್ ಲಿಂಕ್ ಮಾಡಲ್ಲ – News Mirchi

ಮೊಬೈಲ್ ಕೆಲಸ ಮಾಡದಿದ್ದರೂ ಪರವಾಗಿಲ್ಲ, ಆಧಾರ್ ಲಿಂಕ್ ಮಾಡಲ್ಲ

ಕೋಲ್ಕತಾ ಅ.25: ನನ್ನ ಮೊಬೈಲ್ ಕೆಲಸ ಮಾಡದಿದ್ದರೂ ಪರವಾಗಿಲ್ಲ, ನಾನು ಮಾತ್ರ ಮೊಬೈಲ್ ಸಂಖ್ಯೆಗೆ ಆಧಾರ್ ಜೋಡಣೆ ಮಾಡಿಸುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಇಂದು ನಡೆದ ಪಕ್ಷದ ಸಭೆಯಲ್ಲಿ ಮಾತನಾಡಿದ ಆಕೆ, ತಮ್ಮ ಮೊಬೈಲ್ ಸಂಖ್ಯೆಗೆ ಆಧಾರ್ ಲಿಂಕ್ ಮಾಡಿಸುವ ಮಾತೇ ಇಲ್ಲವೆಂದು ಹೇಳಿದ್ದಾರೆ.

ಕೇಂದ್ರ ಸರ್ಕಾರದ ಸರ್ವಾಧಿಕಾರಿ ತೀರ್ಮಾನವನ್ನು ತಾವು ವಿರೋಧಿಸುತ್ತಿದ್ದು, ಕೇಂದ್ರದಲ್ಲಿ ಅಧಿಕಾರದಿಂದ ಬಿಜೆಪಿಯನ್ನು ಕೆಳಗಿಳಿಸಲು ತಮ್ಮ ಪಕ್ಷ ಕೆಲಸ ಮಾಡುತ್ತದೆ ಎಂದು ಮಮತಾ ಹೇಳಿದರು. ಬಿಜೆಪಿ ನಾಯಕರು ಪ್ರಜೆಗಳ ಸ್ವಾತಂತ್ರ್ಯ, ಹಕ್ಕುಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಅವರು ಆಕ್ಷೇಪಿಸಿದರು. ಆಧಾರ್ ಸಂಖ್ಯೆಯನ್ನು ಮೊಬೈಲ್ ಗೆ ಲಿಂಕ್ ಮಾಡುವುದು ಸರಿಯಲ್ಲ ಎಂದು ಹೇಳಿದರು.

[ಇದನ್ನೂ ಓದಿ: ರಾಷ್ಟ್ರಪತಿಯವರಿಗೆ ನಾವು ಭಾಷಣ ಬರೆದು ಕೊಡಕ್ಕಾಗತ್ತೇನ್ರಿ: ಸಿದ್ದರಾಮಯ್ಯ]

ನೋಟು ರದ್ದು ಕ್ರಮ ವಿರೋಧಿಸಿ ನವೆಂಬರ್ 8 ರಂದು ಬ್ಲಾಕ್ ಡೇ ಆಚರಿಸುವುದಾಗಿ, ಅಂದು ರಾಜ್ಯದಲ್ಲಿ ಕಪ್ಪು ಬಾವುಟಗಳೊಂದಿಗೆ ಪ್ರತಿಭಟನೆ ನಡೆಸುವುದಾಗಿ ಆಕೆ ಪ್ರಕಟಿಸಿದರು. ಯಾರೂ ತಮ್ಮ ವಿರುದ್ಧ ಮಾತನಾಡಬಾರದೆಂದು ಕೇಂದ್ರ ಸರ್ಕಾರ ಆದಾಯ ತೆರಿಗೆ ಇಲಾಖೆ, ಸಿಬಿಐ, ಜಾರಿ ನಿರ್ದೇಶನಾಲಯಗಳನ್ನು ಬಳಸುತ್ತಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದರು. ತಮ್ಮ ಪಕ್ಷದ ನಾಯಕರೆಲ್ಲರೂ ಜೈಲಿಗೆ ಹೋದರೂ ಸರಿ ಟಿಎಂಸಿ ಕೇಂದ್ರ ಸರ್ಕಾರದ ವಿರುದ್ಧ ಹೋರಾಡುತ್ತದೆ, ನಾವು ಹೇಡಿಗಳಲ್ಲಿ ಎಂದು ಹೇಳಿದರು.

Get Latest updates on WhatsApp. Send ‘Add Me’ to 8550851559

Loading...