ಬುಧವಾರದಿಂದ 101 ಇಂದಿರಾ ಕ್ಯಾಂಟೀನ್ ಕಾರ್ಯಾರಂಭ: ಸಿದ್ದರಾಮಯ್ಯ – News Mirchi

ಬುಧವಾರದಿಂದ 101 ಇಂದಿರಾ ಕ್ಯಾಂಟೀನ್ ಕಾರ್ಯಾರಂಭ: ಸಿದ್ದರಾಮಯ್ಯ

ಕಾರ್ಮಿಕ ವರ್ಗದವರಿಗೆ ಮತ್ತು ಬಡ ವಲಸಿಗರಿಗೆ ಕಡಿಮೆ ದರದಲ್ಲಿ ಆಹಾರ ನೀಡುವ ಇಂದಿರಾ ಕ್ಯಾಂಟೀನ್ ಗಳನ್ನು ಬೆಂಗಳೂರಿನಾದ್ಯಂತ ಬುಧವಾರದಿಂದ ಆರಂಭ ಮಾಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಹೇಳಿದ್ದಾರೆ.

ಆರಂಭದಲ್ಲಿ 101 ವಾರ್ಡ್ಗಳಲ್ಲಿ 101 ಕ್ಯಾಂಟೀನ್ ಗಳ ಮೂಲಕ ಶುದ್ಧ ಸಸ್ಯಾಹಾರ ತಿಂಡಿಯನ್ನು ಪ್ಲೇಟಿಗೆ 5 ರೂಪಾಯಿ, ಮತ್ತು ಊಟ ಪ್ಲೇಟಿಗೆ 10 ರೂಪಾಯಿ ದರದಲ್ಲಿ ನೀಡಲಾಗುವುದು. ಗಾಂಧಿ ಜಯಂತಿ ದಿನವಾದ ಅಕ್ಟೋಬರ್ 2 ರಿಂದ ಉಳಿದ 97 ವಾರ್ಡ್ಗಳಲ್ಲಿಯೂ ಕ್ಯಾಂಟೀನ್ ತೆರೆಯಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.

ಇಂದಿರಾ ಕ್ಯಾಂಟೀನ್ ಗಳ ಮೂಲಕ ಕಡಿಮೆ ದರದಲ್ಲಿ ಊಟ ತಿಂಡಿ ನೀಡುವ ಯೋಜನೆಗಾಗಿಯೇ ಹಣಕಾಸು ಸಚಿವರೂ ಆಗಿರುವ ಸಿದ್ದರಾಮಯ್ಯ 2017-18 ನೇ ಸಾಲಿನಲ್ಲಿ 100 ಕೋಟಿ ರೂಪಾಯಿಗಳನ್ನು ರಾಜ್ಯ ಬಜೆಟ್ ನಲ್ಲಿ ಮೀಸಲಿಟ್ಟಿದ್ದಾರೆ.

ಹಸಿವು ಮುಕ್ತ ಕರ್ನಾಟಕವು ನಮ್ಮ ಗುರಿಯಾಗಿದ್ದು, ಈಗಾಗಲೇ ಬಡತನ ರೇಖೆಗಿಂತ ಕೆಳಗಿರುವ 4 ಕೋಟಿಯಷ್ಟು ಜನ 7 ಕೆಜಿ ಉಚಿತ ಅಕ್ಕಿಯನ್ನು ಅನ್ನ ಭಾಗ್ಯ ಯೋಜನೆಯಡಿ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು. ಹಾಗೆಯೇ 1.08 ಕೋಟಿ ಶಾಲಾ ಮಕ್ಕಳಿಗೆ ಹಾಲಿನೊಂದಿಗೆ ಮಧ್ಯಾಹ್ನ ಬಿಸಿಯೂಟ ನೀಡಲಾಗುತ್ತಿದ್ದು, ವಾರದಲ್ಲಿ ಎರಡು ದಿನ ಮೊಟ್ಟೆ ನೀಡಲಾಗುತ್ತಿದೆ ಎಂದರು. ಮಾಹಿತ ತಂತ್ರಜ್ಞಾನ ಶಿಕ್ಷಣಕ್ಕೆ ಉತ್ತೇಜನ ನೀಡಲು ವೈದ್ಯಕೀಯ ಮತ್ತು ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ 1.5 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ನೀಡಲಾಗುತ್ತಿದೆ ಎಂದರು.

Loading...