ಪತಂಜಲಿ ಹೊಡೆತಕ್ಕೆ ದಂಗಾದ ಕೋಲ್ಗೇಟ್, ಜನರ ಅಭಿರುಚಿಗೆ ತಕ್ಕಂತೆ ಬದಲಾವಣೆಗೆ ಚಿಂತನೆ |News Mirchi

ಪತಂಜಲಿ ಹೊಡೆತಕ್ಕೆ ದಂಗಾದ ಕೋಲ್ಗೇಟ್, ಜನರ ಅಭಿರುಚಿಗೆ ತಕ್ಕಂತೆ ಬದಲಾವಣೆಗೆ ಚಿಂತನೆ

ಯಾವು ಟೂತ್ ಪೇಸ್ಟ್ ಬಳಸ್ತಿದೀರಿ ಅಂದ್ರೆ ಬಹುತೇಕ ಜನ ಥಟ್ಟನೆ ಹೇಳುತ್ತಿದ್ದ ಉತ್ತರ ಕೋಲ್ಗೇಟ್. ಹಳ್ಳಿಗಳಲ್ಲಿಯೂ ಟೂತ್ ಪೇಸ್ಟ್ ಎಂದರೆ ಕೋಲ್ಗೇಟ್ ಎಂಬಂತಾಗಿತ್ತು. ಅಂತಹ ಕೋಲ್ಗೇಟ್ ಗೆ ಈಗ ಕಷ್ಟಕಾಲ ಎದುರಾಗಿದೆ. ಅದೂ ಬಾಬಾ ರಾಮದೇವ್ ಅವರ ಕಂಪನಿಯಿಂದ.

ಬಾಬಾ ರಾಮದೇವ್ ಕಂಪನಿ ಪತಂಜಲಿಯಿಂದ ಕೋಲ್ಗೇಟ್ ಗೆ ಪ್ರಬಲ ಸ್ಪರ್ಧೆ ಎದುರಾಗುತ್ತಿದೆ. ಮಾರ್ಚ್ 31 2017ಕ್ಕೆ ಅಂತ್ಯಗೊಂಡ ನಾಲ್ಕನೇ ತ್ರೈಮಾಸಿಕ ಆದಾಯದಲ್ಲಿ ರೂ.142.58 ಕೋಟಿಯಷ್ಟು ಆದಾಯದಲ್ಲಿ ಕುಸಿತ ಉಂಟಾಗಿದೆ ಎಂದು ಕಂಪನಿಯು ಹೇಳಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಕೋಲ್ಗೇಟ್ ರೂ.143.27 ಕೋಟಿ ರೂಪಾಯಿ ಆದಾಯ ಗಳಿಸಿತ್ತು.

ಇದೀಗ ನಷ್ಟ ಕಡಿಮೆಗೊಳಿಸುವ ಕ್ರಮಕ್ಕೆ ಮುಂದಾಗಿರುವ ಕೋಲ್ಗೇಟ್ ಕಂಪನಿ ಸಿಇಒ ಇಯಾನ್ ಕುಕ್, ಹೂಡಿಕೆದಾರ ಸಭೆ ಕರೆದಿದ್ದರು. ಭಾರತದಲ್ಲಿ ಬದಲಾಗುತ್ತಿರುವ ವಾತಾವಣಗಳಿಗೆ ಅನುಗುಣವಾಗಿ ಉತ್ಪನ್ನವನ್ನು ಮಾರಾಟ ಮಾಡಬೇಕು ಎಂದು ಸಭೆಯಲ್ಲಿ ಅವರು ಸೂಚಿಸಿದರು. ಪತಂಜಲಿಯಿಂದ ಪ್ರಬಲ ಪೈಪೋಟಿ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ಉತ್ಪನ್ನಗಳನ್ನು ತಯಾರಿಸಲು ಕುಕ್ ಹೇಳಿದ್ದಾರೆ.

ಪತಂಜಲಿ ಸ್ವದೇಶಿ ಹೆಸರಿನ ವಿಭಿನ್ನ ಪರಿಕಲ್ಪನೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಅದರ ಜೊತೆ ನೈಸರ್ಗಿಕವಾಗಿ ತಯಾರಿಸಲಾಗಿದೆ ಎಂದು ಹೇಳುತ್ತಿದೆ ಎಂದು ಹೂಡಿಕೆದಾರರ ಸಮಾವೇಶದಲ್ಲಿ ಕುಕ್ ವಿವರಿಸಿದರು. ಕೋಲ್ಗೇಟ್ ಕೂಡಾ ಜನರ ಆಭಿರುಚಿಗೆ ತಕ್ಕಂತೆ ನೈಸರ್ಗಿಕವಾಗಿ ಉತ್ಪನ್ನಗಳನ್ನು ತಯಾರಿಸುವ ಮಾರ್ಗವನ್ನು ಅನುಸರಿಸಬೇಕು ಎಂದು ಕುಕ್ ಸೂಚಿಸಿದ್ದಾರೆ.

Loading...
loading...
error: Content is protected !!