ಆತ್ಮಹತ್ಯೆಗೆ ನಷ್ಟ ಪರಿಹಾರ ನೀಡುವುದು ಸರಿಯಲ್ಲ : ದೆಹಲಿ ಹೈಕೋರ್ಟ್ – News Mirchi

ಆತ್ಮಹತ್ಯೆಗೆ ನಷ್ಟ ಪರಿಹಾರ ನೀಡುವುದು ಸರಿಯಲ್ಲ : ದೆಹಲಿ ಹೈಕೋರ್ಟ್

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಈ ಹಿಂದೆ ಚಳುವಳಿಯೊಂದರ ಸಂದರ್ಭದಲ್ಲಿ ಇಬ್ಬರು ಯುವಕರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗ ಸಂತ್ರಸ್ತ ಕುಟುಂಬಗಳಿಗೆ ದೆಹಲಿ ಸರ್ಕಾರ ನಷ್ಟ ಪರಿಹಾರ ನೀಡಲು ನಿರ್ಧರಿಸಿತ್ತು. ಅದರೆ ಈಗ ಸರ್ಕಾರದ ನಿರ್ಧಾರಕ್ಕೆ ದೆಹಲಿ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ.

ನ್ಯಾಯಧೀಶರಾದ ಗೀತಾ ಮಿತ್ತಲ್, ನಮತ್ತು ಹರಿಶಂಕರ್ ಅವರ ಪೀಠ ದೆಹಲಿ ಸರ್ಕಾರದ ತೀರ್ಮಾನವನ್ನು ಪ್ರಶ್ನಿಸಿದ್ದು, ಆತ್ಮಹತ್ಯೆ ಮಾಡಿಕೊಂಡವರನ್ನು ಹುತಾತ್ಮರಂತೆ ಬಿಂಬಿಸುವುದು ಸರಿಯಲ್ಲ ಎಂದು ಬುದ್ದಿ ಹೇಳಿದೆ. ಆತ್ಮಹತ್ಯೆ ಮಾಡಿಕೊಳ್ಳುವವರಿಗೆ ನಷ್ಟ ಪರಿಹಾರ ನೀಡಬಾರದು ಎಂದು ಕೋರ್ಟ್ ಹೇಳಿದೆ.

ಆತ್ಮಹತ್ಯೆ ಮಾಡಿಕೊಳ್ಳುವವರಿಗೆ ನಷ್ಟ ಪರಿಹಾರ ನೀಡುವುದು ತಪ್ಪು ಸಂದೇಶ ರವಾನಿಸಿದಂತಾಗುತ್ತದೆ ಎಂದು ಕೋರ್ಟ್ ಸರ್ಕಾರಕ್ಕೆ ಬುದ್ದಿ ಹೇಳಿದೆ. ಈ ಕುರಿತು ಆಗಸ್ಟ್ 8ರೊಳಗೆ ಉತ್ತರಿಸುವಂತೆ ದೆಹಲಿ ಸರ್ಕಾರವನ್ನು ಹೈಕೋರ್ಟ್ ಆದೇಶಿಸಿದೆ.

ನವೆಂಬರ್ 1 ರಂದು ಮಾಜಿ ಸೈನಿಕ ರಾಮಕೃಷ್ಣ ಆತ್ಮಹತ್ಯೆ ಮಾಡಿಕೊಂಡಿದ್ದರು. ದೆಹಲಿಯಲ್ಲಿನ ಜಂತರ್ ಮಂತರ್ ಬಳಿ ಸೈನಿಕರ ಬೇಡಿಕೆಗಳಿಗಾಗಿ ಪ್ರತಿಭಟನೆ ನಡೆದಿತ್ತು. ಆ ವೇಳೆ ಪ್ರತಿಭಟನೆಯಲ್ಲಿ ಪಾಲ್ಗೊಂಡ ರಾಮಕೃಷ್ಣ ಆತ್ಮಹತ್ಯೆ ಮಾಡಿಕೊಂಡಿದ್ದರು. ಅದಕ್ಕೂ ಮುನ್ನ ಅಂದರೆ 2015ರಲ್ಲಿ ಆಪ್ ರ್ಯಾಲಿಯಲ್ಲಿ ಗಜೇಂದ್ರ ಸಿಂಗ್ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಇಬ್ಬರೂ ವ್ಯಕ್ತಿಗಳನ್ನು ಅರವಿಂದ್ ಕೇಜ್ರಿವಾಲ್ ಸರ್ಕಾರ ಹುತಾತ್ಮರೆಂದು ಪರಿಗಣಿಸಿ ಪರಿಹಾರ ನೀಡಬೇಕೆಂದು ತೀರ್ಮಾನಿಸಿತ್ತು. ಆದರೆ ದೆಹಲಿ ಹೈಕೋರ್ಟ್ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿದೆ.

Loading...