ಕಣ್ಸನ್ನೆ ಚೆಲುವೆ ಪ್ರಿಯಾ ವಾರಿಯರ್ ನಟನೆಯ ಹಾಡಿನ ವಿರುದ್ಧ ದೂರು

ಇತ್ತೀಚೆಗೆ ಇಂಟರ್ನೆಟ್ ನಲ್ಲಿ ಸದ್ದು ಮಾಡುತ್ತಿರುವ ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ನಟಿಸಿರುವ ಚಿತ್ರದ ಹಾಡಿನ ವಿರುದ್ಧ ಕೆಲ ಮುಸ್ಲಿಂ ಯುವಕರು ಹೈದರಾಬಾದ್ ನಲ್ಲಿ ಪೊಲೀಸ್ ದೂರು ದಾಖಲಿಸಿದ್ದಾರೆ.

Pic Credit: Republic TV

ಪ್ರಿಯಾ ನಟಿಸಿರುವ ‘ಒರು ಆದಾರ್ ಲವ್’ ಚಿತ್ರದಲ್ಲಿನ ‘ಮಾಣಿಕ್ಯ ಮಲರಯಾ ಪೂವಿ’ ಗೀತೆಯಲ್ಲಿ ಬಳಸಿರುವ ಶಬ್ದಗಳು ಮುಸ್ಲಿಮರ ಭಾವನೆಗಳಿಗೆ ನೋವುಂಟು ಮಾಡುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮಾಣಿಕ್ಯ ಮಲರಯಾ ಪೂವಿ ಪದಗಳನ್ನು ಇಂಗ್ಲೀಷ್ ಗೆ ಅನುವಾದಿಸಿದಾಗ ಪ್ರವಾದಿಯನ್ನು ಅವಮಾನಿಸಿದಂತೆ ಕಾಣುತ್ತದೆ ಎಂದು ದೂರಿನಲ್ಲಿ ಮುಸ್ಲಿಂ ಯುವಕರು ತಿಳಿಸಿದ್ದಾರೆ.

ಭಾರತದ ಆಮದು ತೆರಿಗೆಗೆ ಟ್ರಂಪ್ ಅಸಮಾಧಾನ

ಯುವಕರು ನೀಡಿರುವ ದೂರನ್ನು ಸ್ವೀಕರಿಸಿರುವ ಹೈದರಾಬಾದ್ ಪೊಲೀಸರು, ಚಿತ್ರದ ನಿರ್ದೇಶಕ ಒಮರ್ ಲುಲು ವಿರುದ್ಧ ಸೆಕ್ಷನ್ ‘295ಎ’ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಕಾಯ್ದೆಯಡಿ ಎಫ್.ಐ.ಆರ್ ದಾಖಲಿಸಿಕೊಂಡಿದ್ದಾರೆ.

ಮಾಲಯಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ತನ್ನ ಇನ್ನೂ ಬಿಡುಗಡೆಯಾಗಿಬೇಕಿರುವ ಚಿತ್ರದ ಮಾಣಿಕ್ಯ ಮಲರಯಾ ಪೂವಿ ಹಾಡಿನ ವೀಡಿಯೋ ಕ್ಲಿಪ್ ನಿಂದಾಗಿ ಇಂಟರ್ನೆಟ್ ನಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ. ಈ ಹಾಡಿನಲ್ಲಿ ಪ್ರಿಯಾ ತನ್ನ ಕಣ್ಣು ಹುಬ್ಬುಗಳನ್ನು ಮೇಲೆ ಕೆಳಗೆ ಸರಿಸುವುದು, ನಾಯಕನ ಕಡೆ ಕಣ್ಸನ್ನೆಗಳನ್ನು ಮಾಡುವುದು ಜನರನ್ನು ಆಕರ್ಷಿಸುತ್ತಿದ್ದು ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ.

ಚಿತ್ರದ ಹಾಡಿನ ಅಫಿಷಿಯಲ್ ಟ್ರೈಲರ್

Get Latest updates on WhatsApp. Send ‘Subscribe’ to 8550851559