ಬಿಜೆಪಿ ಯುವ ಮೋರ್ಚಾದಿಂದ ಪ್ರಭಾ ಬೆಳವಂಗಲಾ ವಿರುದ್ಧ ದೂರು – News Mirchi

ಬಿಜೆಪಿ ಯುವ ಮೋರ್ಚಾದಿಂದ ಪ್ರಭಾ ಬೆಳವಂಗಲಾ ವಿರುದ್ಧ ದೂರು

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬಗ್ಗೆ ತಿರುಚಿದ ಫೋಟೋ ಬಳಸಿ ಅವಹೇಳನಕಾರಿ ಯಾಗಿ ಚಿತ್ರಿಸಿ ಫೇಸ್ಬುಕ್ ನಲ್ಲಿ ಪೊಸ್ಟ್ ಮಾಡಿದ್ದ ಕಮ್ಯುನಿಷ್ಟ್ ಕಾರ್ಯಕರ್ತೆ ಪ್ರಭಾ ಬೆಳವಂಗಲ ವಿರುದ್ಧ ಬಿಜೆಪಿಯ ಯುವ ಮೋರ್ಚಾ ಕಾರ್ಯಕರ್ತರು ನಗರದ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಯುವ ಮೋರ್ಚಾ ಕಾರ್ಯಕರ್ತರ ದೂರಿನ ಹಿನ್ನೆಲೆಯಲ್ಲಿ ಪ್ರಭಾ ವಿರುದ್ಧ ಎಫ್.ಐ.ಆರ್ ದಾಖಲಿಸಿಕೊಂಡಿದ್ದೇವೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ(ಕ್ರೈಂ) ಎಸ್.ರವಿ ಹೇಳಿದ್ದಾರೆ. ಮಾನನಷ್ಟ, ಧರ್ಮದ ಆದಾರದಲ್ಲಿ ದ್ವೇಷ ಬಿತ್ತುವುದು ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಗಳ ಅಡಿಯಲ್ಲಿ ಎಫ್.ಐ.ಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ಹಿಂದೆಯೂ ಒಂದು ಸಮುದಾಯದ ವಿರುದ್ಧ ಇದೇ ಪ್ರಭಾ ಬೆಳವಂಗಲ ಫೇಸ್ಬುಕ್ ನಲ್ಲಿ ಪ್ರಚೋದನಕಾರಿ ಬರೆದಿದ್ದರು. ಅದರಿಂದ ಕೆರಳಿ ಅಸಭ್ಯವಾಗಿ ಪ್ರತಿಕ್ರಿಯಿಸಿದ್ದ ವಿ.ಆರ್.ಭಟ್ ಎಂಬುವವರ ವಿರುದ್ಧವೇ ದೂರು ದಾಖಲಿಸಿಕೊಂಡ ಸರ್ಕಾರ, ಪೊಲೀಸರ ನಾಲ್ಕು ತಂಡಗಳನ್ನು ರಚಿಸಿ ಬಂಧಿಸಿದ್ದರು. ಈಗಲೂ ಕೆಲವರನ್ನು ತಮ್ಮ ಪೋಸ್ಟ್ ಮೂಲಕ ಪ್ರಚೋದಿಸಿ, ಅವರು ಕೆಟ್ಟ ಪದಗಳಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಿದರೆ ಕಂಬಿ ಹಿಂದೆ ತಳ್ಳಲು ಆಕೆ ಕೆಲವರನ್ನು ಉದ್ದೇಶಪೂರ್ವಕವಾಗಿ ಪೋಸ್ಟ್ ಗೆ ಟ್ಯಾಗ್ ಮಾಡಿದ್ದಾಳೆ ಎಂಬ ಆರೋಪಗಳೂ ಕೇಳಿಬರುತ್ತಿವೆ.

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!