ಆದಷ್ಟು ಬೇಗ ಕೊಲೆಗಾರರ ಬಂಧನವಾಗುವ ವಿಶ್ವಾಸವಿದೆ: ಇಂದ್ರಜಿತ್ ಲಂಕೇಶ್ |News Mirchi

ಆದಷ್ಟು ಬೇಗ ಕೊಲೆಗಾರರ ಬಂಧನವಾಗುವ ವಿಶ್ವಾಸವಿದೆ: ಇಂದ್ರಜಿತ್ ಲಂಕೇಶ್

ಸಿಸಿಟಿವಿ ದೃಶ್ಯಾವಳಿ ಮತ್ತು ಮೊಬೈಲ್ ಮೂಲಕ ಸಿಗುವ ಸಾಕ್ಷಿಗಳಿಂದ ಶೀಘ್ರದಲ್ಲೇ ಪತ್ರಕರ್ತೆ ಗೌರಿ ಲಂಕೇಶ್ ಅವರ ಕೊಲೆಗಾರರನ್ನು ಪೊಲೀಸರು ಪತ್ತೆಹಚ್ಚುವ ವಿಶ್ವಾಸವನ್ನು ಅವರ ಸಹೋದರ ಇಂದ್ರಜಿತ್ ಲಂಕೇಶ್ ವ್ಯಕ್ತಪಡಿಸಿದ್ದಾರೆ.

ಇಡೀ ಘಟನೆಯು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಶೀಘ್ರದಲ್ಲಿಯೇ ಕೊಲೆಗಾರರ ಬಂಧನವಾಗುವ ವಿಶ್ವಾಸವಿದೆ ಎಂದು ಇಂದ್ರಜಿತ್ ಹೇಳಿದ್ದಾರೆ. ವಾಸ್ತವವಾಗಿ ಆಕೆಯ ಮೊಬೈಲಿನಲ್ಲೂ ಸಾಕಷ್ಟು ಪುರಾವೆ ಮತ್ತು ಸುಳಿವುಗಳಿವೆ ಎಂದು ಅವರು ಹೇಳಿದ್ದಾರೆ.

ನಿನ್ನೆ (ಮಂಗಳವಾರ) ರಾತ್ರಿ ಸುಮಾರು 7:30 ಸಮಯದಲ್ಲಿ ರಾಜರಾಜೇಶ್ವರಿ ನಗರದಲ್ಲಿನ ತಮ್ಮ ಮನೆಯ ಬಳಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿದ್ದರು. ಅಪರಿಚಿತ ದುಷ್ಕರ್ಮಿಗಳು ಗೌರಿ ಲಂಕೇಶ್ ಅವರ ಎದೆ ಮತ್ತು ಹಣೆಗೆ ಗುಂಡು ಹಾರಿಸಿ ಪರಾರಿಯಾಗಿದ್ದರು.

Loading...
loading...
error: Content is protected !!