ಐಟಿ ದಾಳಿ ವೇಳೆ ಜಯಾ ಮನೆಯಲ್ಲಿ ಸಿಕ್ಕಿತ್ತು ಗುಟ್ಕಾ ಹಗರಣದ ಗೌಪ್ಯ ಪತ್ರ

ಐಟಿ ದಾಳಿ ವೇಳೆ ಜಯಾ ಮನೆಯಲ್ಲಿ ಸಿಕ್ಕಿತ್ತು ಗುಟ್ಕಾ ಹಗರಣದ ಗೌಪ್ಯ ಪತ್ರ

ತಮಿಳುನಾಡು ದಿವಂಗತ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ವೇದ ನಿಲಿಯಂ ನಿವಾಸದ ಮೇಲೆ ಆದಾಯ ತೆರಿಗೆ ದಾಳಿ ನಡೆಸಿದ ಸಂದರ್ಭದಲ್ಲಿ ಅಧಿಕಾರಿಗಳಿಗೆ ಗುಟ್ಕಾ ಹಗರಣಕ್ಕೆ ಸಂಬಂಧಿಸಿದ ಗೌಪ್ಯ ಪತ್ರವೊಂದು ಸಿಕ್ಕಿದೆಯಂತೆ. ಈ ವಿಷಯವನ್ನು ಮದ್ರಾಸ್ ಹೈಕೋರ್ಟ್ ಗೆ ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ಪತ್ರದಲ್ಲಿ ಸಚಿವ ಮತ್ತು ಪೊಲೀಸ್ ಅಧಿಕಾರಿಗಳ ಹೆಸರು

ಮಾಜಿ ಡಿಜಿಪಿ ಅಶೋಕ್ ಕುಮಾರ್ ಅವರಿಗೆ ಬರೆದಿರುವ ಆ ಪತ್ರದಲ್ಲಿ ಗುಟ್ಕಾ ಹಗರಣಕ್ಕೆ ಸಂಬಂಧಿಸಿದಂತೆ ಅಂದಿನ ತಮಿಳುನಾಡು ಆರೋಗ್ಯ ಸಚಿವ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರುಗಳಿವೆ ಎಂದು ತೆರಿಗೆ ಇಲಾಖೆ ಹೇಳಿದೆ.

ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಕೋರಿ ಡಿಎಂಕೆ ಶಾಸಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಪ್ರಧಾನ ನಿರ್ದೇಶಕರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ಈ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಇಲಾಖೆಯ ಮಾಜಿ ಪ್ರಧಾನ ನಿರ್ದೇಶಕರು ಹಗರಣಕ್ಕೆ ಸಂಬಂಧಿಸಿದಂತೆ ಅಂದಿನ ಮುಖ್ಯಮಂತ್ರಿ ಜಯಲಲಿತ ಮತ್ತು ಡಿಜಿಪಿ ಯವರಿಗೆ ಪತ್ರ ಬರೆದಿದ್ದರು ಎಂದು ಪ್ರಮಾಣಪತ್ರದಲ್ಲಿ ಉಲ್ಲೇಖಿಸಲಾಗಿದೆ.

Get Latest updates on WhatsApp. Send ‘Subscribe’ to 8550851559

Loading...
loading...
error: Content is protected !!