ಹೌದು ಚೀನಾ ರಾಯಭಾರಿಯೊಂದಿಗೆ ರಾಹುಲ್ ಭೇಟಿ ನಿಜ, ಮಾತು ಬದಲಿಸಿದ ಕಾಂಗ್ರೆಸ್

ನವದೆಹಲಿ: ಚೀನಾ ರಾಯಭಾರಿಯೊಂದಿಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭೇಟಿ ಆಗಿದ್ದು ಸತ್ಯ ಎಂದು ಇದೀಗ ಸ್ವತಃ ಕಾಂಗ್ರೆಸ್ ಸ್ಪಷ್ಟಪಡಿಸಿದೆ. ಮೊದಲು ರಾಹುಲ್ ಗಾಂಧಿ, ಚೀನಾ ರಾಯಭಾರಿ ಭೇಟಿಯಾಗಿಲ್ಲ ಎಂದು ಹೇಳಿದ್ದ ಕಾಂಗ್ರೆಸ್, ಇದೀಗ ಯುಟರ್ನ್ ಹೊಡೆದಿದೆ. ಭಾರತದಲ್ಲಿನ ಚೀನಾ ರಾಯಭಾರಿಯನ್ನು ರಾಹುಲ್ ಗಾಂಧಿ ಭೇಟಿಯಾಗಿದ್ದ ವಿಷಯ ಚೀನಾ ರಾಯಭಾರಿ ಕಛೇರಿಯ ಅಧಿಕೃತ ವೆಬ್ಸೈಟಿನಲ್ಲಿ ಈ ಸುದ್ದಿ ಪ್ರಕಟಗೊಂಡಿತ್ತು.

ಆದರೆ ಇದು ವಿವಾದವಾಗುವ ಲಕ್ಷಣಗಳು ಗೋಚರಿಸುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ವಕ್ತಾರ ರಣದೀಪ್ ಸರ್ಜೇವಾಲಾ ಸುದ್ದಿಯನ್ನು ಅಲ್ಲಗೆಳೆದಿದ್ದರು. ಮೋದಿ ಭಕ್ತರು ಹರಡುತ್ತಿರುವ ಸುಳ್ಳು ಸುದ್ದಿ ಇದೆಂದು ಬಿಜೆಪಿ ಮೇಲೆ ಗೂಭೆ ಕೂರಿಸುವ ವಿಫಲ ಯತ್ನ ಮಾಡಿದ್ದರು. ಇದರ ಬೆನ್ನಲ್ಲೇ ಚೀನಾ ರಾಯಭಾರಿ ಕಛೇರಿಯ ವೆಬ್ಸೈಟ್ ನಲ್ಲೂ ಈ ಸುದ್ದಿಯನ್ನು ಅಳಿಸಲಾಗಿತ್ತು.

ಸೇನೆಯಲ್ಲಿ ಈಗಿರುವ ರೈಫಲ್ ಬದಲಿಸಲು ಕೇಂದ್ರದ ನಿರ್ಧಾರ

ಈ ವಿವಾದ ಇನ್ನೂ ಹಸಿರಾಗಿರುವಾಗಲೇ, ಮತ್ತೆ ಟ್ವೀಟ್ ಮಾಡಿದ ರಣದೀಪ್ ಸರ್ಜೇವಾಲಾ, ಮಾತು ಬದಲಿಸಿದರು. ಸಿಕ್ಕಿಂ ಗಡಿಯಲ್ಲಿ ಭಾರತ – ಚೀನಾ ಸೇನೆಗಳ ಘರ್ಷಣೆಗಳಿಂದ ಉದ್ಭವಿಸಿರುವ ವಾತವಾರಣದ ಹಿನ್ನೆಲೆಯಲ್ಲಿ ಚೀನಾ ರಾಯಭಾರಿಯೊಂದಿಗೆ ರಾಹುಲ್ ಭೇಟಿಯಾಗಿದ್ದರು. ರಾಹುಲ್ ಚೀನಾ ರಾಯಭಾರಿ ಸೇರಿದಂತೆ ಭೂತಾನ್ ರಾಯಭಾರಿ, ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್ ಅವರೊಂದಿಗೂ ಭೇಟಿಯಾದರು ಎಂದು ಹೇಳಿದ್ದಾರೆ. ವಿವಿಧ ದೇಶಗಳ ರಾಯಭಾರಿಗಳೂ, ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ, ಉಪಾಧ್ಯಕ್ಷರನ್ನು ಆಗಾಗ ಭೇಟಿಯಾಗುವುದು ಸಾಮಾನ್ಯ ವಿಷಯ ಎಂದು ಹೇಳಿದ್ದಾರೆ.

ಮೊಬೈಲ್ ಕಳ್ಳರಿಗಿದು ಕಹಿ ಸುದ್ದಿಯಂತೆ ಯಾಕೆ ಗೊತ್ತಾ…?

ಹಾಗಿದ್ದರೆ ಭೇಟಿ ಕುರಿತ ಸುದ್ದಿಯನ್ನು ಮೊದಲು ಸುಳ್ಳು ಎಂದಿದ್ದೇಕೆ? ನಂತರ ಒಪ್ಪಿಕೊಂಡಿದ್ದೇಕೆ? ಅದರ ಜೊತೆಗೆ ಚೀನಾ ರಾಯಭಾರಿ ಕಛೇರಿ ವೆಬ್ಸೈಟಿನಿಂದ ರಾಹುಲ್ ಭೇಟಿಯಾದ ವಿಷಯ ಅಳಿಸಿದ್ದೇಕೆ? ಈ ಡ್ರಾಮಾ ಅವಶ್ಯಕತೆಯಾದರೂ ಏನಿತ್ತು ಎಂಬ ಪ್ರಶ್ನೆಗಳು ಏಳುವುದು ಸಹಜ.