ಕಿರಣ್ ಬೇಡಿ ಬೇಡವೇ ಬೇಡ ಎನ್ನುತ್ತಿರುವ ಪುದುಚ್ಚೇರಿ ಕಾಂಗ್ರೆಸ್ – News Mirchi
We are updating the website...

ಕಿರಣ್ ಬೇಡಿ ಬೇಡವೇ ಬೇಡ ಎನ್ನುತ್ತಿರುವ ಪುದುಚ್ಚೇರಿ ಕಾಂಗ್ರೆಸ್

ಪುದುಚ್ಚೇರಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿಯವರನ್ನು ಆ ಹುದ್ದೆಯಿಂದ ತೊಲಗಿಸಬೇಕು ಎಂದು ಒತ್ತಾಯಿಸಿ ಆಡಳಿತ ಕಾಂಗ್ರೆಸ್ ಪಕ್ಷದ ನಾಯಕರ ಪ್ರತಿಭಟನೆ ಗಂಭೀರ ಸ್ವರೂಪ ಪಡೆದಿದೆ. ಶನಿವಾರ ಪುದುಚ್ಚೇರಿ ಬಂದ್ ಗೆ ಕಾಂಗ್ರೆಸ್ ಕರೆ ನೀಡಿತ್ತು. ಕಾಂಗ್ರೆಸ್ ಮಿತ್ರ ಪಕ್ಷ ಡಿ.ಎಂ.ಕೆ, ಎಡಪಕ್ಷಗಳು ಸೇರಿದಂತೆ ವ್ಯಾಪಾರಿಗಳು, ಕೆಲ ನಾಗರಿಕರು ಈ ಬಂದ್ ನಲ್ಲಿ ಪಾಲ್ಗೊಂಡಿದ್ದರು. ಹಲವು ಕಡೆ ಕಿರಣ್ ಬೇಡಿಯವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

ಪುದುಚ್ಚೇರಿ ಕಾಂಗ್ರೆಸ್ ಸರ್ಕಾಋ, ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ನಡುವೆ ಘರ್ಷಣೆ ಉತ್ತುಂಗಕ್ಕೇರಿದೆ. ಕಿರಣ್ ಬೇಡಿ ಪ್ರಜಾಪ್ರಭುತ್ವವನ್ನು ಕೊಲೆ ಮಾಡುತ್ತಿದ್ದಾರೆ ಎಂದು ಸಿಎಂ ನಾರಾಯಣಸ್ವಾಮಿ ಆರೋಪಿಸಿದ್ದಾರೆ. ಆಕೆ ಬಿಜೆಪಿ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಂದು ಕಡೆ ತಾವು ಕೇಂದ್ರಾಡಳಿತ ಪ್ರದೇಶಗಳ ಕಾಯಿದೆಯ ಪ್ರಕಾರವೇ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಕಿರಣ್ ಬೇಡಿ ಹೇಳಿದ್ದಾರೆ.

ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಮಂಗಳವಾರ, ಕೇಂದ್ರ ಸರ್ಕಾರ ನಾಮನಿರ್ದೇಶನ ಮಾಡಿದ ಮೂವರು ವ್ಯಕ್ತಿಗಳಿಂದ ಶಾಸಕರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿಸಿದರು. ಇದು ಆಡಳಿತ ಕಾಂಗ್ರೆಸ್ ಪಕ್ಷಕ್ಕೆ ಸಿಟ್ಟು ತರಿಸಿದೆ. ಸರ್ಕಾರಕ್ಕೆ ಮಾಹಿತಿ ನೀಡದೆಯೇ ಏಕಪಕ್ಷೀಯವಾಗಿ ವರ್ತಿಸುವುದು ಸಂವಿಧಾನ ವಿರುದ್ಧ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಈ ನೇಮಕಗಳಿಗೆ ತಡೆ ನೀಡಬೇಕು ಎಂದು ಮದ್ರಾಸ್ ಹೈಕೋರ್ಟ್ ನಲ್ಲಿ ಪಿಟೀಷನ್ ಕೂಡಾ ದಾಖಲಾಗಿದೆ.

Contact for any Electrical Works across Bengaluru

Loading...
error: Content is protected !!