ಪಟೇಲ್, ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಮಾಡಿದೆ ಮಹಾ ಮೋಸ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಚುನಾವಣಾ ಪ್ರಚಾರ ಗುಜರಾತ್ ಜೋರಾಗಿದ್ದು, ಬುಧವಾರ ಧಂಧೂಕಾ, ದಹೋದ್ ಪ್ರದೇಶಗಳಲ್ಲಿ ಸಮಾವೇಶ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ರಾಷ್ಟ್ರ ನಾಯಕರಾದ ಸರ್ದಾರ್ ವಲ್ಲಭಾಯ್ ಪಟೇಲ್ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ತುಂಬಾ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.

ನೆಹರೂ ಅವಧಿಯಲ್ಲಿ ಕಾಂಗ್ರೆಸ್ ಉತ್ತಮ ಸ್ಥಿತಿಯಲ್ಲಿದ್ದಾಗ ರಾಜ್ಯಸಭೆಗೆ ಅಂಬೇಡ್ಕರ್ ಗೆ ಸ್ಥಾನ ಸಿಗುವುದು ಕಷ್ಟವಾದಂತೆ ಮಾಡಿತು, ಅವರಿಗೆ ಭಾರತರತ್ನ ನೀಡುವ ಆಲೋಚನೆಯೂ ಕಾಂಗ್ರೆಸ್ ಗೆ ಬಂದಿರಲಿಲ್ಲ ಎಂದು ಆರೋಪಿಸಿದರು.

ಫಾರೂಖ್ ಅಬ್ದುಲ್ಲಾ ಸವಾಲು ಸ್ವೀಕರಿಸಿ ತ್ರಿವರ್ಣ ದ್ವಜ ಹಾರಿಸಿದ ಶಿವಸೇನೆ

ಅಯೋಧ್ಯೆ ವಿಷಯವನ್ನು ಕಾಂಗ್ರೆಸ್ ಪಕ್ಷ ಚುನಾವಣೆಗೆ ಸಂಬಂಧ ಕಲ್ಪಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಮೋದಿ, 2019 ರವರೆಗೆ ಅಯೋಧ್ಯೆ-ಬಾಬ್ರಿ ಮಸೀದಿ ವಿವಾದವನ್ನು ಮುಂದೂಡಬೇಕು ಎಂದು ಕಾಂಗ್ರೆಸ್ ಸಂಸದ, ವಕೀಲ ಕಪಿಲ್ ಸಿಬಲ್ ಸುಪ್ರೀಂ ಕೋರ್ಟ್ ನಲ್ಲಿ ಮಾಡಿರುವ ಮನವಿಗೆ ಅವರು ಆಕ್ಷೇಪ ವ್ಯಕ್ತಪಡಿಸಿದರು.

ಟ್ರಂಪ್ ನಂತರ ಮೋದಿಯೇ ಎಂದ ಟ್ವಿಟರ್

ದೇಶದ ಕುರಿತು ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಚಿಂತೆ ಇಲ್ಲ, ಹೀಗಾಗಿಯೇ ಇಂತಹ ಹೇಳಿಕೆ ನೀಡುತ್ತಿದೆ ಎಂದು ಟೀಕಿಸಿದರು. 2019 ರವರೆಗೂ ಅಯೋಧ್ಯೆ ಸಮಸ್ಯೆ ಪರಿಹಾರವಾಗದೆ ತಡೆಯುವುದು ಯಾರಿಂದಲೂ ಸಾಧ್ಯವಿಲ್ಲ. ಅಯೋಧ್ಯ ವಿವಾದ ಬಗೆಹರಿಯುವುದು ಕಾಂಗ್ರೆಸ್ ಗೆ ಬೇಕಿಲ್ಲ. ಟ್ರಿಪಲ್ ತಲಾಖ್ ಕುರಿತು ನಾನು ಮೌನವಹಿಸದೆ, ಸ್ಪಷ್ಟ ನಿಲುವು ತೆಗೆದುಕೊಂಡೆ, ಪ್ರತಿಯೊಂದನ್ನೂ ರಾಜಕೀಯ ದೃಷ್ಟಿಯಿಂದ ನೋಡಬಾರದು. ಇದು ಮಹಿಳೆಯರ ಹಕ್ಕುಗಳಿಗೆ ಸಂಬಂಧಿಸಿದ ವಿಷಯ. ಮಾನವೀಯತೆ ಬಹಳ ಮುಖ್ಯ, ಚುನಾವಣೆ ನಂತರದ ವಿಷಯ ಎಂದರು.

Get Latest updates on WhatsApp. Send ‘Subscribe’ to 8550851559