ರಾಹುಲ್ ವಿರುದ್ಧ ನಾಮಪತ್ರ ಸಲ್ಲಿಸದಂತೆ ತಡೆದರು: ಮುಸ್ಲಿಂ ಮುಖಂಡ

ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸದಂತೆ ತನ್ನನ್ನು ಕಾಂಗ್ರೆಸ್ ನಾಯಕತ್ವ ತಡೆದಿದೆ ಎಂದು ಮುಸ್ಲಿಂ ಮುಖಂಡರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ತಾನು ಹಾಕಿದ ನಾಮಪತ್ರವನ್ನು ಕಾಂಗ್ರೆಸ್ ಹೈಕಮಾಂಡ್ ತಿರಸ್ಕರಿಸಿದೆ ಎಂದು ಅಯೂಬ್ ಅಲಿ ಆರೋಪಿಸಿದ್ದಾರೆ.

ನನ್ನ ನಾಮಪತ್ರವನ್ನು ತಿರಸ್ಕರಿಸಲು ಇದ್ದ ಕಾರಣವನ್ನೂ ಅವರು ನನಗೆ ತಿಳಿಸಲಿಲ್ಲ ಎಂದು ಆರೋಪಿಸಿದ್ದಾರೆ. ರಾಹುಲ್ ಗಾಂಧಿಗೆ ಅನುಕೂಲವಾಗಿ ಪಕ್ಷದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಗ್ಗಿಂಗ್ ನಡೆಸುತ್ತಿದ್ದಾರೆ ಎಂದು ಈ ಹಿಂದೆ ಮಹಾರಾಷ್ಟ್ರದ ಮತ್ತೊಬ್ಬ ಕಾಂಗ್ರೆಸ್ ಮುಖಂಡ ಶೆಹಜಾದ್ ಪೂನಾವಾಲಾ ಆರೋಪಿಸಿದ್ದರು. ದೇಶದ ಇತರೆ ಪಕ್ಷಗಳಿಗಿರುವಂತೆ ಕಾಂಗ್ರೆಸ್ ಗೂ ಮಾಲೀಕರಿದ್ದಾರೆ ಎಂದು ಪಕ್ಷದ ಅಧಿಕೃತ ವಕ್ತಾರ ಮನೀಶ್ ತಿವಾರಿ ಹೇಳಿದ್ದಾಗಿ ಪೂನಾವಾಲಾ ಆರೋಪಿಸಿದ್ದರು.

ಇದೀಗ ಮತ್ತೊಬ್ಬ ಮುಖಂಡ ಅಂತದ್ದೇ ಆರೋಪ ಮಾಡಿದ್ದು, ಬಿಜೆಪಿಗೆ ಮತ್ತೊಂದು ಅಸ್ತ್ರ ಸಿಕ್ಕಂತಾಗಿದೆ.