ಬಿಜೆಪಿ ರಾಷ್ಟ್ರಪತಿ ಅಭ್ಯರ್ಥಿಗೆ ಬೆಂಬಲ, ಈಗಲೇ ಏನೂ ಹೇಳಲಾಗದು: ಕಾಂಗ್ರೆಸ್ – News Mirchi

ಬಿಜೆಪಿ ರಾಷ್ಟ್ರಪತಿ ಅಭ್ಯರ್ಥಿಗೆ ಬೆಂಬಲ, ಈಗಲೇ ಏನೂ ಹೇಳಲಾಗದು: ಕಾಂಗ್ರೆಸ್

ನವದೆಹಲಿ: ಎನ್ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮನಾಥ್ ಕೋವಿಂದ್ ಅವರಿಗೆ ಬೆಂಬಲಿ ನೀಡುವ ವಿಷಯದಲ್ಲಿ ಈಗಲೇ ಏನೂ ಹೇಳುವುದಿಲ್ಲ ಎಂದು ವಿರೋಧ ಪಕ್ಷ ಕಾಂಗ್ರೆಸ್ ಹೇಳಿದೆ. ರಾಮನಾಥ್ ಅಭ್ಯರ್ಥಿಯಾಗಿರುವ ವಿಷಯದಲ್ಲಿ ತಕ್ಷಣ ಪ್ರತಿಕ್ರಿಯಿಸುವುದಿಲ್ಲ ಎಂದು ಕಾಂಗ್ರೆಸ್ ನಾಯಕ ಮುಖಂಡ ಗುಲಾಂ ನಬೀ ಆಜಾದ್ ಹೇಳಿದ್ದಾರೆ. ಸೋಮವಾರ ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದವ ಅವರು, ಎನ್ಡಿಎ ಅಭ್ಯರ್ಥಿ ಕುರಿತು ತಮ್ಮ ಅಸಮಾಧಾನವನ್ನು ಹೊರಹಾಕಿದರು.

ರಾಷ್ಟ್ರಪತಿ ಅಭ್ಯರ್ಥಿ ಹೆಸರನ್ನು ಪ್ರಕಟಿಸುವ ಮುನ್ನ ನಮ್ಮನ್ನು(ಪ್ರತಿಪಕ್ಷಗಳನ್ನು) ಸಂಪರ್ಕಿಸುತ್ತೇವೆ ಎಂದು ಬಿಜೆಪಿ ಹೇಳಿತ್ತು. ಸೋನಿಯಾ ಗಾಂಧಿಯೊಂದಿಗೆ ಬಿಜೆಪಿ ತ್ರಿಸದಸ್ಯ ಸಮಿತಿ ಭೇಟಿಯಾದಾಗಲೂ ಇದೇ ವಿಷಯವನ್ನು ಹೇಳಿದ್ದರು. ಆದರೆ ಅವರು ಹೇಳಿದ್ದೊಂದು ಮಾಡಿದ್ದೊಂದು. ಏಕಪಕ್ಷೀಯವಾಗಿ ಹೆಸರನ್ನು ಪ್ರಕಟಿಸಿದ್ದಾರೆ ಎಂದು ದೂರಿದರು.

ರಾಮನಾಥ್ ಕೋವಿಂದ್ ವಿರುದ್ಧ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೇ ಬೇಡವೇ ಎಂಬ ವಿಷಯದ ಕುರಿತು ಎರಡು ಮೂರು ದಿನಗಳಲ್ಲಿ ನಡೆಯಲಿರುವ ಪ್ರತಿಪಕ್ಷಗಳ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ಆಜಾದ್ ಹೇಳಿದ್ದಾರೆ. ಸದ್ಯ ಬಿಹಾರ್ ಗವರ್ನರ್ ಆಗಿರುವ, ಬಿಜೆಪಿ ಹಿರಿಯ ನಾಯಕರಾದ ರಾಮನಾಥ್ ಕೋವಿಂದ್ ರವರನ್ನು ತಮ್ಮ ರಾಷ್ಟ್ರಪತಿ ಅಭ್ಯರ್ಥಿಯಾಗಿ ಎನ್ಡಿಎ ಪ್ರಕಟಿಸಿತ್ತು.

Loading...