ಆ ಏಳೂ ಜನ ಬಿಜೆಪಿ ಸೇರಲು ಹಾದಿ ಸುಗಮ – News Mirchi
We are updating the website...

ಆ ಏಳೂ ಜನ ಬಿಜೆಪಿ ಸೇರಲು ಹಾದಿ ಸುಗಮ

ಕಾಂಗ್ರೆಸ್ ಉಚ್ಛಾಟಿಸಿದ ಏಳು ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರಲು ಮಾರ್ಗ ಸುಗಮವಾಗಿದೆ. ಪಕ್ಷದಿಂದ ಉಚ್ಛಾಟಿಸಲ್ಪಟ್ಟವರು, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗೆ ವಿರುದ್ಧವಾಗಿ ಮತ ಹಾಕಿದ ಏಳು ಶಾಸಕರನ್ನು ಕಾಂಗ್ರೆಸ್ ಆಗಸ್ಟ್ 9 ರಂದು ಉಚ್ಛಾಟಿಸಿತ್ತು. ಈಗ ಈ ಏಳೂ ಶಾಸಕರು ಗುರುವಾರ ರಾತ್ರಿ ತಮ್ಮ ರಾಜೀನಾಮೆ ಪತ್ರಗಳನ್ನು ನೀಡಿರುವುದಾಗಿ ವಿಧಾನಸಭೆ ಸ್ಪೀಕರ್ ರಮಣ್ ಲಾಲ್ ಓರಾ ಹೇಳಿದ್ದಾರೆ.

ಅಷ್ಟೇ ಅಲ್ಲದೆ, ಈ ಹಿಂದೆಯೇ ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ್ದ ಆರು ಶಾಸಕರಲ್ಲಿ ಮೂವರು ಶಾಸಕರು ಶೀಘ್ರದಲ್ಲಿಯೇ ಬಿಜೆಪಿ ಸೇರಲಿದ್ದಾರೆ ಎನ್ನಲಾಗಿದೆ. ಗುಜರಾತ್ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಂಡಾಯ ಶಾಸಕರು ತಮ್ಮ ಮತಪತ್ರಗಳನ್ನು ಬಿಜೆಪಿ ಮುಖಂಡ ಅಮಿತ್ ಶಾ ಅವರಿಗೆ ತೋರಿಸಿದ್ದರು. ಇವರನ್ನೂ ಸೇರಿದಂತೆ ಕಾಂಗ್ರೆಸ್ ಬರೋಬ್ಬರಿ 14 ಶಾಸಕರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟಿಸಿದೆ. ಉಚ್ಚಾಟನೆಗೊಂಡವರಲ್ಲಿ ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಶಂಕರ್ ಸಿಂಗ್ ವಘೇಲಾ ಮತ್ತು ಅವರ ಬಣದ ಮಹೇಂದ್ರ ವಘೇಲಾ, ರಾಘವ್ ಜೀ ಪಟೇಲ್, ಅಮಿತ್ ಚೌದರಿ, ಬೋಲಾಬಾಯ್ ಗೋಹಿಲ್, ಸಿ.ಕೆ.ರೌಲ್ಜೀ, ಜಡೇಜಾ, ಮಕ್ವಾನಾ.

Contact for any Electrical Works across Bengaluru

Loading...
error: Content is protected !!