ಟಿಪ್ಪು ಜಯಂತಿಯನ್ನು‌ ಕಾಂಗ್ರೆಸ್ ಕಚೇರಿಯಲ್ಲಿ ಆಚರಿಸಲಿ : ಶೋಭಾ ಕರಂದ್ಲಾಜೆ – News Mirchi

ಟಿಪ್ಪು ಜಯಂತಿಯನ್ನು‌ ಕಾಂಗ್ರೆಸ್ ಕಚೇರಿಯಲ್ಲಿ ಆಚರಿಸಲಿ : ಶೋಭಾ ಕರಂದ್ಲಾಜೆ

ಮಡಿಕೇರಿ : ಟಿಪ್ಪು ಜಯಂತಿಯನ್ನು‌ ಕಾಂಗ್ರೆಸ್ ಪಕ್ಷದ ವತಿಯಿಂದ ಕಾಂಗ್ರೆಸ್ ಕಚೇರಿಯಲ್ಲಿ ಆಚರಣೆ ಮಾಡಲಿ. ಜನರ ಹಣದಿಂದ ಬೇಡ ಎಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.

ಮಡಿಕೇರಿಯಲ್ಲಿ ಮಾತನಾಡಿದ ಅವರು ಚುನಾವಣೆ ಹತ್ತಿರ ಬರುತ್ತಿರುವುದರಿಂದ ರಾಜ್ಯದಲ್ಲಿ ಅಶಾಂತಿ ಮೂಡುವ ಸಾಧ್ಯತೆಯಿದೆ. ಗೌರಿಲಂಕೇಶ್ ,ಕಲ್ಬುರ್ಗಿ ಹತ್ಯೆ ಮಾಡಿದವರನ್ನು ಹಿಡಿಯಲು ಸಾಧ್ಯವಾಗದ ಸರಕಾರಕ್ಕೆ ಟಿಪ್ಪು ಜಯಂತಿ ಆಚರಣೆ ಏಕೆ ಬೇಕು ಎಂದು ಪ್ರಶ್ನಿಸಿದರು. ಇಂಧನ ಸಚಿವೆಯಾಗಿದ್ದಾಗ ಹಗರಣ ಮಾಡಿದ್ದಾರೆಂದು ಮುಖ್ಯಮಂತ್ರಿ ಆರೋಪಿಸಿದ್ದಾರೆ. ಯಡಿಯೂರಪ್ಪನವರು  ಮಾಡಿದ ಆರೋಪ ಹಾಗೂ ನನ್ನ ಆರೋಪದ ಬಗ್ಗೆ ತಾಕತ್ತಿದ್ದರೆ ಸಿಬಿಐ ಗೆ ವಹಿಸಲಿ ಬೆಳಗಾವಿ ಅಧಿವೇಶನದಲ್ಲಿ ವರದಿ ಮಂಡನೆಯಾದ ನಂತರ ಸಿಬಿಐ ಗೆ ವಹಿಸಿ ಎಂದರು.ರಾಜ್ಯದಲ್ಲಿ ಭ್ರಷ್ಟಾಚಾರ‌ ಹೆಚ್ಚಾಗಿದೆ. ಬೆಂಗಳೂರಲ್ಲಿ ಜನರಿಗೆ ಮರಣಭಾಗ್ಯವನ್ನು ಸರಕಾರ ನೀಡಿದೆ ಎಂದು ಸರ್ಕಾರದ ವಿರುದ್ಧ  ಕಿಡಿ ಕಾರಿದರು.

Get Latest updates on WhatsApp. Send ‘Add Me’ to 8550851559

Loading...