ಕಾಂಗ್ರೆಸ್ ಗಾಗಿ ಮತ್ತೊಂದು ಆರ್.ಎಸ್.ಎಸ್? |News Mirchi

ಕಾಂಗ್ರೆಸ್ ಗಾಗಿ ಮತ್ತೊಂದು ಆರ್.ಎಸ್.ಎಸ್?

ಇಷ್ಟು ದಿನ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್.ಎಸ್.ಎಸ್) ವನ್ನು ಕೋಮುವಾದಿ ಎಂದು ಜರಿಯುತ್ತಲೇ ಬಂದ ಕಾಂಗ್ರೆಸ್, ಈಗ ಅದೇ ಅರ್.ಎಸ್.ಎಸ್ ಹಾದಿಯಲ್ಲೇ ನಡೆಯಲು ಮುಂದಾಗಿದೆ. ಆರ್.ಎಸ್.ಎಸ್ ಹಾದಿ ಎಂದರೆ ಅದರ ಸಿದ್ಧಾಂತಗಳನ್ನು ಒಪ್ಪಿಕೊಳ್ಳುತ್ತದೆ ಎಂದರ್ಥವಲ್ಲ. ಬದಲಾಗಿ ಹಳ್ಳ ಹಿಡಿಯುತ್ತಿರುವ ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ಮತ್ತು ಮಧ್ಯಪ್ರದೇಶ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅಲ್ಲಿ ಈ ಪ್ರಯತ್ನಕ್ಕೆ ಮುಂದಾಗುತ್ತಿದ್ದಾರೆ.

ಕಾಂಗ್ರೆಸ್‌ ಸಿದ್ಧಾಂತಗಳನ್ನು ನಂಬಿದವರು ಈ ಸಂಘಟನೆಯನ್ನು ರಚಿಸಲಿದ್ದು, ಅದಕ್ಕೆ “ರಾಷ್ಟ್ರೀಯ ಕಾಂಗ್ರೆಸ್ ಸ್ವಯಂ ಸೇವಕ ಸಂಘ (ಆರ್.ಸಿ.ಎಸ್.ಎಸ್) ಎಂದು ನಾಮಕರಣ ಮಾಡಲಿದ್ದೇವೆ, ಕಾಂಗ್ರೆಸ್ ಸಿದ್ಧಾಂತಗಳನ್ನು ಹೊಂದಿರುವವರು ಈ ಸಂಘಟನೆಯ ಸದಸ್ಯರಾಗುತ್ತಾರೆ ಎಂದು ಕಾಂಗ್ರೆಸ್ ಮುಖಂಡ ಅಸ್ಲಾಂ ಶೇರ್ ಖಾನ್ ಹೇಳಿದ್ದಾರೆ.

ಬಿಜೆಪಿಗಾಗಿ ಕೆಲಸ ಮಾಡುತ್ತಾ ಆರ್.ಎಸ್.ಎಸ್ ದೇಶಾದ್ಯಂತ ವಿಸ್ತರಿಸಿದೆ. ಆದರೆ ನಮ್ಮ ರಾಷ್ಟ್ರೀಯ ಕಾಂಗ್ರೆಸ್ ಸ್ವಯಂ ಸೇವಕ ಸಂಘಟನೆ(ಆರ್.ಸಿ.ಎಸ್.ಎಸ್) ರಾಷ್ಟ್ರದ ಜ್ಯಾತ್ಯಾತೀತ ಸಂಘಟನೆಯಾಗಲಿದೆ ಮತ್ತು ರಾಷ್ಟ್ರದ ಹೊಸ ಆರ್.ಎಸ್.ಎಸ್ ಆಗಲಿದೆ ಎಂದು ಹೇಳಿದ್ದಾರೆ. ಬಿಜೆಪಿಗಾಗಿ ಅರ್.ಎಸ್.ಎಸ್ ಕೆಲಸ ಮಾಡುವಂತೆ ನಮ್ಮ ಅರ್.ಸಿ.ಎಸ್.ಎಸ್ ಸಂಘಟನೆ ಕಾಂಗ್ರೆಸ್ ಗಾಗಿ ಕೆಲಸ ಮಾಡುತ್ತಾ ಜ್ಯಾತಾತೀತತೆಯನ್ನು ದೇಶದಲ್ಲಿ ವಿಸ್ತರಿಸುತ್ತದೆ ಎಂದು ಖಾನ್ ಹೇಳಿದ್ದಾರೆ.

ಇದೇ ರೀತಿಯಲ್ಲಿ ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವ್ ಪುತ್ರ ಹಾಗೂ ಸಚಿವ ತೇಜ್ ಪ್ರತಾಪ್ ಧರ್ಮ ನಿರಪೇಕ್ಷ ಸಂಘ (ಡಿಎಸ್‌ಎಸ್) ಸ್ಥಾಪಿಸುವುದಾಗಿ ಘೋಷಿಸಿದ್ದರು.

Loading...
loading...
error: Content is protected !!