ಪಂಜಾಬ್ ಕಾಂಗ್ರೆಸ್ ಗೆ, ಆಪ್ ಗೆ ಎರಡನೇ ಸ್ಥಾನ?

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 117 ಸದಸ್ಯ ಬಲದ ಪಂಜಾಬ್ ನಲ್ಲಿ ಕಾಂಗ್ರೆಸ್ 56 – 62 ಸ್ಥಾನ ಗೆಲ್ಲಲಿದೆ ಎಂದು ಇಂಡಿಯಾ ಟುಡೇ – ಆಕ್ಸಿಸ್ ಸಮೀಕ್ಷೆ ಹೇಳಿದೆ. ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ನಾಯಕತ್ವ ಕಾಂಗ್ರೆಸ್ ಗೆ ಪ್ಲಸ್ ಪಾಯಿಂಟ್ ಆಗಿದ್ದು, ಪಕ್ಷ ಶೇ.35 ಮತ ಪಡೆಯಲಿದೆ ಎನ್ನಲಾಗಿದೆ.

ಇನ್ನು ಶೇ.29 ಮತ ಪಡೆದು 36 – 41 ಸ್ಥಾನಗಳನ್ನು ಗೆಲ್ಲಲಿರುವ ಅಮ್ ಆದ್ಮಿ ಪಕ್ಷ ಎರಡನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ.

ಆಡಳಿತ ಬಿಜೆಪಿ ಮತ್ತು ಅಕಾಲಿದಳ ಮೈತ್ರಿಕೂಟ ಕೇವಲ 18 ರಿಂದ 22 ಸೀಟು ಗಳಿಸಲಷ್ಟೇ ಸಾಧ್ಯ ಎಂದು ಸಮೀಕ್ಷೆ ಹೇಳಿದೆ.

ಪಂಜಾಬ್ ನಲ್ಲಿ ಗೋವಾ ರಾಜ್ಯದ ಜೊತೆಗೆ ಫೆಬ್ರವರಿ 4 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮಾರ್ಚ್ 11 ರಂದು ಎಲ್ಲಾ 5 ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬೀಳಲಿದೆ.