ಜಿ.ಎಸ್.ಟಿ ವಿಶೇಷ ಸಂಸತ್ ಅಧಿವೇಶನದಿಂದ ಕಾಂಗ್ರೆಸ್ ದೂರ – News Mirchi

ಜಿ.ಎಸ್.ಟಿ ವಿಶೇಷ ಸಂಸತ್ ಅಧಿವೇಶನದಿಂದ ಕಾಂಗ್ರೆಸ್ ದೂರ

ನವದೆಹಲಿ: ಜಿ.ಎಸ್.ಟಿ ಜಾರಿಗಾಗಿ ಜೂನ್ 30 ಮಧ್ಯರಾತ್ರಿ ವಿಶೇಷವಾಗಿ ನಡೆಯಲಿರುವ ಸಂಸತ್ ಅಧಿವೇಶನದಿಂದ ಕಾಂಗ್ರೆಸ್ ದೂರವುಳಿದಿದೆ. ಅಧಿವೇಶನದಲ್ಲಿ ಪಾಲ್ಗೊಳ್ಳುವ ಕುರಿತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಗುರುವಾರ ಚರ್ಚಿಸಿದ ನಂತರ ಪಕ್ಷದ ತೀರ್ಮಾನವನ್ನು ಪ್ರಕಟಿಸಿದರು. ಜಿ.ಎಸ್.ಟಿ ಸಂಸತ್ ವಿಶೇಷ ಅಧಿವೇಶನಕ್ಕೆ ಕಾಂಗ್ರೆಸ್ ದೂರ ಉಳಿಯಬೇಕು ಎಂದು ತೀರ್ಮಾನಿಸಿದೆ ಎಂದು ಪಕ್ಷದ ಹಿರಿಯ ನಾಯಕ ಸತ್ಯವ್ರತ್ ಚತುರ್ವೇದಿ ಹೇಳಿದ್ದಾರೆ.

ಮತ್ತೊಂದು ಕಡೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪಾಲ್ಗೊಳ್ಳುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಜಿ.ಎಸ್.ಟಿಯನ್ನು ಪ್ರಧಾನ ಮಂತ್ರಿ ಹೇಗೆ ಆರಂಭಿಸುತ್ತಾರೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಇದು ರಾಷ್ಟ್ರಪತಿಯನ್ನು ಅವಮಾನಿಸಿದಂತೆ ಎಂದು ಎಂದು ಅದು ಆರೋಪಿಸಿದೆ. ಕಾಂಗ್ರೆಸ್ ಜತೆಗೆ ಮತ್ತಷ್ಟು ಪಕ್ಷಗಳು ಅಧಿವೇಶನವನ್ನು ಬಹಿಷ್ಕರಿಸಿವೆ.

Contact for any Electrical Works across Bengaluru

Loading...
error: Content is protected !!