ನ್ಯಾಯಾಂಗದ ಆಂತರಿಕ ವಿಚಾರಗಳನ್ನು ಕಾಂಗ್ರೆಸ್ ರಾಜಕೀಯಗೊಳಿಸುತ್ತಿದೆ |News Mirchi

ನ್ಯಾಯಾಂಗದ ಆಂತರಿಕ ವಿಚಾರಗಳನ್ನು ಕಾಂಗ್ರೆಸ್ ರಾಜಕೀಯಗೊಳಿಸುತ್ತಿದೆ

ಶುಕ್ರವಾರ ಸುಪ್ರೀಂ ಕೋರ್ಟ್ ನ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಪತ್ರಿಕಾಗೋಷ್ಠಿ ಕರೆದು ಸುಪ್ರೀಂ ಕೋರ್ಟ್ ಆಡಳಿತ ವೈಖರಿಯ ಕುರಿತು ಅಸಮಾಧಾನ ವ್ಯಕ್ತಪಡಿಸಿರುವುದು ಸುಪ್ರೀಂ ಕೋರ್ಟ್ ನ ಆಂತರಿಕ ವಿಚಾರ ಎಂದು ಬಿಜೆಪಿ ಹೇಳಿದೆ. ಈ ದೇಶದ ಸಂವಿಧಾನದ ಅಡಿಯಲ್ಲಿ ನ್ಯಾಯಾಂಗವು ಸ್ವತಂತ್ರವಾಗಿದ್ದು, ತನ್ನದೇ ಆದ ಆಂತರಿಕ ಕಾರ್ಯವಿಧಾನಗಳನ್ನು ಹೊಂದಿದೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಹೇಳಿದ್ದಾರೆ.

ಕಾಂಗ್ರೆಸ್ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ

ಆದರೆ ನ್ಯಾಯಾಂಗದ ಆಂತರಿಕ ವಿಚಾರಗಳನ್ನು ಕಾಂಗ್ರೆಸ್ ಪಕ್ಷವು ರಾಜಕೀಯಗೊಳಿಸುತ್ತಿದೆ ಎಂದು ಸಂಬಿತ್ ಪಾತ್ರಾ ಆರೋಪಿಸಿದ್ದಾರೆ. ಸತತವಾಗಿ ಜನರಿಂತ ತಿರಸ್ಕರಿಸಲ್ಪಡುತ್ತಿರುವ ಕಾಂಗ್ರೆಸ್ ತನ್ನ ರಾಜಕೀಯ ಲಾಭಕ್ಕಾಗಿ ಈ ವಿಚಾರವನ್ನು ಬಳಸಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಇಂದು ಸುಪ್ರೀಂ ಕೋರ್ಟ್ ಹಿರಿಯ ನ್ಯಾಯಮೂರ್ತಿಗಳಾದ ಜಸ್ಟೀಸ್ ಜೆ.ಚಲಮೇಶ್ವರ್ ಅವರು ಜಸ್ಟೀಸ್ ರಂಜನ್ ಗೊಗೋಯಿ, ಜಸ್ಟೀಸ್ ಮದನ್ ಬಿ ಲೋಕೂರ್ ಮತ್ತು ಜಸ್ಟೀಸ್ ಕುರಿಯನ್ ಜೋಸೆಫ್ ಅವರೊಂದಿಗೆ ಸೇರಿ ಪತ್ರಿಕಾಗೋಷ್ಠಿ ಕರೆದಿದ್ದರು. ತಮ್ಮ ಮನವಿಗಳಿಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸ್ಪಂದಿಸದ ಕಾರಣ ಅನ್ಯಮಾರ್ಗವಿಲ್ಲದೆ ಮಾಧ್ಯಮಗಳ ಮುಂದೆ ಬಂದಿದ್ದೇವೆ ಎಂದು ನಾಲ್ವರು ನ್ಯಾಯಮೂರ್ತಿಗಳು ಹೇಳಿದ್ದರು.

English Summary: The Bharatiya Janata Party on Friday said the press conference held by four Supreme Court judges raising concerns against the administration of the top court was an internal matter of the court. BJP Spokesperson Sambit Patra accused the Congress of politicising internal matters of the judiciary.

Get Latest updates on WhatsApp. Send ‘Subscribe’ to 8550851559

Loading...
loading...
error: Content is protected !!