2019 ಮರೆತುಬಿಡಿ, 2090 ರಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ |News Mirchi

2019 ಮರೆತುಬಿಡಿ, 2090 ರಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ

2019 ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮಾತಿಗೆ ಟಾಂಗ್ ನೀಡಿರುವ ವೆಂಕಯ್ಯನಾಯ್ಡು, ಕಾಂಗ್ರೆಸ್ ಉಪಾಧ್ಯಕ್ಷರು ಹಗಲುಗನಸು ಕಾಣುತ್ತಿದ್ದಾರೆ, 2019 ರಲ್ಲಿ ಅಧಿಕಾರಕ್ಕೆ ಬರುವುದನ್ನು ಮರೆತುಬಿಡಿ, 2090 ರಲ್ಲೂ ಅವರು ಅಧಿಕಾರಕ್ಕೆ ಬರುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

2019 ರಲ್ಲಿ ಅಚ್ಚೇ ದಿನ್ ಬರುತ್ತದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ಹೇಳಿದ್ದು ಕೇಳಿ ಆಶ್ಚರ್ಯವಾಗುತ್ತಿದೆ. ಕಾಂಗ್ರೆಸ್ ಪಾಲಿಗೆ ಅಚ್ಚೇ ದಿನ್ ಎಂದರೆ ಏನು ಎಂದು ಪ್ರಶ್ನಿಸಿದ ವೆಂಕಯ್ಯನಾಯ್ಡು, ಹಗರಣಗಳು, ನಿಷ್ಕ್ರಿಯತೆ, ಬೆಲೆ ಏರಿಕೆ, ಎಲ್ಲಾ ಪರಿಸ್ಥಿತಿಗಳನ್ನು ಹಗುರಾಗಿ ಕಾಣುವುದು ಮುಂತಾದವು ಕಾಂಗ್ರೆಸ್ ನ ಸ್ವತ್ತುಗಳು ಎಂದು ಲೇವಡಿ ಮಾಡಿದರು.

ಇದಕ್ಕೂ ಮೊದಲು ಕಾಂಗ್ರೆಸ್ ನ “ಜನ್ ವೇದನಾ ಸಮ್ಮೇಳನ” ಉದ್ದೇಶಿಸಿ ಮಾತನಾಡಿದ್ದ ರಾಹುಲ್ “2019 ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಅಚ್ಚೇ ದಿನ್ ಬರುತ್ತವೆ” ಎಂದು ಹೇಳಿದ್ದರು.

Loading...
loading...
error: Content is protected !!