ಪಪ್ಪು ಮುಕ್ತ ಭಾರತ, ಇದು ಕಾಂಗ್ರೆಸ್ ನಾಯಕನ ಗುರಿ! – News Mirchi

ಪಪ್ಪು ಮುಕ್ತ ಭಾರತ, ಇದು ಕಾಂಗ್ರೆಸ್ ನಾಯಕನ ಗುರಿ!

ನವದೆಹಲಿ: ಇತ್ತೀಚೆಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ವಾಟ್ಸಾಪ್ ಗ್ರೂಪ್ ನಲ್ಲಿ “ಪಪ್ಪು” ಎಂದು ಕರೆದು ಪಕ್ಷದಿಂದ ಬಹಿಷ್ಕಾರಗೊಂಡ ಮೀರತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ್ ಪ್ರಧಾನ್ ಎಂಬ ವ್ಯಕ್ತಿ, ಈಗ ಕಾಂಗ್ರೆಸ್ ಅನ್ನು ಈಗ ಸಂಪೂರ್ಣ ತ್ಯಜಿಸಿದ್ದಾರೆ. ತಾನು ಪಕ್ಷದಿಂದ ಹೊರನಡೆಯುತ್ತಿದ್ದು, ಶೀಘ್ರದಲ್ಲೇ ಪಪ್ಪು ಮುಕ್ತ ಭಾರತ (ರಾಹುಲ್ ಗಾಂಧಿ ಮುಕ್ತ ಭಾರತ) ಎಂಬ ಘೋಷಣೆಯೊಂದಿಗೆ ಚಳುವಳಿಯನ್ನು ಆರಂಭಿಸುತ್ತೇನೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಮುಕ್ತ ಭಾರತ ಎಂಬುದು ಬಿಜೆಪಿಯ ಘೋಷಣೆ, ಅದೇ ರೀತಿಯಲ್ಲಿ ಪಪ್ಪು ಮುಕ್ತ ಭಾರತ ಎಂಬ ಘೋಷಣೆಯೊಂದಿಗೆ ವ್ಯಾಪಕ ಪ್ರಚಾರ ನಡೆಸುತ್ತೇನೆ ಎಂದು ಹೇಳಿದ್ದಾರೆ. ಅಂದ ಹಾಗೆ ವಿನಯ್ ಪ್ರಧಾನ್ ಕಾಂಗ್ರೆಸ್ ನಲ್ಲಿ 22 ವರ್ಷಗಳ ಕಾಲ ಕಾಂಗ್ರೆಸ್ ನಲ್ಲಿ ಕೆಲಸ ಮಾಡಿದ್ದರು.

ಸದ್ಯ ಕಾಂಗ್ರೆಸ್ ತ್ಯಜಿಸಿರುವ ವಿನಯ್ ಪ್ರಧಾನ್, ಮುಂದೆ ಬಿಜೆಪಿ ಸೇರುತ್ತಾರಾ ಅಥವಾ ಬೇರೆ ಪಕ್ಷ ಸೇರುತ್ತಾರಾ ಎಂಬ ಬಗ್ಗೆ ಸ್ಪಷ್ಟ ಉತ್ತರ ನೀಡಿಲ್ಲ. ಪಪ್ಪು ಮುಕ್ತ ಭಾರತ ಎಂಬ ಘೋಷಣೆಯೊಂದಿಗೆ ಯಾವ ರೀತಿ ಮುಂದೆ ಸಾಗುತ್ತಾರೋ ಎಂಬುದನ್ನೂ ವಿವರಿಸಲಿಲ್ಲ. ಆದರೆ, ಕಾಂಗ್ರೆಸ್ ಪಕ್ಷದಲ್ಲಿ ಹಲವು ನಾಯಕರು ತನ್ನ ಗುರಿಗಾಗಿ ಸಹಕರಿಸಲು ಸಿದ್ಧರಾಗಿದ್ದಾರೆ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಸುತ್ತಲೂ ಸೈಕೋಗಳು ಇದ್ದಾರೆ ಎಂದು ಆರೋಪಿಸಿದ ವಿನಯ್ ಪ್ರಧಾನ್, ಅಂತಹವರಿಂದಲೇ ಕಾಂಗ್ರೆಸ್ ಮುಕ್ ಭಾರತ ಕೂಡಾ ಸಾಧ್ಯವಾಗುತ್ತದೆ ಎಂದು ಹೇಳಿದರು.

Loading...