ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಹತ್ಯೆಗೆ ಸಂಚು ರೂಪಿಸಿದ್ದ 10 ಉಗ್ರರಿಗೆ ಗಲ್ಲು ಶಿಕ್ಷೆ – News Mirchi

ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಹತ್ಯೆಗೆ ಸಂಚು ರೂಪಿಸಿದ್ದ 10 ಉಗ್ರರಿಗೆ ಗಲ್ಲು ಶಿಕ್ಷೆ

ಢಾಕಾ: ಬಾಂಗ್ಲಾದೇಶ ಪ್ರಧಾನಮಂತ್ರಿ ಶೇಖ್ ಹಸೀನಾ ಹತ್ಯೆ ಸಂಚು ರೂಪಿಸಿದ್ದರೆಂಬ ಆರೋಪದ ಮೇಲೆ ಹತ್ತು ಉಗ್ರರಿಗೆ ಅಲ್ಲಿನ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ. ಉಳಿದ 9 ಜನರಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನಿಡಿದೆ.

2000 ರಲ್ಲಿ ಅಂದಿನ ಪ್ರತಿಪಕ್ಷ ನಾಯಕಿಯಾಗಿದ್ದ ಶೇಖ್ ಹಸೀನಾ ಅವರ ಚುನಾವಣಾ ಪ್ರಚಾರದಲ್ಲಿ ಗೋಪಾಲ್ ಗಂಜ್ ಜಿಲ್ಲೆಯಲ್ಲಿನ ಕಾಲೋಜೊಂದರ ಮೈದಾನದಲ್ಲಿ ಜನರನ್ನುದ್ದೇಶಿಸಿ ಭಾಷಣಕ್ಕೆ ಸಿದ್ಧತೆ ನಡೆಸಲಾಗಿತ್ತು. ಆದರೆ ಆಕೆಯ ಭಾಷಣಕ್ಕೆ ಒಂದು ದಿನ ಮೊದಲು ಉಗ್ರರು ವೇದಿಕೆಯ ಸಮೀಪ 76 ಕೆಜಿ ಬಾಂಬ್ ಅಳವಡಿಸಿದ್ದರು. ಪೊಲೀಸರು ಪರಿಶೀಲನೆ ನಡೆಸಿದ ವೇಳೆ ಈ ಬಾಂಬ್ ಪತ್ತೆಯಾಗಿತ್ತು.

ಹೀಗಾಗಿ ಶೇಖ್ ಹಸೀನಾ ಅವರ ಹತ್ಯೆ ಸಂಚು ರೂಪಿಸಿದ್ದರೆಂಬ ಆರೋಪದ ಮೇಲೆ ಹರ್ಕತ್ ಉಲ್ ಜಿಹಾದ್ ಅಲ್ ಇಸ್ಲಾಮಿ ಅಧ್ಯಕ್ಷ ಮುಫ್ತೀ ಹನ್ನನ್ ಸೇರಿ ಹಲವರನ್ನು ಪೊಲೀಸರು ಬಂಧಿಸಿದ್ದರು. ಈ ಘಟನೆಗೆ ಸಂಬಂಧಿಸಿದಂತೆ 8 ಜನರನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದು, ಇನ್ನೂ 15 ಜನ ತಲೆಮರೆಸಿಕೊಂಡಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಫ್ತೀ ಹನನ್ ನನ್ನು 2005 ರಲ್ಲಿ ಬಂಧಿಸಿ 2017 ರಲ್ಲಿ ನೇಣಿಗೇರಿಸಿದ್ದರು. ಬ್ರಿಟೀಶ್ ಹೈಕಮೀಷನರ್ ಮೇಲೆ ಗ್ರೆನೇಡ್ ದಾಳಿಯಲ್ಲಿ ಪ್ರಮುಖ ಆರೋಪಿಯಾಗಿದ್ದ ಹನ್ನನ್, ದೇಶಾದ್ಯಂತ ಬಾಂಬ್ ಸ್ಪೋಟಗಳಿಗೆ ಯೋಜನೆ ರೂಪಿಸಿದ್ದ ಆರೋಪಗಳಿವೆ.

Loading...