ದೇವರ ಕುರಿತು ವಿವಾದಿತ ಜಾಹೀರಾತು, ಆಕ್ರೋಶಿತರಿಂದ ಸಲೂನ್ ಧ್ವಂಸ |News Mirchi

ದೇವರ ಕುರಿತು ವಿವಾದಿತ ಜಾಹೀರಾತು, ಆಕ್ರೋಶಿತರಿಂದ ಸಲೂನ್ ಧ್ವಂಸ

ದೇವರೂ ಕೂಡಾ ನನ್ನ ಜೆಹೆಚ್ ಸಲೂನಿಗೆ ಭೇಟಿ ಕೊಡ್ತಾರೆ ಎಂದು ಜಾಹೀರಾತು ನೀಡಿ ವಿವಾದಕ್ಕೊಳಗಾಗಿದ್ದ ಉತ್ತರಪ್ರದೇಶದ ಉನ್ನಾವ್ ನಲ್ಲಿನ ಜಾವೇದ್ ಹಬೀಬ್ ಗೆ ಸೇರಿದ ಸಲೂನನ್ನು ಶನಿವಾರ ಹಿಂದೂ ಜಾಗರಣ್ ಮಂಚ್ ಸದಸ್ಯರು ಧ್ವಂಸಗೊಳಿಸಿದ್ದಾರೆ. ಅಷ್ಟೇ ಅಲ್ಲದೆ ಸಲೂನ್ ಮುಚ್ಚುವಂತೆ ಎಚ್ಚರಿಕೆ ನೀಡಿದ್ದು, ವ್ಯಾಪಾರ ಮಾಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಹಿಂದೂ ದೇವತೆಗಳು ಹೇರ್ ಕಟಿಂಗ್ ಗೆ ಬಂದಂತೆ, ಹಣವನ್ನು ಎಣಿಸುತ್ತಿರುವ ಮತ್ತು ಜಾವೇದ್ ಹಬೀಬ್ ಸಲೂನಿನಲ್ಲಿ ಮೇಕಪ್ ಮಾಡಿಕೊಳ್ಳುತ್ತಿರುವಂತೆ ಚಿತ್ರಿಸಿದ್ದ ಜಾಹೀರಾತಿಗೆ “ದೇವರೂ ಜೆಹೆಚ್ ಸಲೂನಿಗೆ ಭೇಟಿ ನೀಡುತ್ತಾರೆ” ಎಂದು ಕ್ಯಾಪ್ಷನ್ ನೀಡಲಾಗಿತ್ತು. ಇದು ವಿವಾದವಾಗಿ ನಂತರ ಜಾವೇದ್ ಕ್ಷಮೆಯಾಚಿಸಿದ್ದರು. ಶುಕ್ರವಾರ ಆತನ ವಿರುದ್ಧ ಪೊಲೀಸ್ ದೂರು ದಾಖಲಾಗಿತ್ತು.

Loading...
loading...
error: Content is protected !!