ಗೌರಿ ಲಂಕೇಶ್ ಹತ್ಯೆ ವೃತ್ತಿಪರ ಹಂತಕರ ಕೃತ್ಯ ಶಂಕೆ |News Mirchi

ಗೌರಿ ಲಂಕೇಶ್ ಹತ್ಯೆ ವೃತ್ತಿಪರ ಹಂತಕರ ಕೃತ್ಯ ಶಂಕೆ

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ವೃತ್ತಿಪರ ಬಾಡಿಗೆ ಹಂತಕರು ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಕೃತ್ಯ ಸೆರೆಯಾಗಿರಬಹುದು ಎಂದು ಪೊಲೀಸರು ಹೇಳುತ್ತಿದ್ದು, ಸಿಸಿಟಿವಿ ಅನ್ಲಾಕ್ ಮಾಡಲು ಅನುಮತಿ ಕೇಳಿದ್ದಾರೆ.

ಗೌರಿ ಲಂಕೇಶ್ ಮನೆಯ ಸುತ್ತಮುತ್ತ ಖಾಲಿ ನಿವೇಶನಗಳಿರುವುದರಿಂದ ಆಕೆಯ ಕುಟುಂಬ ಸದಸ್ಯರು ಸಿಸಿಟಿವಿ ಅಳವಡಿಸುವಂತೆ ಆಕೆಗೆ ಸಲಹೆ ನೀಡಿದ್ದರು ಎನ್ನಲಾಗಿದೆ.

ಎರಡು ವರ್ಷಗಳ ಹಿಂದೆ ಹತ್ಯೆಯಾದ ಡಾ. ಎಂ.ಎಂ.ಕಲಬುರ್ಗಿ ಅವರ ಪ್ರಕರಣಕ್ಕೂ ಗೌರಿ ಹತ್ಯೆಗೂ ಸಾಮ್ಯತೆ ಇದೆ ಎಂದು ಗೌರಿ ಲಂಕೇಶ್ ಆಪ್ತ ಬಳಗ ಹೇಳುತ್ತಿದೆ.

ಮಂಗಳವಾರ ರಾತ್ರಿ ಮನೆಯನ್ನು ಪ್ರವೇಶಸುವ ಸಮಯದಲ್ಲಿ ದುಷ್ಕರ್ಮಿಗಳು ಗೌರಿ ಲಂಕೇಶ್ ಮೇಲೆ ಏಳು ಗುಂಡು ಹಾರಿಸಿದ್ದು, ಅವುಗಳಲ್ಲಿ ಮೂರು ಗುಂಡು ಗೌರಿ ದೇಹ ಹೊಕ್ಕಿದ್ದು, ಅವರು ಸ್ಥಳದಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿದ್ದರು.

Loading...
loading...
error: Content is protected !!