ಬಾಯ್ ಫ್ರೆಂಡ್‌ಗಾಗಿ ಕಳ್ಳಿಯಾದಳು |News Mirchi

ಬಾಯ್ ಫ್ರೆಂಡ್‌ಗಾಗಿ ಕಳ್ಳಿಯಾದಳು

ಹೈದರಾಬಾದ್: ತನ್ನ ಪ್ರಿಯಕರ ಹಣವಿಲ್ಲದೆ ಒದ್ದಾಡುತ್ತಿರುವುದನ್ನು ಕಂಡ 19 ವರ್ಷದ ಯುವತಿ, ಹಣಕ್ಕಾಗಿ ಕಳ್ಳತನದ ದಾರಿ ಹಿಡಿದು ಪೊಲೀಸ್ ಅತಿಥಿಯಾಗಿದ್ದಾಳೆ. ಹೈದರಾಬಾದಿನ ಮಾರುತಿ ನಗರದ ನಿವಾಸಿ ಸಾಯಿ ಕಿರಣ್ಮಯಿ ಎಂಬ ಯುವತಿಗೆ ಜಿಮ್ ತರಬೇತುದಾರನೊಂದಿಗೆ ಪ್ರೇಮಾಂಕುರವಾಗಿದೆ. ಸದಾ ಹಣವಿಲ್ಲದೆ ಒದ್ದಾಡುತ್ತಿದ್ದ ತನ್ನ ಪ್ರಿಯಕರನ ಪರಿಸ್ಥಿತಿಯನ್ನು ನೋಡಲಾರದೆ ಒಂದು ಉಪಾಯ ಮಾಡಿದಳು. ಅದಕ್ಕೆ ಪ್ರಿಯಕರನ ಒಪ್ಪಿಗೆಯೂ ಸಿಕ್ಕಿತು.

ಪ್ರಿಯಕರನ ಸಲಹೆಯೊಂದಿಗೆ ಕಿರಣ್ಮಯಿ ಫೇಸ್ ಬುಕ್ ನಲ್ಲಿ ತನ್ನ ಹೆಸರಿನಲ್ಲಿ ಖಾತೆ ತೆರೆದು ಮಹಿಳೆಯರು, ತನ್ನ ವಯಸ್ಸಿನ ಯುವತಿಯರೊಂದಿಗೆ ಸ್ನೇಹ ಗಳಿಸಿದಳು. ಆಗಾಗ ಅವರ ಮನೆಗಳಿಗೆ ಹೋಗಿ ಬಂದು ವಿಶ್ವಾಸ ಗಳಿಸಿದಳು.

ಕಳೆದ ಅಕ್ಟೋಬರ್ 30 ರಂದು ರಾಜೇಶ್ವರಿ ಎಂಬ ಮಹಿಳೆಯ ಮನೆಯಲ್ಲಿ ಚಿನ್ನ, ನಗದು ಕದ್ದಳು. ನವೆಂಬರ್ 2 ರಂದು ಸಂಧ್ಯಾ ಎಂಬ ಯುವತಿಯ ಮನೆಯಲ್ಲಿ ಚಿನ್ನದ ಸರ, ಡೆಬಿಟ್ ಕಾರ್ಡ್ ಎಗರಿಸಿದಳು. ಡೆಬಿಟ್ ಕಾರ್ಡ್ ಬಳಸಿ 30 ಸಾವಿರ ಹಣ ಡ್ರಾ ಮಾಡಿ ಏನೂ ಅರಿಯದವಳಂತೆ ಡೆಬಿಟ್ ಜಾರ್ಡನ್ನು ಸಂಧ್ಯ ಮನೆಯಲ್ಲೇ ವಾಪಸ್ ಇಟ್ಟಳು. ಆದರೆ ನಂತರ ಅನುಮಾನಗೊಂಡ ಸಂಧ್ಯಾ, ಪೊಲೀಸರಿಗೆ ದೂರು ನೀಡಿದ್ದಳು. ಪೊಲೀಸರು ಕಿರಣ್ಮಯಿ ಮತ್ತು ಆಕೆಯ ಪ್ರಿಯಕರ ಯಶ್ವಂತ್ ನನ್ನು ಬಂಧಿಸಿದ್ದಾರೆ.

Loading...
loading...
error: Content is protected !!