ಶಶಿಕಲಾ ಪಿಟೀಷನ್ ತಿರಸ್ಕರಿಸಿದ ಕೋರ್ಟ್ – News Mirchi

ಶಶಿಕಲಾ ಪಿಟೀಷನ್ ತಿರಸ್ಕರಿಸಿದ ಕೋರ್ಟ್

ವಿದೇಶೀ ವಿನಿಮಯ ಪ್ರಕರಣದಲ್ಲಿ ವೀಡಿಯೋ ಕಾನ್ಫರೆನ್ಸ್ ವಿಚಾರಣೆ ಹಿನ್ನೆಲೆಯಲ್ಲಿ ವಿಚಾರಣೆಗೂ ಮುನ್ನವೇ ಪ್ರಶ್ನೆಗಳ ಪಟ್ಟಿ ನೀಡುವಂತೆ ಕೋರಿದ್ದ ಶಶಿಕಲಾ ಮನವಿಯನ್ನು ಎಗ್ಮೂರ್ ಕೋರ್ಟ್ ತಿರಸ್ಕರಿಸಿದೆ.

ದಿವಂಗತ ಮುಖ್ಯಮಂತ್ರಿ ಜಯಲಲಿತಾ ಆಪ್ತ ಗೆಳತಿ ಶಶಿಕಲಾ ವಿರುದ್ಧ ಇರುವ ಕೇಸುಗಳಲ್ಲಿ ವಿದೇಶಿ ವಿನಿಮಯ ಕೇಸು ಕೂಡಾ ಒಂದು. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ವೇಳೆ, ಆಕೆಯ ಮೇಲಿರುವ ಇತರೆ ಕೇಸುಗಳ ವಿಚಾರಣೆಗಳೂ ವೇಗ ಪಡೆಯುತ್ತಿವೆ. ಇದರಲ್ಲಿ 1996-2001 ರ ನಡುವೆ ಶಶಿಕಲಾ ಮೇಲೆ ಜಾರಿ ನಿರ್ದೇಶನಾಲಯ ದಾಖಲಿಸಿ ಕೇಸುಗಳ ಸಂಖ್ಯೆಯೇ 5. ಜಯ ಟಿವಿ ಗೆ ವಿದೇಶಗಳಿಂದ ಉಪಕರಣಗಳನ್ನು ಖರೀದಿಸುವಾಗ ನಡೆದ ವಿದೇಶಿ ವಿನಿಮಯಕ್ಕೆ ಸಂಬಂಧಿಸಿದಂತೆ ಪ್ರಕರಣವೊಂದರ ವಿಚಾರಣೆ ಎಗ್ಮೂರ್ ಕೋರ್ಟ್ ನಲ್ಲಿ ನಡೆಯುತ್ತಿದೆ.

ಕೋರ್ಟ್ ಗೆ ಶಶಿಕಲಾ ನೇರವಾಗಿ ಹಾಜರಾಗಬೇಕಿದ್ದರೂ, ಜೈಲು ಶಿಕ್ಷೆಯ ಹಿನ್ನೆಲೆಯಲ್ಲಿ ಹಾಜರಾಗಲು ಸಾಧ್ಯವಿಲ್ಲ. ಹೀಗಾಗಿ ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಅನುಮತಿ ನೀಡುವಂತೆ ಶಶಿಕಲಾ ಮನವಿ ಮಾಡಿದ್ದರು. ವಿಚಾರಣೆಗೂ ಮುನ್ನ ಪ್ರಶ್ನೆಗಳ ಪಟ್ಟಿಯನ್ನು ಶಶಿಕಲಾ ಪಡೆಯಲು ಅವಕಾಶವಿದೆ ಎಂದು ಶಶಿಕಲಾ ಪರ ವಕೀಲರು ವಾದಿಸಿದರು. ಆದರೆ ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ, ವೀಡಿಯೋ ಕಾನ್ಫರೆನ್ಸ್ ವಿಚಾರಣೆಯಲ್ಲಿ ವಕೀಲರಿಗೆ ಕೆಲಸವೇ ಇಲ್ಲ ಎಂದು ಜಾರಿ ನಿರ್ದೇಶನಾಲಯ ವಾದಿಸಿತ್ತು.

ವೀಡಿಯೋ ಕಾನ್ಫರೆನ್ಸ್ ವಿಚಾರಣೆ ಕೋರ್ಟ್ ಮತ್ತು ಆರೋಪಿಗಳ ನಡುವೆ ಮಾತ್ರ ನಡೆಯುತ್ತದೆ ಎಂಬ ಅಂಶವನ್ನು ಪರಿಗಣಿಸಿ ಶಶಿಕಲಾ ಪಿಟೀಷನ್ ತಿರಸ್ಕರಿಸಬೇಕು ಎಂದು ಜಾರಿ ನಿರ್ದೇಶನಾಲಯ ಮನವ ಮಾಡಿತ್ತು. ಸೋಮವಾರ ಪಿಟೀಷನ್ ಕುರಿತು ನ್ಯಾಯಮೂರ್ತಿ ಜಾಕೀರ್ ಹುಸ್ಸೇನ್ ತೀರ್ಪು ನೀಡಿದ್ದಾರೆ. ಶಶಿಕಲಾ ಪರ ಪಿಟೀಷನ್ ವಿಚಾರಣೆಗೆ ಯೋಗ್ಯವಲ್ಲ ಎಂದು ಸ್ಪಷ್ಟಪಡಿಸಿದರು.

Loading...